New Year 2024: ಸಂತೋಷ ಹಾಗೂ ಸಮೃದ್ಧಿಗಾಗಿ ಹೊಸ ವರ್ಷಕ್ಕೆ ಈ ವಸ್ತುಗಳನ್ನು ಮನೆಗೆ ತನ್ನಿ
ನೀವು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಬಯಸಿದರೆ, ಹೊಸ ವರ್ಷದ ಮೊದಲ ದಿನ ಮನೆಗೆ ಕೆಲವು ವಸ್ತುಗಳನ್ನು ಖರೀದಿಸುವುದು ತುಂಬಾ ಅವಶ್ಯಕ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಈ ಕೆಲವು ವಸ್ತುಗಳಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ ಮತ್ತು ಆರ್ಥಿಕ ಅಭಿವೃದ್ಧಿ ನೀಡುತ್ತದೆ.
2024 ರ ಮೊದಲ ದಿನ ಸೋಮವಾರ. ಸೋಮವಾರ ಶಿವನಿಗೆ ಪ್ರಿಯವಾದ ದಿನ. ಈ ದಿನ ದೇವಾಲಯಗಳನ್ನು ಅಲಂಕರಿಸಿ, ವಿಶೇಷ ಪೂಜೆ ನೆರವೇಲಿಸಲಾಗುತ್ತದೆ. ನಿಮಗೂ ಸುಖ, ಸೌಭಾಗ್ಯ ಮತ್ತು ಸಂಪತ್ತು ಬೇಕು ಎಂದಾದರೆ ಹೊಸ ವರ್ಷದ ಮೊದಲ ದಿನ ಬೇಗ ಎದ್ದು, ಸ್ನಾನ ಮಾಡಿ ಶಿವನನ್ನು ಶಾಸ್ತ್ರೋಕ್ತವಾಗಿ ಪೂಜಿಸಿ. ಅಲ್ಲದೆ, ಶಿವನಿಗೆ ಸಂಬಂಧಿಸಿದ ಈ 3 ವಸ್ತುಗಳನ್ನು ಮನೆಗೆ ತನ್ನಿ. ಇದು ನಿಮ್ಮ ಜೀವನದಿಂದ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ ಮತ್ತು ನೀವು ವರ್ಷವಿಡೀ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ.
ಹೊಸ ವರ್ಷದ ಮೊದಲ ದಿನ ಮನೆಗೆ ಈ ವಸ್ತುಗಳನ್ನು ತನ್ನಿ:
ಡಮರು:
ನೀವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಬಯಸಿದರೆ, ಹೊಸ ವರ್ಷದ ಮೊದಲ ದಿನದಂದು ಡಮರು ಖರೀದಿಸಿ ಮನೆಗೆ ತನ್ನಿ. ನಂತರ ಶಿವ ಮತ್ತು ತಾಯಿ ಪಾರ್ವತಿಯನ್ನು ಸಂಪ್ರದಾಯದಂತೆ ಪೂಜಿಸಿ. ಹಿಂದೂ ಧರ್ಮದಲ್ಲಿ, ಡಮರುವನ್ನು ಶಿವನ ವಾದ್ಯವೆಂದು ಕರೆಯಲಾಗುತ್ತದೆ ಮತ್ತು ಆಧ್ಯಾತ್ಮಿಕ ಶಬ್ದಗಳನ್ನು ಉತ್ಪತ್ತಿ ಮಾಡಲು ಶಿವನಿಂದ ಸೃಷ್ಟಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ.
ಪರದ ಶಿವಲಿಂಗ:
ನೀವು ಶಿವ ದೇವರ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಹೊಸ ವರ್ಷದ ಮೊದಲ ದಿನದಂದು, ಪರದ ಶಿವಲಿಂಗವನ್ನು ಮನೆಗೆ ತಂದು ಪೂಜಿಸಿ. ಮನೆಯಲ್ಲಿ ಪರದ ಶಿವಲಿಂಗವನ್ನು ಪ್ರತಿಷ್ಠಾಪಿಸುವುದರಿಂದ ಜೀವನದ ಎಲ್ಲಾ ದುಃಖಗಳು ದೂರವಾಗುತ್ತವೆ ಎಂಬುದು ಧಾರ್ಮಿಕ ನಂಬಿಕೆ. ಈ ಶಿವಲಿಂಗವನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ತಂತ್ರ-ಮಂತ್ರಗಳು ಮತ್ತು ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಧನಾತ್ಮಕ ಶಕ್ತಿಯ ಕವಚವು ವ್ಯಕ್ತಿಯ ಸುತ್ತಲೂ ಉಳಿಯುತ್ತದೆ.‘
ಇದನ್ನೂ ಓದಿ: ವಾಸ್ತು ಪ್ರಕಾರ ಕಾರಿನಲ್ಲಿ ಯಾವ ವಸ್ತು ಇಡುವುದು ಶುಭ? ಯಾವುದು ಅಶುಭ?
ತ್ರಿಶೂಲ:
ನೀವು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಬಯಸಿದರೆ, ಹೊಸ ವರ್ಷದ ಮೊದಲ ದಿನ ಮನೆಯಲ್ಲಿ ತ್ರಿಶೂಲವನ್ನು ತನ್ನಿ. ಈ ದಿನ ಶಾಸ್ತ್ರೋಕ್ತವಾಗಿ ಶಿವ ಮತ್ತು ಆಯುಧ ತ್ರಿಶೂಲವನ್ನು ಪೂಜಿಸಿ. ಮನೆಯಲ್ಲಿ ತ್ರಿಶೂಲವನ್ನು ಇಡುವುದರಿಂದ ಆದಾಯ ಮತ್ತು ಅದೃಷ್ಟ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಧನಾತ್ಮಕ ಶಕ್ತಿಯು ಮನೆಯಲ್ಲಿ ಸಂಚರಿಸುತ್ತದೆ. ತ್ರಿಶೂಲ ಶಕ್ತಿಯ ಸಂಕೇತವಾಗಿದೆ. ಹಲವು ದಿನಗಳಿಂದ ಆರೋಗ್ಯ ಸಮಸ್ಯೆ ಇರುವವರು ತಮ್ಮ ಮನೆಗೆ ತ್ರಿಶೂಲವನ್ನು ತರಬೇಕು.
ರುದ್ರಾಕ್ಷಿ ಮಾಲೆ:
ಭಗವಾನ್ ಶಂಕರನ ಕಣ್ಣೀರಿನಿಂದ ರುದ್ರಾಕ್ಷವು ಹುಟ್ಟಿಕೊಂಡಿತು ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ರುದ್ರಾಕ್ಷಿಯು ಶಿವನಿಗೆ ಬಹಳ ಪ್ರಿಯವಾಗಿರುವುದರಿಂದ, ಹೊಸ ವರ್ಷದ ಮೊದಲ ದಿನ ರುದ್ರಾಕ್ಷಿ ಮಾಲೆಯನ್ನು ಮನೆಗೆ ತರಬೇಕು. ಆದ್ದರಿಂದ ಓಂ ನಮಃ ಎಂದು ಮಂತ್ರವನ್ನು 108 ಬಾರಿ ಜಪಿಸಿ. ಇದು ನಿಮಗೆ ಆರ್ಥಿಕ ಅಭಿವೃದ್ಧಿ ನೀಡುತ್ತದೆ.
ಆಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: