Mysuru Dasara 2022: ಜಂಬೂ ಸವಾರಿ ವೇಳೆ 47 ಸ್ತಬ್ಧಚಿತ್ರಗಳ ಪ್ರದರ್ಶನ, ಪುನೀತ್‌ ರಾಜಕುಮಾರ್ ಪ್ರತಿಮೆ ಪ್ರಮುಖ ಆಕರ್ಷಣೆ

| Updated By: ಆಯೇಷಾ ಬಾನು

Updated on: Oct 05, 2022 | 12:01 PM

ಸಂಜೆ 05:07 ರಿಂದ 5.18ರ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಮೆರವಣಿಗೆ ಪ್ರಾರಂಭವಾಗುತ್ತದೆ. ಜಂಬೂ ಸವಾರಿ ಮೆರವಣಿಗೆ ವೇಳೆ 47 ಸ್ತಬ್ಧಚಿತ್ರ ಪ್ರದರ್ಶನವಾಗಲಿವೆ.

Mysuru Dasara 2022: ಜಂಬೂ ಸವಾರಿ ವೇಳೆ 47 ಸ್ತಬ್ಧಚಿತ್ರಗಳ ಪ್ರದರ್ಶನ, ಪುನೀತ್‌ ರಾಜಕುಮಾರ್ ಪ್ರತಿಮೆ ಪ್ರಮುಖ ಆಕರ್ಷಣೆ
ಪುನೀತ್‌ ರಾಜಕುಮಾರ್
Follow us on

ಮೈಸೂರು: ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ಕಳೆದ ಎರಡು ವರ್ಷ ಮಹಾಮಾರಿ ಕೊರೊನಾ (Coronavirus) ಹಿನ್ನೆಲೆ ಕಳೆಗುಂದಿದ್ದ ನಾಡಹಬ್ಬ ಮೈಸೂರು ದಸರಾ (Mysuru Dasara 2022) ಈ ಬಾರಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಸಾಂಸ್ಕೃತಿಕ ನಗರಿ ವಿದ್ಯುತ್​ ದೀಪಗಳಿಂದ ಕಂಗೊಳಿಸುತ್ತಿದೆ. ರಾಜ್ಯ, ದೇಶಗಳಿಂದ ಪ್ರವಾಸಿಗರು ಮೈಸೂರಿನತ್ತ ಮುಖ ಮಾಡಿದ್ದಾರೆ. ಇಂದು ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ (Jambu Savari) ಆರಂಭವಾಗಲಿದೆ. ಜಂಬೂ ಸವಾರಿಯಲ್ಲಿ ಪ್ರದರ್ಶನವಾಗುವ ಜಿಲ್ಲಾವಾರು ಸ್ತಬ್ಧಚಿತ್ರಗಳ ಪಟ್ಟಿ ಇಲ್ಲಿದೆ.

ಮಧ್ಯಾಹ್ನ 2.36 ರಿಂದ 02:50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನಂದಿ ಧ್ವಜ ಕಂಬಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ನಂತರ ಪೂಜೆ ಬಳಿಕ ಸಂಜೆ 05:07 ರಿಂದ 5.18ರ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಮೆರವಣಿಗೆ ಪ್ರಾರಂಭವಾಗುತ್ತದೆ. ಅರಮನೆಯಿಂದ ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್, ರಸ್ತೆ, ಆಯುರ್ವೇದಿಕ್ ವೃತ್ತ, ಆರ್.ಎಂ.ಸಿ, ತಿಲಕ್ ನಗರ ರಸ್ತೆ ಮೂಲಕ ಜಂಬೂ ಸವಾರಿ ಬನ್ನಿ ಮಂಟಪ ತಲುಪಲಿದೆ. ಜಂಬೂ ಸವಾರಿ ಮೆರವಣಿಗೆ ವೇಳೆ 47 ಸ್ತಬ್ಧಚಿತ್ರ ಪ್ರದರ್ಶನವಾಗಲಿವೆ.

