ಆಯುಧ ಪೂಜೆ: ಗೋಮಾತೆ ಮತ್ತು ತಮ್ಮ ಅಧಿಕೃತ ವಾಹನಕ್ಕೆ ಪತ್ನಿ ಜೊತೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್

|

Updated on: Oct 23, 2023 | 5:18 PM

ಚುನಾವಣಾ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳ ಪೈಕಿ ನಾಲ್ಕನ್ನು ಜಾರಿಗೊಳಿಸಿ ವಿರೋಧ ಪಕ್ಷಗಳ ಟೀಕೆಯಿಂದ ತಪ್ಪಿಸಿಕೊಂಡ ಶಿವಕುಮಾರ್ ಗೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯ ಟೀಕೆಗಳಿಂದ ರಿಲೀಫ್ ಸಿಗುತ್ತಿಲ್ಲ.

ಬೆಂಗಳೂರು: ನಾಡಿನಾದ್ಯಂತ ಇಂದು ಆಯುಧ ಪೂಜೆ (Ayudha Puja) ಸಂಭ್ರಮ. ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ನಗರದ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಆಯುಧ ಪೂಜೆ ನೆರವೇರಿಸಿದರು. ಧರ್ಮಪತ್ನಿ ಉಷಾ ಶಿವಕುಮಾರ್ (Usha Shivakumar) ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಪೂಜೆ ಮಾಡುತ್ತಿರುವುದನ್ನು ಇಲ್ಲಿ ನೋಡಬಹುದು. ಮೊದಲಿಗೆ ಗೋಮಾತೆಗೆ ಪೂಜೆ ಸಲ್ಲಿಸಿ ನಂತರ ಅಧಿಕೃತ ಕಾರಿಗೆ ಪೂಜೆ ಅವರು ನೆರವೇರಿಸಿದರು. ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರಲು ಮಹತ್ವದ ಕಾಣಿಕೆ ನೀಡಿರುವ ಶಿವಕುಮಾರ್ ಸರ್ಕಾರ ರಚನೆಯಾದ ಬಳಿಕ ಆತ್ಮವಿಶ್ವಾಸದಿಂದ ಬೀಗುತ್ತಿದ್ದರು. ಚುನಾವಣಾ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳ ಪೈಕಿ ನಾಲ್ಕನ್ನು ಜಾರಿಗೊಳಿಸಿ ವಿರೋಧ ಪಕ್ಷಗಳ ಟೀಕೆಯಿಂದ ತಪ್ಪಿಸಿಕೊಂಡ ಶಿವಕುಮಾರ್ ಗೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯ ಟೀಕೆಗಳಿಂದ ರಿಲೀಫ್ ಸಿಗುತ್ತಿಲ್ಲ. ಬಿಜೆಪಿ ವರಿಷ್ಠರ ಜೊತೆ ಸೇರಿ ಕುಮಾರಸ್ವಾಮಿ ತನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