ಸನಾತನ ಧರ್ಮವನ್ನು ಒಗ್ಗೂಡಿಸಲು ಮತ್ತು ಅದೈತ ಸಿದ್ಧಾಂತವನ್ನು ಪ್ರತಿಪಾದಿಸಲು ಆದಿ ಶಂಕರಾಚಾರ್ಯರು ಸ್ಥಾಪಿಸಿದ ಮೊದಲ ಮಠವೇ ಶೃಂಗೇರಿಯ ಶಾರದಾ ವಿದ್ಯಾ ಪೀಠ. ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ಮೊದಲನೆಯದು ಶೃಂಗೇರಿಯ ಶ್ರೀ ಶಾರದಾ ವಿದ್ಯಾಪೀಠ. ಇಲ್ಲಿ ನವರಾತ್ರಿಯ ಸಂದರ್ಭದಲ್ಲಿ ವಿಶೇಷ ಅಲಂಕಾರ ಪೂಜೆ, ಬೀದಿ ಉತ್ಸವ, ಜಗದ್ಗುರುಗಳ ದರ್ಬಾರ್, ದಿಂಡಿ ದೀಪಾರಾಧನೆ, ಅಷ್ಟಾವಧಾನ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಅನೇಕಾನೇಕ ಕಾರ್ಯಕ್ರಮಗಳು ನಡೆಯುತ್ತದೆ ಅದಲ್ಲದೆ ಶಾರದಾ ಪೂಜೆ ವಿಶೇಷವಾಗಿ ನಡೆಯುತ್ತದೆ. ದೂರದ ಊರುಗಳಿಂದ ಬಂದ ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಇದು ನವರಾತ್ರಿಯಲ್ಲಿ ಮೂಲ ನಕ್ಷತ್ರದಿಂದ ಅಥವಾ ಸಪ್ತಮಿ ತಿಥಿಯಿಂದ ಆರಂಭವಾಗಿ ದಶಮಿ ಯವೆರೆಗೆ ನಡೆಯುತ್ತದೆ.
ಇನ್ನು ದೇವಿಗೆ ಕುಂಕುಮಾರ್ಚನೆ ಮಾಡಿಸುವುದರಿಂದ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇನ್ನು ಹೂವಿನಾಲಂಕಾರ ಕೂಡ ಇಲ್ಲಿನ ವಿಶೇಷ. ನವರಾತ್ರಿ ಅಂಗವಾಗಿ ಶ್ರೀ ಮಠದ ಯಾಗ ಶಾಲೆಯಲ್ಲಿ ಹೋಮಾದಿಗಳು, ವಿವಿಧ ಪಾರಾಯಣ ನಡೆಯುತ್ತದೆ. ಸುಹಾಸಿನಿ ಪೂಜೆ ಸಹಿತ ಅನೇಕ ಧಾರ್ಮಿಕ ವಿಧಿ ವಿಧಾನಗಳು ಪ್ರತಿ ದಿನವೂ ನಡೆಯುತ್ತದೆ. ಮನೆಯಲ್ಲಿ ಯಾವುದೇ ದುಃಖ ಅಥವಾ ಶುಭ ಕಾರ್ಯಗಳು ನಡೆಯುವಲ್ಲಿ ಅಡಚಣೆ ಬರುತ್ತಿದ್ದರೆ ಮತ್ತು ರೋಗ ರುಜುನೇ ಗಳಿಂದ ಬಳಲುತ್ತಿದ್ದರೆ ಇಲ್ಲಿನ ದೇವಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುತ್ತಾಳೆ. ಕೆಲವು ಸೇವೆಗಳಿಗೆ ಮುಂಗಡ ಬುಕಿಂಗ್ ಗಳಿದ್ದು ನೀವು ಆನ್ ಲೈನ್ ಗಳಲ್ಲಿ ಈ ಸೇವೆಗಳನ್ನು ಚೆಕ್ ಮಾಡಬಹುದು.
ಇದನ್ನೂ ಓದಿ: ಅಕ್ಷರಾಭ್ಯಾಸದ ಆರಂಭ ಹೇಗಿರಬೇಕು? ಈ ಸಮಯದಲ್ಲಿ ಯಾಕೆ ಶಾರದೆಯನ್ನು ಪೂಜಿಸಬೇಕು? ಇಲ್ಲಿದೆ ಮಾಹಿತಿ
ನವರಾತ್ರಿಯ ಸಂದರ್ಭದಲ್ಲಿ ಶ್ರೀ ಶಾರದೆಯ ಅಲಂಕಾರ ನಯನ ಮನೋಹರವಾಗಿರುತ್ತದೆ. ಜೊತೆಗೆ ನವರಾತ್ರಿ ಸಂದರ್ಭ ಉಭಯ ಜಗದ್ಗುರುಗಳು ಪ್ರಾತಃ ಕಾಲದ ಆಹ್ನಿಕ ಅನುಷ್ಠಾನ ಮಾಡಿ ಗುರು ಪಾದುಕೆಗಳಿಗೂ ಹಾಗೂ ಶ್ರೀ ಚಕ್ರಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಾಗಾಗಿ ನವರಾತ್ರಿಯ ಕೊನೆಯ ಮೂರು ದಿನಗಳು ನಿಮಗೆ ಯಾವ ಸೇವೆ ಮಾಡಲು ಸಾಧ್ಯವೋ ಆ ಸೇವೆ ಮಾಡಿ ಇದರಿಂದ ಮನೆಯ ಕಷ್ಟ, ದುಃಖ ಎಲ್ಲವೂ ಪರಿಹಾರವಾಗಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಹೋಗಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಮನೋ ಕಾಮನೆಗಳನ್ನು ನೆನೆದು, ನಿಮ್ಮ ಕೈಲಾಗುವಷ್ಟು ಹಣ ತೆಗೆದಿಟ್ಟು, ಆದಾಗ ಹೋಗಿ ಆ ದುಡ್ಡನ್ನು ದೇವರಿಗೆ ಅರ್ಪಿಸಿ ಬನ್ನಿ.
ಮತ್ತಷ್ಟು ಆಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: