Omkara Chanting Benefits: ಓಂಕಾರ ಪಠಣ ಮಾಡುವುದರಿಂದ ಏನೆಲ್ಲ ಪ್ರಯೋಜನಗಳಿವೆ ಗೊತ್ತಾ?

Omkara Chanting Benefits: ಓಂಕಾರ ಪಠಣ ಮಾಡುವುದರಿಂದ ಏನೆಲ್ಲ ಪ್ರಯೋಜನಗಳಿವೆ ಗೊತ್ತಾ?
ಓಂ ಕಾರ ಪಠಣ ಮಾಡುವುದರಿಂದ ಏನೆಲ್ಲ ಪ್ರಯೋಜನಗಳಿವೆ ಗೊತ್ತಾ?

ಓಂ ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ. ಓಂ ನಿಂದ ರಹಸ್ಯಮಯ ಶಾರೀರಿಕ ಉಪಯೋಗಗಳು ಉಂಟಾಗುತ್ತವೆ. ಇವುಗಳನ್ನು ನಿಮ್ಮದಾಗಿಸಿಕೊಂಡರೆ ಸರ್ವ ರೋಗಗಳು ನಿಯಂತ್ರಣ ಹೊಂದುತ್ತದೆ. ಅಂದರೆ ಓಂ ಜಪ ಮಾಡುವುದರಿಂದ ಮನಸ್ಸು ಮತ್ತು ಶರೀರವನ್ನು ಏಕಕಾಲಕ್ಕೆ ಸಕ್ರಿಯಗೊಳಿಸಿ, ಉಲ್ಲಸಿತರಾಗಬಹುದು.

TV9kannada Web Team

| Edited By: sadhu srinath

Nov 23, 2021 | 6:51 AM

ಓಂ ಪಠಣ (ॐ) ಎಂಬುದು ಒಂದು ಪವಿತ್ರ ಬೀಜಾಕ್ಷರ ಮಂತ್ರ. ಹಿಂದೂ, ಸಿಖ್, ಜೈನ ಮತ್ತು ಬೌದ್ಧ ಧರ್ಮಗಳಲ್ಲಿಯೂ ಓಂಕಾರವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಓಂ ಗೆ ತನ್ನದೇ ಆದ ಮಹತ್ವ ಇದೆ. ಓಂ ಉಚ್ಛಾರ ಮಾಡದೇ ಯಾವುದೇ ಪೂಜೆಗಳು ಸಂಪೂರ್ಣವಾಗುವುದೇ ಇಲ್ಲ. ಆದರೆ ಓಂ ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ. ಓಂ ನಿಂದ ರಹಸ್ಯಮಯ ಶಾರೀರಿಕ ಉಪಯೋಗಗಳು ಉಂಟಾಗುತ್ತವೆ. ಇವುಗಳನ್ನು ನಿಮ್ಮದಾಗಿಸಿಕೊಂಡರೆ ಸರ್ವ ರೋಗಗಳು ನಿಯಂತ್ರಣ ಹೊಂದುತ್ತದೆ. ಅಂದರೆ ಓಂ ಜಪ ಮಾಡುವುದರಿಂದ ಮನಸ್ಸು ಮತ್ತು ಶರೀರವನ್ನು ಏಕಕಾಲಕ್ಕೆ ಸಕ್ರಿಯಗೊಳಿಸಿ, ಉಲ್ಲಸಿತರಾಗಬಹುದು.

ಓಂ ಮತ್ತು ಥಾಯ್ ರಾಯ್ಡ್: ಓಂನ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥಾಯ್ ರಾಯ್ಡ್ ಗ್ರಂಥಿ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ. ಓಂ ಮತ್ತು ಭಯ: ನಿಮಗೆ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ಐದು ಬಾರಿ ದೀರ್ಘ ಶ್ವಾಸ ತೆಗೆದುಕೊಂದು ಓಂ ಎಂದು ಉಚ್ಛರಿಸಿ. ಓಂ ಮತ್ತು ಒತ್ತಡ: ಇದು ಶರೀರದ ವಿಷ ಅಂಶಗಳನ್ನು ದೂರ ಮಾಡುತ್ತದೆ. ಇದನ್ನು ಉಚ್ಛಾರ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಓಂ ಮತ್ತು ರಕ್ತಸಂಚಾರ: ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. ಓಂ ಎಂದು ಹೇಳುವುದರಿಂದ ರಕ್ತಸಂಚಾರ ಸುಗಮವಾಗತ್ತದೆ. ಓಂ ಮತ್ತು ಪಚನ ಕ್ರಿಯೆ: ಇದನ್ನು ಉಚ್ಛಾರ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ. ಓಂ ಮತ್ತು ಸ್ಪೂರ್ತಿ: ಇದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಪೂರ್ತಿ ಹರಿದಾಡುತ್ತದೆ. ಓಂ ಮತ್ತು ಸುಸ್ತು: ಆಯಾಸವನ್ನು ದೂರ ಮಾಡಲು ಸುಲಭ ಉಪಾಯ ಓಂ ಉಚ್ಛಾರಮಾಡುವುದು. ಓಂ ಮತ್ತು ನಿದ್ರೆ : ಸರಿಯಾಗಿ ನಿದ್ರೆ ಬರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾಡಿ. ಇದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ. ಓಂ ಮತ್ತು ಶ್ವಾಸಕೋಶ : ಓ ಉಚ್ಛಾರಣೆ ಶ್ವಾಸಕೋಶದ ತೊಂದರೆ ಕಡಿಮೆಯಾಗುತ್ತದೆ. ಓಂ ಮತ್ತು ಬೆನ್ನೆಲುಬು: ಓಂ ಉಚ್ಛಾರ ಮಾಡುವುದರಿಂದ ಉಂಟಾಗುವ ಕಂಪನದಿಂದ ಬೆನ್ನೆಲುಬು ಗಟ್ಟಿಯಾಗುತ್ತದೆ ಹಾಗೂ ಮುಂದೆ ಇದರಿಂದ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ.

