ಹಿಂದೂ ಧರ್ಮದಲ್ಲಿ, ಪ್ರತಿ ವರ್ಷ ಮಾಘ ಮಾಸದ ಅಮಾವಾಸ್ಯೆಯನ್ನು ಪುಷ್ಯ ಅಮಾವಾಸ್ಯೆ ಅಥವಾ ಮೌನಿ ಅಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ವರ್ಷ ಮೌನಿ ಅಮಾವಾಸ್ಯೆಯನ್ನು ಫೆ. 9 ರಂದು ಶುಕ್ರವಾರ ಆಚರಿಸಲಾಗುತ್ತದೆ. ಈ ದಿನ, ನದಿ ಸ್ನಾನ, ದಾನ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದಲ್ಲದೆ ಈ ದಿನ ಪೂಜೆ ಮತ್ತು ದಾನ ಧರ್ಮಗಳನ್ನು ಮಾಡುವುದರಿಂದ ಪೂರ್ವಜರ ಆಶೀರ್ವಾದ ಪಡೆಯಬಹುದು ಎಂದು ನಂಬಲಾಗಿದೆ, ಆದರೆ ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ನಿಮಗೆ ತಿಳಿದಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.
-ಈ ದಿನ ವಿಶೇಷವಾಗಿ, ಮೌನದ ಉಪವಾಸವನ್ನು ಜನರು ಆಚರಿಸುತ್ತಾರೆ. ಹಾಗಾಗಿ ಏಕಾಂತದಲ್ಲಿ ಇದ್ದು ಅವರು ತಮ್ಮ ಮನಸ್ಸನ್ನು ಶಾಂತ ಮತ್ತು ಧ್ಯಾನದ ಸ್ಥಿತಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ.
-ಉಪವಾಸ ಮಾಡುವವರು ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸಬೇಕು. ಜೊತೆಗೆ ಶಿವನಿಗೆ ಬಿಲ್ವ ಪತ್ರೆ ಅರ್ಪಿಸಿ, ರುದ್ರಾಭಿಷೇಕ ಮಾಡಬೇಕು.
-ಮೌನಿ ಅಮಾವಾಸ್ಯೆಯಂದು ದಾನ ಮಾಡುವುದು ಸಹ ಒಳ್ಳೆಯದು. ಇನ್ನು ಬ್ರಾಹ್ಮಣರಿಗೆ, ಗುರುಜನರಿಗೆ, ಯತಿಗಳಿಗೆ ಮತ್ತು ಬಡವರಿಗೆ ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ.
-ಕೆಲವರು ಈ ದಿನ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ.
-ಸಾಧ್ಯವಾದರೆ ಶಿವ ಮತ್ತು ವಿಷ್ಣು ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಮಾಡಿಸಿ.
-ಮೌನಿ ಅಮಾವಾಸ್ಯೆಯ ದಿನದಂದು ನದಿಯಲ್ಲಿ ಸ್ನಾನ ಮಾಡಿದ ನಂತರ, ಕೆಲವು ಧಾನ್ಯಗಳನ್ನು ಬ್ರಾಹ್ಮಣರಿಗೆ ದಾನ ಮಾಡುವುದು ಒಳ್ಳೆಯದು.
-ಈ ದಿನ ನೀವು ಹಸುವಿನ ಹಾಲನ್ನು ದಾನ ಮಾಡಿದರೆ, ಪೂರ್ವಜರು ತೃಪ್ತರಾಗುತ್ತಾರೆ ಎಂಬ ನಂಬಿಕೆ ಇದೆ.
-ಈ ದಿನ ಅಗತ್ಯವಿರುವವರಿಗೆ ಸಾಸಿವೆ ಎಣ್ಣೆಯನ್ನು ದಾನ ಮಾಡುವುದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ. ಅದಲ್ಲದೆ ಈ ದಿನದಂದು ಎಳ್ಳೆಣ್ಣೆ, ಅಕ್ಕಿ ಮತ್ತು ನೆಲ್ಲಿಕಾಯಿಯನ್ನು ದಾನ ಮಾಡುವುದು ಸಹ ಶುಭವೆಂದು ಪರಿಗಣಿಸಲಾಗಿದೆ.
-ಈ ದಿನ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬಡವರಿಗೆ ಹಣವನ್ನು ನೀಡಿ. ಇದರಿಂದ ನಿಮ್ಮ ಜಾತಕದ ದೋಷ ನಿವಾರಣೆಯಾಗುತ್ತದೆ. ಪುಣ್ಯ ಫಲವೂ ಪ್ರಾಪ್ತಿಯಾಗುತ್ತದೆ.
ಇದನ್ನೂ ಓದಿ: ದರ್ಶ ಅಮಾವಾಸ್ಯೆಯಂದು ಪಿತೃ ದೋಷ ನಿವಾರಣೆಗೆ ಈ ವಿಧಾನಗಳನ್ನು ಅನುಸರಿಸಿ
-ಮೌನಿ ಅಮಾವಾಸ್ಯೆಯ ದಿನದಂದು ಉಪವಾಸ ಮಾಡುವವರು ಹೆಚ್ಚು ಮಾತನಾಡಬಾರದು.
-ಉಪವಾಸ ಮಾಡುವವರು ಮಾಂಸಾಹಾರ ಸೇವನೆ ಮಾಡಬಾರದು.
-ಈ ದಿನವನ್ನು ಆಚರಣೆ ಮಾಡುವವರು ಕೆಟ್ಟ ಮಾತುಗಳನ್ನು ಆಡಬಾರದು, ಮತ್ತೊಬ್ಬರಿಗೆ ನೋವು ಉಂಟುಮಾಡುವ ಕೆಲಸ ಮಾಡಬಾರದು.
-ಉಪವಾಸ ಆಚರಣೆ ಮಾಡಿ ಅರ್ಧಕ್ಕೆ ಮೊಟಕುಗೊಳಿಸಬಾರದು.
-ಅಕ್ಕಿಯಿಂದ ಮಾಡಿದ ಯಾವುದೇ ಆಹಾರಗಳನ್ನು ಕೂಡ ಸೇವನೆ ಮಾಡಬಾರದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