Vastu Tips: ಮನೆಯಲ್ಲಿ ಔಷಧಿಗಳನ್ನು ಎಲ್ಲಿ ಇಡಬೇಕು ಮತ್ತು ಎಲ್ಲಿ ಇಡಬಾರದು? ವಾಸ್ತು ಸಲಹೆ ಇಲ್ಲಿದೆ
ಸಾಮಾನ್ಯವಾಗಿ ಜನರು ಔಷಧಿಗಳನ್ನು ತಮ್ಮ ದಿಂಬಿನ ಕೆಳಗೆ ಅಥವಾ ಬದಿಯಲ್ಲಿ ಇಡುತ್ತಾರೆ, ಆದರೆ ವಾಸ್ತು ಶಾಸ್ತ್ರದ ಪ್ರಕಾರ ಈ ಅಭ್ಯಾಸ ಸರಿಯೇ? ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಔಷಧಿಗಳನ್ನು ಸಂಗ್ರಹಿಸುವ ವಿಧಾನವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮನೆಯಲ್ಲಿ ಔಷಧಿಗಳನ್ನು ಎಲ್ಲಿ ಇಡಬೇಕು ಮತ್ತು ಎಲ್ಲಿ ಇಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಾಸ್ತು ಶಾಸ್ತ್ರವನ್ನು ಮಾನವ ಜೀವನದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಮನೆ ನಿರ್ಮಿಸುವುದರಿಂದ ಹಿಡಿದು ಅದರಲ್ಲಿ ವಾಸಿಸುವವರೆಗೆ ಎಲ್ಲದಕ್ಕೂ ನಿಯಮಗಳನ್ನು ಇದು ವಿವರಿಸುತ್ತದೆ. ಅದರಂತೆ ಮನೆಯಲ್ಲಿ ಔಷಧಿಗಳನ್ನು ಸಂಗ್ರಹಿಸುವ ನಿಯಮಗಳ ಬಗ್ಗೆಯೂ ವಾಸ್ತು ಶಾಸ್ತ್ರವು ವಿವರವಾಗಿ ವಿವರಿಸುತ್ತದೆ. ಸಾಮಾನ್ಯವಾಗಿ ಜನರು ಔಷಧಿಗಳನ್ನು ತಮ್ಮ ದಿಂಬಿನ ಕೆಳಗೆ ಅಥವಾ ಬದಿಯಲ್ಲಿ ಇಡುತ್ತಾರೆ, ಆದರೆ ವಾಸ್ತು ಶಾಸ್ತ್ರದ ಪ್ರಕಾರ ಈ ಅಭ್ಯಾಸ ಸರಿಯೇ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಔಷಧಿಗಳನ್ನು ಎಲ್ಲಿ ಇಡಬಾರದು?
ವಾಸ್ತು ಪ್ರಕಾರ, ಮನೆಯಲ್ಲಿ ಔಷಧಿಗಳನ್ನು ಇಡುವ ದಿಕ್ಕಿಗೆ ವಿಶೇಷ ಗಮನ ನೀಡಬೇಕು. ಮನೆಯ ಆಗ್ನೇಯ ದಿಕ್ಕಿನಲ್ಲಿ ಔಷಧಿಗಳನ್ನು ಎಂದಿಗೂ ಇಡಬಾರದು. ಈ ದಿಕ್ಕಿನಲ್ಲಿ ಔಷಧಿಗಳನ್ನು ಇಡುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ವಾಸಿಯಾಗುವುದಿಲ್ಲ ಎಂದು ನಂಬಲಾಗಿದೆ. ಅದರಂತೆ ಮನೆಯ ಪಶ್ಚಿಮ ದಿಕ್ಕಿನಲ್ಲಿಯೂ ಔಷಧಿಗಳನ್ನು ಎಂದಿಗೂ ಇಡಬಾರದು.
ಔಷಧಿಗಳನ್ನು ಎಲ್ಲಿ ಇಡಬೇಕು?
ಮನೆಯಲ್ಲಿ ಔಷಧಿಗಳನ್ನು ಸಂಗ್ರಹಿಸಲು ಈಶಾನ್ಯ ದಿಕ್ಕನ್ನು ಶುಭವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಔಷಧಿಗಳನ್ನು ಈಶಾನ್ಯದಲ್ಲಿ ಇಡಬೇಕು. ಈ ದಿಕ್ಕಿನಲ್ಲಿ ಔಷಧಿಗಳನ್ನು ಸಂಗ್ರಹಿಸುವುದರಿಂದ ಅನಾರೋಗ್ಯ ಪೀಡಿತ ವ್ಯಕ್ತಿಯು ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ವಾಸ್ತು ಪ್ರಕಾರ ಫ್ರಿಡ್ಜ್ ಮೇಲೆ ಈ ವಸ್ತುಗಳನ್ನು ಇಡಲೇಬಾರದು; ಸಮಸ್ಯೆ ತಪ್ಪಿದ್ದಲ್ಲ
ತಲೆಯ ಬಳಿ, ದಿಂಬಿನ ಕೆಳಗೆ ಔಷಧಿಗಳನ್ನು ಇಡುವುದು:
ವಾಸ್ತು ಪ್ರಕಾರ, ಔಷಧಿಗಳನ್ನು ಹಾಸಿಗೆಯಲ್ಲಿ ಅಂದರೆ ತಲೆಯ ಮೇಲೆ ಎಂದಿಗೂ ಇಡಬಾರದು. ದಿಂಬಿನ ಕೆಳಗಡೆ ಔಷಧಿಗಳನ್ನು ಇಡುವುದರಿಂದ ರೋಗಿಯ ಮನಸ್ಸು ತಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂಬ ಗೂಂಗಲ್ಲಿಯೇ ಇರುತ್ತದೆ. ಈ ಪರಿಸ್ಥಿತಿಯು ಅನಾರೋಗ್ಯ ಮತ್ತು ದುಃಖಕ್ಕೆ ಕಾರಣವಾಗುತ್ತದೆ. ಒಂದು ಕಾಯಿಲೆ ಗುಣವಾದ ನಂತರ, ಇನ್ನೊಂದು ಕಾಯಿಲೆ ಇದು ದಾರಿ ಮಾಡಿಕೊಡುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




