
ಓಂ ಕೇವಲ ಶಬ್ದವಲ್ಲ, ಅದೊಂದು ಶಕ್ತಿ. ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ಬೌದ್ಧ, ಸಿಖ್ ಮತ್ತು ಜೈನ ಧರ್ಮದಲ್ಲಿಯೂ ಕೂಡ ಓಂ ಶಬ್ದವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಬ್ರಹ್ಮಾಂಡದ ಮೊದಲ ಶಬ್ದ ಎಂದು ಹೇಳಲಾಗುತ್ತದೆ. ಏಕೆಂದರೆ ಸೃಷ್ಟಿಯ ಪ್ರಾರಂಭದಲ್ಲಿ, ಓಂ ಎಂಬ ಶಬ್ದವು ಪ್ರತಿಧ್ವನಿಸಿ ಬ್ರಹ್ಮಾಂಡದಾದ್ಯಂತ ಹರಡಿ, ಆ ಬಳಿಕವೇ ಬ್ರಹ್ಮ ವಿಷ್ಣು ಮತ್ತು ಮಹೇಶ್ವರ ಕಾಣಿಸಿಕೊಂಡರು ಎಂಬ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ಹಾಗಾಗಿ ಓಂ ಎಂಬ ಮೂರು ಉಚ್ಚಾರಾಂಶ, ಅಂದರೆ ಅ, ಯು ಮತ್ತು ಮ ಗಳಿಂದ ಕೂಡಿದ ಈ ಪದವು ಸರ್ವಶಕ್ತ ಮಂತ್ರವಾಗಿದೆ. ಇದು ಎಲ್ಲಾ ಜೀವಿಗಳನ್ನು ಪ್ರಕೃತಿ ಮತ್ತು ಬ್ರಹ್ಮಾಂಡದೊಂದಿಗೆ ಸಂಪರ್ಕಿಸುತ್ತದೆ.
ಮುಂಜಾನೆ ಬೇಗ ಎದ್ದು ಓಂಕಾರ ಶಬ್ದವನ್ನು ಪಠಿಸುವುದು ಒಳ್ಳೆಯದು. ನಿಮ್ಮ ಸಮಯಕ್ಕೆ ಅನುಗುಣವಾಗಿ ಇದನ್ನು 5, 7, 10, 21 ಬಾರಿ ಉಚ್ಚರಿಸಬಹುದು. ನಿಯಮಿತವಾಗಿ ಇದನ್ನು ಹೇಳುವುದರಿಂದ ಮನಸ್ಸು ಹತೋಟಿಯಲ್ಲಿರುತ್ತದೆ. ಅಲ್ಲದೆ ಓಂ ಅನ್ನು ಕನಿಷ್ಠ 108 ಬಾರಿ ಪಠಿಸುವುದರಿಂದ ಇಡೀ ದೇಹವು ಒತ್ತಡದಿಂದ ಮುಕ್ತವಾಗಿರುತ್ತದೆ. ನಿಮಗೆ ಕೆಲವು ದಿನಗಳ ನಂತರ ಇದರ ಅರಿವಾಗುತ್ತದೆ, ದೇಹದಲ್ಲಿ ಹೊಸ ಶಕ್ತಿ ಮೂಡುತ್ತದೆ.
ನೀವು ಓಂಕಾರವನ್ನು ಮೌನವಾಗಿ ಅಥವಾ ಗಟ್ಟಿಯಾಗಿಯೂ ಪಠಿಸಬಹುದು. ಓಂ ಪದದ ನಿಯಮಿತವಾದ ಪಠಣದಿಂದ ದೇಹದಲ್ಲಿ ಇರುವ ಆತ್ಮವು ಜಾಗೃತಗೊಳ್ಳುತ್ತದೆ. ಇನ್ನು ನಿಮ್ಮ ಒತ್ತಡದ ಜೀವನಶೈಲಿಯಿಂದ ಮುಕ್ತಿ ಪಡೆಯಲು ಇದು ಉತ್ತಮ ಮಾರ್ಗವಾಗಿದೆ. ಓಂಕಾರವನ್ನು ಪಠಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಸಕಾರಾತ್ಮಕ ಆಲೋಚನೆ ಮಾಡಲು ನಿಮ್ಮನ್ನು ಪ್ರೇರೇಪಿಸುತ್ತದೆ. ಜೊತೆಗೆ ಹೊಟ್ಟೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪದೇ ಪದೇ ಹೊಟ್ಟೆ ನೋವು ಕಾಣಿಸಿಕೊಳ್ಳುವವರು ಓಂ ಪಠಣೆಯಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು? ಇದರಿಂದ ಸಿಗುವ ಫಲಾಫಲಗಳೇನು?
ಓಂ ಪಠಣವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಸೈನಸ್ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಓಂ ಪಠಿಸುವುದರಿಂದ ಹೃದಯರಕ್ತನಾಳದ ಪ್ರಯೋಜನಗಳೂ ಇವೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ದೇಹವನ್ನು ವಿಶ್ರಾಂತಿಗೊಳಿಸುತ್ತದೆ, ಅಲ್ಲದೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೆಚ್ಚು ಕೋಪ ಮಾಡಿಕೊಳ್ಳುವವರಿಗೆ ಓಂ ಅನ್ನು ಪಠಿಸುವುದಕ್ಕಿಂತ ಉತ್ತಮವಾದ ಮಾರ್ಗ ಯಾವುದೂ ಇಲ್ಲ. ಇನ್ನು ನಿದ್ರಾಹೀನತೆ ಸಮಸ್ಯೆ ಇರುವವರಿಗೆ ಇದು ರಾಮಬಾಣವಾಗಿದ್ದು ಕ್ಷಣಾರ್ಧದಲ್ಲಿ ಸಮಸ್ಯೆಯನ್ನು ಬಗೆಹರಿಸಿ ಸುಖ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ದೇಹದ ಆಯಾಸವನ್ನು ಕಡಿಮೆ ಮಾಡಲು ಇದಕ್ಕಿಂತ ಉತ್ತಮವಾದ ಯಾವುದೇ ಮಾರ್ಗವಿಲ್ಲ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:44 pm, Wed, 24 January 24