ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ನಾಳೆ ನಡೆಯಲಿರುವ ಜಂಬೂ ಸವಾರಿಗೆ ಭರ್ಜರಿ ಸಿದ್ದತೆಗಳು ನಡೆಯುತ್ತಿವೆ. ಇದರ ನಡುವೆ ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್(ST Somashekar) ಬೇಸರ ಹೊರಹಾಕಿದ್ದಾರೆ. ಸಚಿವರು, ಶಾಸಕರು ತಮಗೆ ಸಹಕಾರ ನೀಡ್ತಿಲ್ಲವೆಂದು ಅಸಮಾಧಾನ ಹೊರ ಹಾಕಿದ್ದಾರೆ.
ಟಿವಿ9 ಜೊತೆ ಮಾತನಾಡಿದ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಕೈ ಮುಗಿದು ತಾಯಿ ಚಾಮುಂಡೇಶ್ವರಿಯನ್ನ ನೆನಪಿಸಿಕೊಂಡಿದ್ದಾರೆ. ದಸರಾ ಕಾರ್ಯಕ್ರಮಕ್ಕೆ ತಮ್ಮದೆ ಸಚಿವರು, ಶಾಸಕರು ಸಹಕಾರ ನೀಡುತ್ತಿಲ್ಲವೆಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಸಹಕಾರ ಸಚಿವ ಪ್ರತಿಯೊಬ್ಬರಿಗೂ ಸಹಕರಿಸೋದು ನನ್ನ ಕರ್ತವ್ಯ. ನಾನು ಸಹಕಾರ ಕೊಟ್ಟು ನನಗೆ ಸಹಕಾರ ಕೊಡದೆ ಇರೋರಿಗೆ ನಾನೇನು ಮಾಡ್ಲಿ? ಆ ತಾಯಿ ಚಾಮುಂಡಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಅವರನ್ನ ಆ ತಾಯಿಯೇ ನೋಡಿಕೊಳ್ಳಲಿ ಎಂದು ಟಿವಿ9 ಕ್ಯಾಮರಾಗೆ ಕೈ ಮುಗಿದು ಸಚಿವ ಎಸ್.ಟಿ ಸೋಮಶೇಖರ್ ಅಸಮಾಧಾನ ಹೊರ ಹಾಕಿದ್ರು. ಇದನ್ನೂ ಓದಿ: ಅಪಾಯಕಾರಿ ರೈಡಿಂಗ್ ಮತ್ತು ಹಿಟ್ ಅಂಡ್ ರನ್ನ ಅತ್ಯುತ್ತಮ ಉದಾಹರಣೆ ಈ ವಿಡಿಯೋದಲ್ಲಿ ನೋಡಬಹುದು!
ರಾಜ್ಯದ ಜನತೆಗೆ ದಸರಾ ಶುಭಾಶಯ ತಿಳಿಸಿದ ಸಿಎಂ
ನಾಡ ಹಬ್ಬ ದಸರಾಗೆ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದ ಜನತೆಗೆ ಶುಭಾಶಯ ತಿಳಿಸಿದ್ದಾರೆ. ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳು.ಈ ಹಬ್ಬವೂ ತಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ತರಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳು.ಈ ಹಬ್ಬವೂ ತಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ತರಲೆಂದು ಪ್ರಾರ್ಥಿಸುತ್ತೇನೆ. pic.twitter.com/VT5razoACf
— Basavaraj S Bommai (@BSBommai) October 4, 2022
ದಸರಾ ಪಾಸ್ ವಿಚಾರವಾಗಿ ಸ್ಥಳೀಯ ಶಾಸಕರ ಮುನಿಸು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ಕ್ಕೆ ದಸರಾ ಪಾಸ್ ಸಿಗುತ್ತಿಲ್ಲವೆಂದು ಸ್ಥಳೀಯ ಶಾಸಕರು ಮುನಿಸಿಕೊಂಡಿದ್ದಾರೆ. ಹೀಗಾಗಿ ರಾಮದಾಸ್ ಹಲವು ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ನಾಗೇಂದ್ರ ಸೇರಿ ಹಲವರು ಮರ್ಪಕವಾಗಿ ಪಾಸ್ ಸಿಕ್ಕಿಲ್ಲ ಎಂದು ಪಾಸ್ ವಿಚಾರದಲ್ಲಿ ಅಸಮಾಧನ ಹೊರ ಹಾಕಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:10 am, Tue, 4 October 22