ಜಿಲ್ಲಾವಾರು ಸ್ತಬ್ಧಚಿತ್ರಗಳ ಪಟ್ಟಿ

    1. ಬಾಗಲಕೋಟೆ -ಮುಧೋಳ ಶ್ವಾನ, ಇಳಕೆಲ್ ಸೀರೆ, ದುರ್ಗಾಂಬ ದೇವಸ್ಥಾನ
    2. ಬಳ್ಳಾರಿ-ದುರ್ಗಾಂಬ ದೇವಾಸ್ಥಾನ, ಮಿಂಜೇರಿ ಗುಡ್ಡ, ಬಳ್ಳಾರಿ ಕೋಟೆ
    3. ಬೆಳಗಾವಿ-ಶೀ ರೇಣುಕಾದೇವಿ ದೇವಾಸ್ಥಾನ, ಕಮಲ ಬಸದಿ
    4. ಬೆಂಗಳೂರು(ಗಾ)- ಮನ್ಯಾಪುರ ದೇವಸ್ಥಾನ,, ಕಪಿಲೇಶ್ಷರ ದೇವಸ್ಥಾನ, ಜೈನಬಸದಿ, ಸಿಂಪಾಡಿಪುರ ವೀಣೆ
    5. ಬೆಂಗಳೂರು ನಗರ -ಕಡಲೆಕಾಯಿ ಪರಸೆ, ಬಸವನ ಗುಡಿ
    6. ಬೀದರ್-ನೂತನ ಅನುಭವ ಮಂಟಪ
    7. ಚಾಮರಾಜನಗರ -ವನ್ಯಧಾಮ, ಶ್ರೀಮಹದೇಶ್ವೇರ ವಿಗ್ರಹ, ಪುನೀತ್‌ ರಾಜಕುಮಾರ್ ಪ್ರತಿಮೆ
    8. ಚಿಕಬಳ್ಳಾಪುರ -ಗ್ರೀನ್ ನಂದಿ & ಕ್ಲೀನ್ ನಂದಿ, ಭೋಗೇಶ್ವರ ದೇವಸ್ಥಾನ
    9. ಚಿಕ್ಕಮಗಳೂರು- ದ್ವಾದಶ ಜಿಲ್ಲೆಗಳಿಗೆ ಜೀವನಾಡಿ ಚಿಕ್ಕಮಗಳೂರು ಜಿಲ್ಲೆಯು ಸಪ್ತ ನದಿಗಳ ತವರು
    10. ಚಿತದುರ್ಗ-ವಾಣಿವಿಲಾಸ ಜಲಾಶಯ, ಓನಕೆ ಓಬ್ಬವ, ಕುದುರೆ ಮೇಲೆ ಅಸನರಾಗಿರುವ ಮದಕರಿ ನಾಯಕ ಪ್ರತಿಮೆ, ದೀಪಸ್ತಂಭ
    11. ದಕ್ತಿಣ ಕನ್ನಡ-ಕಂಬಳ, ಹುಲಿವೇಶ,ಭೂತ ಕೋಲ
    12. ದಾವಣಗೆರೆ-ಸಂತೆ ಬೆನ್ನೂರು ಪುಷ್ಕರಣಿ
    13. ಧಾರವಾಡ-ಸಂಗೀತ ದಿಗ್ಗಜರು
    14. ಗದಗ-ಶ್ರೀ ಕ್ಷೇತ್ರ ಶ್ರೀಮಂತಗಡ, ಹೊಳಲಮ್ಮ ದೇವಿ ಮತ್ತು ಶಿವಾಜಿ
    15. ಹಾಸನ-ಬೇಲೂರು ಚೆನ್ನಕೇಶವ ದೇವಸ್ಥಾನ, ಶ್ರವಣಬೆಳಗೊಳ- ಗೊಮ್ಮಟೇಶ್ವರ
    16. ಹಾವೇರಿ-ಗುರು ಗೋವಿಂದಭಟ್ರು, ಸಂತೆ ಶಿಶುನಾಳ ಷರೀಫರು, ಮುಕ್ತೇಶ್ವರ ದೇವಾಲಯ
    17. ಕಲಬುರಗಿ-ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ, ವನ್ಯಜೀವಿ ಧಾಮ
    18. ಕೊಡಗು-ಬ್ರಹ್ಮಗಿರಿ ಬೆಟ್ಟ, ಬೃಗೇಂಡಶ್ವೇರ ದೇವಸ್ಥಾನ, ತಲಕಾವೇರಿ ತೀರ್ಥೋಬವ, ಇರ್ಪು ಜಲಾಶಯ
    19. ಕೋಲಾರ-ಬಿಕೆಎಸ್‌ ಅಯ್ಯಂಗಾರ್ ಯೋಗನಾಥ್ ಹಾಗೂ ಅಂತರಗಂಗೆ ಬೆಟ್ಟ
    20. ಕೊಪ್ಪಳ-ಆನೆಗುಂದಿ ಬೆಟ್ಟ,ಕಿನ್ನಾಳ ಗೊಂಬೆಗಳು, ಅಂಜನಾದ್ರಿ ಬೆಟ್ಟ
    21. ಮಂಡ್ಯ-ಮಂಡ್ಯಜಿಲ್ಲೆಯ ದೇಗುಲಗಳು
    22. ಮೈಸೂರು-ಮೈಸೂರು ಜಿಲ್ಲೆ ವಿಶೇಷತೆಗಳು
    23. ರಾಯಚೂರು-ಸಿರಿಧಾನ್ಯ ಬೆಳೆಗಳ ಅಭಿಯಾನ
    24. ರಾಮನಗರ-ರಾಮದೇವರ ಬೆಟ್ಟ, ರಣಹದ್ದು ಪಕ್ಷಿಧಾಮ
    25. ಶಿವಮೊಗ್ಗ-ಅಕ್ಕಮಹಾದೇವಿ ಜನ್ಮಸ್ಥಳ, ಉಡುತಡಿ, ಶಿಕಾರಿಪುರ
    26. ತುಮಕೂರು-ನಿಟ್ಟೂರಿನ ಹೆಚ್‌ಎಎಲ್‌ ತಯಾರಿಕ ಘಟಕ, ಪಾವಗಡದ ವಿಶ್ವದ ಮೊದಲ ಬೃಹತ್ ಸೋಲಾರ್ ಪಾರ್ಕ್
    27. ಉಡುಪಿ-ಜಿಐ ಟ್ಯಾಗ್ ಹೊಂದಿರುವ ಉಡುಪಿ ಕೈಮಗ್ಗ, ಸೀರೆ ನೇಯ್ಗೆ ,ಸಂಪ್ರಾದಾಯಕ ಕಲಾ ಪ್ರದರ್ಶನ
    28. ಉತ್ತರ ಕನ್ನಡ-ಕಾರವಾರ ನೌಕನೆಲೆ,(ಐಎನ್‌ಎಸ್‌ ವಿಕ್ರಮ್)
    29.  ವಿಜಯಪುರ-ಸಿದ್ದರಾಮೇಶ್ವರ ದೇವಸ್ಥಾನ,
    30. ವಿಜಯನಗರ-ಉಗ್ರ ನರಸಿಂಹ, ದರೋಜಿ ಕರಡಿಧಾಮ, ಕಲ್ಲಿನ ರಥ
    31. ಯಾದಗಿರಿ-ಸುರಪುರ ಕೋಟೆ

