Mysuru Dasara 2022: ದಸರಾ ಸಂಭ್ರಮಕ್ಕೆ ಗೊಂಬೆ ಮೆರುಗು, ನೋಡ ಬನ್ನಿ ಗೊಂಬೆ ಮನೆ

| Updated By: ಆಯೇಷಾ ಬಾನು

Updated on: Oct 05, 2022 | 3:45 PM

Gombe Habba: ಜಗತ್ ಪ್ರಸಿದ್ಧ ಮೈಸೂರು ದಸರಾ ಮೈಸೂರು ಅರಮನೆಯಲ್ಲಿ ನಡೆದರೆ ಮೈಸೂರು ಪ್ರಾಂತ್ಯದ ಪ್ರಜೆಗಳ ಮನೆಗಳಲ್ಲಿ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಪ್ರಾರಂಭವಾಯಿತು.

Mysuru Dasara 2022: ದಸರಾ ಸಂಭ್ರಮಕ್ಕೆ ಗೊಂಬೆ ಮೆರುಗು, ನೋಡ ಬನ್ನಿ ಗೊಂಬೆ ಮನೆ
ದಸರಾ ಸಂಭ್ರಮಕ್ಕೆ ಗೊಂಬೆ ಮೆರುಗು
Follow us on

ಮೈಸೂರು: ನಾಡಹಬ್ಬ ದಸರಾ(Mysuru Dasara 2022) ಸಮಯದಲ್ಲಿ ಗೊಂಬೆ(Gombe Habba) ಕೂರಿಸುವ ಸಂಪ್ರದಾಯಕ್ಕೆ ಆದರದೇ ಆದ ಮಹತ್ವವಿದೆ. ದಸರಾಗೆ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸಿ ಅಲಂಕರಿಸಿ ಅವುಗಳನ್ನು ಪೂಜಿಸುವ ಪದ್ಧತಿಯು ಮೈಸೂರು ರಾಜರ ಕಾಲದಲ್ಲಿ ಮೊಟ್ಟಮೊದಲು ಆರಂಭವಾಯಿತು ಎನ್ನಲಾಗುತ್ತದೆ. ಜಗತ್ ಪ್ರಸಿದ್ಧ ಮೈಸೂರು ದಸರಾ ಮೈಸೂರು ಅರಮನೆಯಲ್ಲಿ ನಡೆದರೆ ಮೈಸೂರು ಪ್ರಾಂತ್ಯದ ಪ್ರಜೆಗಳ ಮನೆಗಳಲ್ಲಿ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಪ್ರಾರಂಭವಾಯಿತು.

ಗೊಂಬೆ ಹಬ್ಬದಲ್ಲಿ ಕತೆಗಳನ್ನು ಸೂಚಿಸುವ ವಿವಿಧ ಗೊಂಬೆ ಮತ್ತು ಪ್ರತಿಮೆಗಳ ಪ್ರದರ್ಶನ ಮಾಡಲಾಗುತ್ತೆ. ಗೊಂಬೆಗಳನ್ನು ಬೆಸ ಸಂಖ್ಯೆಯಲ್ಲಿ ಮೆಟ್ಟಿಲು ಆಕೃತಿಯಲ್ಲಿ ಅಥವಾ ಹಂತ ಹಂತವಾಗಿ ಜೋಡಿಸಲಾಗುತ್ತದೆ. ನವರಾತ್ರಿಯ ಒಂಬತ್ತು ರಾತ್ರಿಗಳನ್ನು ಸೂಚಿಸಲು ಅನೇಕ ಮನೆಗಳಲ್ಲಿ ಗೊಂಬೆಗಳನ್ನು 9 ಹಂತಗಳಲ್ಲಿ ಇಟ್ಟು ಪೂಜಿಸುತ್ತಾರೆ.

ಹೇಗಿದೆ ನೋಡಿ ಗೊಂಬೆ ಹಬ್ಬದ ಸಂಭ್ರಮ

Published On - 3:45 pm, Wed, 5 October 22