AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nag Panchami 2025: ನಾಗರ ಪಂಚಮಿಯಂದು ಕಬ್ಬಿಣದ ವಸ್ತುಗಳನ್ನು ಏಕೆ ಬಳಸಬಾರದು?

ಶ್ರಾವಣ ಮಾಸದ ನಾಗರ ಪಂಚಮಿಯಂದು ಕಬ್ಬಿಣದ ವಸ್ತುಗಳ ಬಳಕೆಯನ್ನು ತಪ್ಪಿಸುವುದು ಪ್ರಮುಖ ಸಂಪ್ರದಾಯ. ವೈದಿಕ ಜ್ಯೋತಿಷ್ಯದ ಪ್ರಕಾರ, ಕಬ್ಬಿಣವು ರಾಹು ಗ್ರಹಕ್ಕೆ ಸಂಬಂಧಿಸಿದೆ, ಮತ್ತು ಅದರ ಬಳಕೆಯು ಅಶುಭವೆಂದು ನಂಬಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದ್ದು ಈ ದಿನ ಮಹಿಳೆಯರು ಮಣ್ಣಿನ ಪಾತ್ರೆ ಬಳಸಿ ಆಹಾರ ತಯಾರಿಸುತ್ತಾರೆ, ಇದಲ್ಲದೇ ಕಬ್ಬಿಣದ ವಸ್ತುಗಳನ್ನು ಬದಲಾಗಿ ತಾಮ್ರದಿಂದ ಮಾಡಿದ ವಸ್ತುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

Nag Panchami 2025: ನಾಗರ ಪಂಚಮಿಯಂದು ಕಬ್ಬಿಣದ ವಸ್ತುಗಳನ್ನು ಏಕೆ ಬಳಸಬಾರದು?
ನಾಗರ ಪಂಚಮಿ
ಅಕ್ಷತಾ ವರ್ಕಾಡಿ
|

Updated on:Jul 26, 2025 | 11:57 AM

Share

ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುವ ಹಿಂದೂ ಧರ್ಮದ ಪ್ರಮುಖ ಹಬ್ಬ ನಾಗರ ಪಂಚಮಿ. ಪಂಚಾಂಗದ ಪ್ರಕಾರ, ಈ ವರ್ಷ ಜುಲೈ 29 ರಂದು ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು, ಸರ್ಪ ದೇವತೆಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ದಿನಕ್ಕೆ ಸಂಬಂಧಿಸಿದ ಅನೇಕ ಸಂಪ್ರದಾಯಗಳು ಮತ್ತು ನಂಬಿಕೆಗಳಿವೆ, ಅವುಗಳಲ್ಲಿ ಒಂದು ಕಬ್ಬಿಣದ ವಸ್ತುಗಳನ್ನು ಬಳಸದಿರುವುದು. ಇದರ ಹಿಂದಿನ ಆಸಕ್ತಿದಾಯಕ ಕಾರಣವನ್ನು ಇಲ್ಲಿ ತಿಳಿದುಕೊಳ್ಳಿ.

ನಾಗರ ಪಂಚಮಿಯಂದು ಕಬ್ಬಿಣವನ್ನು ಏಕೆ ಬಳಸಬಾರದು?

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ನಾಗರಪಂಚಮಿಯ ದಿನದಂದು ಕಬ್ಬಿಣದ ವಸ್ತುಗಳನ್ನು, ವಿಶೇಷವಾಗಿ ತವಾ, ಚಾಕು, ಕತ್ತರಿ ಮತ್ತು ಕಬ್ಬಿಣದ ಪಾತ್ರೆಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇದರ ಹಿಂದೆ ಧಾರ್ಮಿಕ, ಜ್ಯೋತಿಷ್ಯ ಮತ್ತು ಸಾಂಕೇತಿಕ ಕಾರಣಗಳಿವೆ.

ವೈದಿಕ ಜ್ಯೋತಿಷ್ಯದಲ್ಲಿ, ಕಬ್ಬಿಣದ ವಸ್ತುಗಳನ್ನು ರಾಹು ಗ್ರಹಕ್ಕೆ ಸಂಬಂಧ ಕಲ್ಪಿಸಲಾಗುತ್ತದೆ. ರಾಹು ಗ್ರಹವು ಗೊಂದಲ ಮತ್ತು ಹಠಾತ್ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಇದು ವ್ಯಕ್ತಿಯ ಜೀವನದಲ್ಲಿ ಅಶಾಂತಿ, ಅನಾರೋಗ್ಯ ಮತ್ತು ಅಡೆತಡೆಗಳನ್ನು ಉಂಟುಮಾಡಬಹುದು. ನಾಗ ಪಂಚಮಿಯ ದಿನದಂದು ಕಬ್ಬಿಣದ ವಸ್ತುಗಳನ್ನು ಬಳಸುವುದರಿಂದ ರಾಹು ದೋಷ ಉಂಟಾಗುತ್ತದೆ ಎಂದು ನಂಬಲಾಗಿದೆ. ರಾಹು ಕೋಪಗೊಂಡರೆ, ಜೀವನದಲ್ಲಿ ರಾಹು ದೋಷ, ಕಾಲ ಸರ್ಪ ಯೋಗದಂತಹ ಸಂದರ್ಭಗಳು ರೂಪುಗೊಳ್ಳಬಹುದು. ಆದ್ದರಿಂದ, ನಾಗಪಂಚಮಿಯಂತಹ ಪವಿತ್ರ ಮತ್ತು ಶಾಂತಿಯುತ ದಿನದಂದು ಕಬ್ಬಿಣದಿಂದ ದೂರವಿರುವುದು ಉತ್ತಮವೆಂದು ಪರಿಗಣಿಸಲಾಗಿದೆ.

ಜಾನಪದ ಸಂಪ್ರದಾಯಗಳಲ್ಲಿ ನಿರ್ಬಂಧಗಳು:

ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸಾಂಪ್ರದಾಯಿಕ ಕುಟುಂಬಗಳಲ್ಲಿ,ಈ ದಿನ ಕಬ್ಬಿಣದ ಪಾತ್ರೆಗಳ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಲಾಗುತ್ತದೆ. ಈ ದಿನ ಮಹಿಳೆಯರು ಮಣ್ಣಿನ ಪಾತ್ರೆ ಅಥವಾ ತಾಮ್ರದಿಂದ ಮಾಡಿದ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಾರೆ.

ಕಬ್ಬಿಣವನ್ನು ಬಳಸಿದರೆ ಏನಾಗುತ್ತದೆ?

ಜ್ಯೋತಿಷಿಗಳ ಪ್ರಕಾರ, ನಾಗಪಂಚಮಿಯ ದಿನದಂದು ಕಬ್ಬಿಣವನ್ನು ಬಳಸಿದರೆ, ಅವರು ಸರ್ಪ ದೇವರಲ್ಲಿ ಕ್ಷಮೆಯಾಚಿಸಬೇಕು ಮತ್ತು ಸಂಜೆ ನಾಗ ಸ್ತೋತ್ರ ಅಥವಾ “ಓಂ ನಮಃ ನಾಗದೇವತಾಯ” ಮಂತ್ರವನ್ನು ಪಠಿಸಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:52 am, Sat, 26 July 25