      ಸ್ತಬ್ಧಚಿತ್ರಗಳ ಉಪಸಮಿತಿ

    32. ಅರಮನೆ ವಾದ್ಯಗೋಷ್ಠಿ
    33. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಸೋಮನಾಥಪುರ ದೇವಾಲಯ
    34. ಆಜಾದಿ ಕಾ ಅಮೃತ ಮಹೋತ್ಸವ

      ಇಲಾಖಾವಾರು ಸ್ತಬ್ಧಚಿತ್ರಗಳ ಪಟ್ಟಿ

    35. ಸಮಾಜ ಕಲ್ಯಾಣ ಇಲಾಖೆ- ಸಾಮಾಜಿಕ ನ್ಯಾಯ
    36. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ- ಐಟಿಐ, ಜಿಟಿಟಿಸಿ, ಕೌಶಲ ತರಬೇತಿ
    37. ಹಾಲು ಉತ್ಪಾದಕರ ಮಹಾಮಂಡಲ- ನಂದಿನಿ ಕ್ಷೀರಧಾರೆ, ಉತ್ಪನ್ನಗಳು
    38. ಮೈಸೂರು ವಿಶ್ವವಿದ್ಯಾಲಯ- 106 ವರ್ಷಗಳ ಇತಿಹಾಸ
    39. ಕಾವೇರಿ ನೀರಾವರಿ ನಿಗಮ- ರೈತರು ಮತ್ತು ಸಾರ್ವಜನಿಕರಿಗೆ ಆಗುವ ಅನುಕೂಲಕಗಳು
    40. ಸೆಸ್ಕ್-‌ ಡಿಡಿಯು ಯೋಜನೆ, ಬೆಳಕು ಯೋಜನೆ, ಪರಿವರ್ತಕ ಅಭಿಯಾನ
    41. ವಾರ್ತಾ ಮತ್ತು ಪ್ರಚಾರ ಇಲಾಖೆ- ಇಲಾಖೆ ಕಾರ್ಯಕ್ರಮಗಳು
    42. ಡಾ.ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮ- ಲಿಡ್ಕರ್‌ ಉತ್ಪನ್ನಗಳು
    43. ಅಖಿಲ ಭಾರತ ವಾಕ್‌ ಮತ್ತು ಶ್ರಾವಣ ಸಂಸ್ಥೆ- ಎಲ್ಲರಿಗೂ ದಯೆ ಮತ್ತು ಪ್ರೀತಿಗಾಗಿ
    44. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಆರ್ಥಿಕ ಹೊರಯಿಂದ ರಕ್ಷಣೆ, ನಮ್ಮ ಕ್ಲಿನಿಕ್‌
    45. ಸಹಕಾರ ಇಲಾಖೆ- ಸಹಕಾರ ಕ್ಷೇತ್ರದ ಯೋಜನೆಗಳು
    46. ಮಂಡ್ಯ ಜಿಲ್ಲೆ ಮಹಾ ಕುಂಭ ಮೇಳ- ಪುಣ್ಯ ಸ್ನಾನ ಮತ್ತು ಶ್ರೀ ಮಹದೇಶ್ವರ ಜ್ಯೋತಿ ಸ್ವೀಕಾರ
    47. ಪ್ರವಾಸೋದ್ಯಮ ಇಲಾಖೆ- ಚನ್ನಕೇಶವ ದೇವಾಲಯ, ಬೇಲೂರು, ಹಂಪಿ ಆನೆಲಾಯ