
1984ರಲ್ಲಿ ಬಿಡುಗಡೆಗೊಂಡ ‘ಹೊಸ ಇತಿಹಾಸ’ ಚಿತ್ರಕ್ಕಾಗಿ ಖ್ಯಾತ ಗಾಯಕಿ ಎಸ್. ಜಾನಕಿ ಅವರು ಹಾಡಿರುವ ‘ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..’ ಎಂಬ ಹಾಡನ್ನಂತೂ ಕೇಳದವರಿಲ್ಲ. ಪ್ರತೀ ನವರಾತ್ರಿಯ ಸಮಯದಲ್ಲಿ ಈ ಹಾಡನ್ನು ಒಂದಲ್ಲ ಒಂದು ಕಡೆ ಕೇಳುವುದು ಗ್ಯಾರಂಟಿ ಎಂಬಷ್ಟರ ಮಟ್ಟಿಗೆ ಈ ಹಾಡು ಅಜರಾಮರವಾಗಿ ಉಳಿದಿದೆ. ಇದೀಗ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಈ ಹಾಡನ್ನು ಕೇಳಿ ಮೆಚ್ಚಿಕೊಂಡಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ಈ ಹಾಡಿನ ಕುರಿತು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ನರೇಂದ್ರ ಮೋದಿಯವರ ಅಧಿಕೃತ ಟ್ವಿಟರ್ ಖಾತೆ(@narendramodi)ಯಲ್ಲಿ ಕನ್ನಡದ ಈ ಪ್ರಸಿದ್ಧ ಭಕ್ತಿಗೀತೆಯ ವಿಡಿಯೋವನ್ನು ಹಾಕಿ ದೇಶದ ಜನತೆಗೆ ನವರಾತ್ರಿ ಶುಭಾಶಯ ಕೋರಲಾಗಿದೆ. ದೇವಿಯೂ ಎಲ್ಲಾ ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಆಕೆಯ ಪ್ರೀತಿಯ ವಾತ್ಸಲ್ಯವು ಪ್ರತಿಯೊಬ್ಬರ ಜೀವನದಲ್ಲೂ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ ಎಂದು ಟ್ವೀಟ್ ಮಾಡಲಾಗಿದೆ.
नवरात्रि में आज देवी मां से करबद्ध प्रार्थना है कि वे अपने सभी भक्तों को सुख-समृद्धि और सौभाग्य का आशीर्वाद दें। उनके ममतामयी स्नेह से हर किसी के जीवन में नई ऊर्जा और उमंग का संचार हो।https://t.co/BQKCXNN9rg
— Narendra Modi (@narendramodi) September 26, 2025
ಇದನ್ನೂ ಓದಿ: ನವರಾತ್ರಿಯ ಐದನೇ ದಿನದ ವಿಶೇಷ; ಭಕ್ತರ ಮೇಲೆ ಸ್ಕಂದಮಾತೆಯ ಕೃಪಾದೃಷ್ಟಿ
ಇಂದು(ಸೆ.26) ಬೆಳಗ್ಗೆ 9.48ಕ್ಕೆ ಹಂಚಿಕೊಂಡಿರುವ ಈ ಪೋಸ್ಟ್ ಈಗಾಗಲೇ 10ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಕನ್ನಡಿಗರು “ನಮ್ಮ ಕನ್ನಡ, ನಮ್ಮ ಹೆಮ್ಮೆ” ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Fri, 26 September 25