ಹಿಂದೂ ಧರ್ಮದ ಪ್ರಕಾರ ಓಂಕಾರ ಎನ್ನುವುದು ಮೊದಲ ಶಬ್ದವಾಗಿದೆ. ಹಾಗಾಗಿ ಬ್ರಹ್ಮಾಂಡದಲ್ಲಿ ಓಂ ಎಂಬುದು ಅತ್ಯಂತ ಶಕ್ತಿಶಾಲಿ ಮತ್ತು ಮಹತ್ವಪೂರ್ಣ ಧ್ವನಿಯಾಗಿದೆ. ಹಾಗಾಗಿ ಓಂ ಅನ್ನು ಸರಿಯಾಗಿ ಜಪವಾಗಿ ಮಾಡುವುದರಿಂದ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಶಾಂತಿ ಮತ್ತು ಶಕ್ತಿಗಳು ಮೇಳೈಸುತ್ತವೆ.

ಓಂ ಜಪದಿಂದ ಇನ್ನೂ ಅನೇಕಾನೇಕ ಪ್ರಯೋಜನಗಳು: ಓಂಕಾರ ಪಠಣದಿಂದ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ಚಿಂತೆಯಿಂದ ಮುಕ್ತಗೊಳಿಸಿ, ಅಶಾಂತಿಯನ್ನು ದೂರ ಮಾಡುತ್ತದೆ. ನಿಮ್ಮ ಭಾವಗಳನ್ನು ಸಮತೋಲನದಲ್ಲಿ ಇಡುತ್ತದೆ. ಆತಂಕದ ಕ್ಷಣಗಳಲ್ಲಿಯೂ ಶಾಂತಚಿತ್ತದಿಂದ ಇರುವಂತೆ ಮಾಡುತ್ತದೆ. ಓಂಕಾರ ಹೇಳುವುದರಿಂದ ಮನಸ್ಸನ್ನು ಕೇಂದ್ರೀಕರಿಸಬಹುದು. ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸಿ, ಏಕಾಗ್ರತೆಯನ್ನು ಸುಧಾರಿಸುತ್ತದೆ. ನಿಮ್ಮನ್ನು ಹೆಚ್ಚು ಆಶಾವಾದಿಗಳನ್ನಾಗಿಸುತ್ತದೆ. ಕ್ರೋಧ, ಮದ, ಮೋಹದಂತಹ ವಿಕಾರಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಓಂಕಾರ ಹೇಳುವುದು ಅದಕ್ಕೆ ರಾಮಬಾಣವಾಗಿ ಪರಿಣಮಿಸುತ್ತದೆ.

ಪ್ರಾರಂಭದಲ್ಲಿ 108 ಬಾರಿ ಓಂಕಾರ ಪಠಣ ಮಾಡುತ್ತಾ, ನಿಧಾನವಾಗಿ 200-300 ಬಾರಿ ಹೇಳುವುದಕ್ಕೆ ಯತ್ನಿಸಬೇಕು. ತಿಂಗಳಲ್ಲಿ ಒಮ್ಮೆಯಾದರೂ 1008 ಬಾರಿ ಓಂ ಜಪ ಮಾಡಬೇಕು. ಓಂಕಾರ ಹೇಳಲು ಪ್ರಶಸ್ತವಾದ ಸಮಯವೆಂದರೆ ಬೆಳಗ್ಗೆ 6 ಗಂಟೆ, ಮಧ್ಯಾಹ್ನ 12 ಗಂಟೆ ಮತ್ತು ಸಾಯಂಕಾಲ 6 ಗಂಟೆ ಸಮಂಜಸವಾಗಿರುತ್ತದೆ.

Follow us on

Related Stories

Most Read Stories

Click on your DTH Provider to Add TV9 Kannada