Money Plant in Vastu: ಮನೆಯಲ್ಲಿ ಮನಿ ಪ್ಲಾಂಟ್ ಇಡುವ ಮುನ್ನ ಈ ವಾಸ್ತು ನಿಯಮ ತಿಳಿದಿರಲಿ; ತಜ್ಞರ ಸಲಹೆ ಇಲ್ಲಿದೆ

ಮನೆಯಲ್ಲಿ ಮನಿ ಪ್ಲಾಂಟ್ ಇಡುವುದು ವಾಸ್ತು ಪ್ರಕಾರ ಧನಾತ್ಮಕ ಶಕ್ತಿ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ಹಸಿರು ಬುಧನ ಸಂಕೇತವಾಗಿದ್ದು, ಇದು ಸಮೃದ್ಧಿ ತರುತ್ತದೆ. ಸರಿಯಾದ ಸ್ಥಳದಲ್ಲಿ ಇಡುವುದು, ಒಣಗದಂತೆ ನೋಡಿಕೊಳ್ಳುವುದು, ಹಾಗೂ ಉಡುಗೊರೆಯಾಗಿ ನೀಡದಿರುವುದು ಮುಖ್ಯ. ಬಾಲ್ಕನಿ ಅಥವಾ ಟೆರೇಸ್‌ನಲ್ಲಿ ಇಡುವುದು ಶುಭ, ಇದು ಮನೆಗೆ ಪ್ರಶಾಂತತೆ ಮತ್ತು ನೆಮ್ಮದಿಯನ್ನು ತರುತ್ತದೆ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

Money Plant in Vastu: ಮನೆಯಲ್ಲಿ ಮನಿ ಪ್ಲಾಂಟ್ ಇಡುವ ಮುನ್ನ ಈ ವಾಸ್ತು ನಿಯಮ ತಿಳಿದಿರಲಿ; ತಜ್ಞರ ಸಲಹೆ ಇಲ್ಲಿದೆ
ಮನಿ ಪ್ಲಾಂಟ್ ವಾಸ್ತು

Updated on: Dec 10, 2025 | 10:22 AM

ಮನೆಯಲ್ಲಿ ಮನಿ ಪ್ಲಾಂಟ್ ಇಡುವ ಕುರಿತು ವಾಸ್ತು ಶಾಸ್ತ್ರದ ಮಹತ್ವ ಮತ್ತು ಪ್ರಮುಖ ನಿಯಮಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಹಸಿರು ಬಣ್ಣವು ಬುಧ ಗ್ರಹದ ಸಂಕೇತವಾಗಿದೆ. ಬುಧಾಂಶವು ಮನೆಯಲ್ಲಿ ಹೆಚ್ಚಿದಾಗ ಧನಾತ್ಮಕ ಶಕ್ತಿ, ಶಾಂತಿ ಮತ್ತು ಸಂತೋಷ ಹೆಚ್ಚಾಗುತ್ತದೆ. ಮನೆಯಲ್ಲಿ ಹಸಿರು ಬಣ್ಣದ ಕಾರ್ಪೆಟ್, ಮ್ಯಾಟ್ ಅಥವಾ ಸಸ್ಯಗಳನ್ನು ಇಡುವುದರಿಂದ ಸಕಾರಾತ್ಮಕ ಲಹರಿಗಳು ಆಕರ್ಷಿತವಾಗುತ್ತವೆ. ಈ ನಿಟ್ಟಿನಲ್ಲಿ ಮನಿ ಪ್ಲಾಂಟ್ ಒಂದು ಪ್ರಮುಖ ಪಾತ್ರ ವಹಿಸುತ್ತದೆ.

ಮನಿ ಪ್ಲಾಂಟ್ ಅನ್ನು ಮನೆಯಲ್ಲಿ, ಕಚೇರಿಯಲ್ಲಿ ಅಥವಾ ಯಾವುದೇ ಆಶ್ರಮದಲ್ಲಿ ಇಡುವುದರಿಂದ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಆದರೆ, ಇದರ ಪೂರ್ಣ ಪ್ರಯೋಜನಗಳನ್ನು ಪಡೆಯಲು ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ಮೊದಲನೆಯದಾಗಿ, ಮನಿ ಪ್ಲಾಂಟ್ ಅನ್ನು ಎಂದಿಗೂ ಒಣಗದಂತೆ ನೋಡಿಕೊಳ್ಳಬೇಕು. ಬರೀ ನೀರು ಹಾಕಿದರೆ ಸಾಕು, ಅದು ಬಳ್ಳಿಯಾಗಿ ಹಬ್ಬುತ್ತದೆ. ಒಣಗಿದ ಎಲೆಗಳು ನಕಾರಾತ್ಮಕ ಪ್ರಭಾವ ಬೀರುತ್ತವೆ.

ವಿಡಿಯೋ ಇಲ್ಲಿದೆ ನೋಡಿ: 

ವಾಸ್ತು ಪ್ರಕಾರ, ಮನಿ ಪ್ಲಾಂಟ್ ಅನ್ನು ಟೆರೇಸ್ ಅಥವಾ ಬಾಲ್ಕನಿಗಳಲ್ಲಿ ಇಡುವುದು ಬಹಳ ಶುಭ. ಇದು ತೆರೆದ ವಾತಾವರಣದಲ್ಲಿ ಬೆಳೆಯುವುದರಿಂದ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಆದರೆ, ಪ್ರವೇಶ ದ್ವಾರದ ಹಿಂದೆ ಅಥವಾ ಮುಂದೆ, ಅಕ್ಕಪಕ್ಕದಲ್ಲಿ ಮನಿ ಪ್ಲಾಂಟ್ ಇಡುವುದು ಶುಭವಲ್ಲ. ಮನೆಯೊಳಗೆ ಪ್ರವೇಶಿಸುವಾಗ ಮನಿ ಪ್ಲಾಂಟ್ ಇಡಬಾರದು. ಹಾಗೆಯೇ, ಅಡುಗೆ ಮನೆಯಲ್ಲಿ ಮತ್ತು ಮಲಗುವ ಕೋಣೆಯಲ್ಲಿ ಮನಿ ಪ್ಲಾಂಟ್ ಇಡುವುದನ್ನು ವಾಸ್ತು ಶಾಸ್ತ್ರ ನಿಷೇಧಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದು ಪ್ರಮುಖ ನಿಯಮವೆಂದರೆ, ಮನಿ ಪ್ಲಾಂಟ್ ಅನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು ಅಥವಾ ಯಾರಿಂದಲೂ ಉಡುಗೊರೆಯಾಗಿ ಸ್ವೀಕರಿಸಬಾರದು. ಶುಭ ಕಾರ್ಯಗಳಲ್ಲಿ ಗಿಡಗಳನ್ನು ನೀಡುವುದು ರೂಢಿಯಲ್ಲಿದ್ದರೂ, ಮನಿ ಪ್ಲಾಂಟ್ ವಿಷಯದಲ್ಲಿ ಈ ನಿಯಮ ಅನ್ವಯಿಸುವುದಿಲ್ಲ. ಇದನ್ನು ನರ್ಸರಿಯಿಂದ ಹಣ ನೀಡಿ ಖರೀದಿಸಬೇಕು.

ಇದನ್ನೂ ಓದಿ: ವಾಸ್ತು ಪ್ರಕಾರ ಫ್ರಿಡ್ಜ್ ಮೇಲೆ ಈ ವಸ್ತುಗಳನ್ನು ಇಡಲೇಬಾರದು; ಸಮಸ್ಯೆ ತಪ್ಪಿದ್ದಲ್ಲ

ಮನಿ ಪ್ಲಾಂಟ್‌ನ ಬಳ್ಳಿ ನೇರವಾಗಿ ಸಮತಟ್ಟಾಗಿ ಹಬ್ಬಲು ಬಿಡಬಾರದು. ಅದು ಯಾವಾಗಲೂ ಊರ್ಧ್ವಮುಖವಾಗಿ, ಅಂದರೆ ಮೇಲಕ್ಕೆ ಬೆಳೆಯುವಂತೆ ವ್ಯವಸ್ಥೆ ಮಾಡಬೇಕು. ಇದು ಪ್ರಗತಿ ಮತ್ತು ಏಳಿಗೆಯನ್ನು ಸೂಚಿಸುತ್ತದೆ. ಮುಳ್ಳಿನ ಸಸ್ಯಗಳನ್ನು ಮನೆಯೊಳಗೆ, ಮೇಲೆ, ಕೆಳಗೆ ಅಥವಾ ಅಕ್ಕಪಕ್ಕದಲ್ಲಿ ಇಡಬಾರದು ಎಂದು ವಾಸ್ತು ಸ್ಪಷ್ಟವಾಗಿ ಹೇಳುತ್ತದೆ, ಏಕೆಂದರೆ ಅವು ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತವೆ.

ಹಣವು ನೇರವಾಗಿ ಮನಿ ಪ್ಲಾಂಟ್‌ನಿಂದ ಬರುವುದಿಲ್ಲ. ಬದಲಾಗಿ, ಮನೆಯಲ್ಲಿ ಪ್ರಶಾಂತತೆ, ಸಂತೋಷ ಮತ್ತು ನೆಮ್ಮದಿ ನೆಲೆಸಿದಾಗ ಸಂಪತ್ತು ಆಕರ್ಷಿತವಾಗುತ್ತದೆ. ಬುಧ ಗ್ರಹದ ಪ್ರಭಾವದಿಂದ ಬರುವ ಈ ಸಕಾರಾತ್ಮಕ ಶಕ್ತಿಯು ಹಸಿರು ಗಿಡಗಳಿಂದ, ವಿಶೇಷವಾಗಿ ಯಥೇಚ್ಛವಾಗಿ ಬೆಳೆಯುವ ಮನಿ ಪ್ಲಾಂಟ್‌ನಿಂದ ದೊರೆಯುತ್ತದೆ. ಈ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸದಾಕಾಲ ಸುಖ, ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಗೂರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:21 am, Wed, 10 December 25