Papmochani Ekadashi: ಪಾಪಮೋಚನಿ ಏಕಾದಶಿ ದಿನ ಏನು ಮಾಡಬೇಕು, ಮಾಡಬಾರದು

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 04, 2024 | 4:54 PM

ಈ ಏಕಾದಶಿಯಂದು ಉಪವಾಸ ಮಾಡುವುದರಿಂದ, ತಿಳಿದೋ ತಿಳಿಯದೆಯೋ ಮಾಡಿದ ಎಲ್ಲಾ ಪಾಪಗಳಿಂದ ಪರಿಹಾರ ಸಿಗುತ್ತದೆ. ಜೊತೆಗೆ ಈ ಉಪವಾಸದ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಹಾಗಾಗಿ ಪಾಪಮೋಚಿನಿ ಏಕಾದಶಿ ಉಪವಾಸವನ್ನು ಆಚರಿಸುವ ಮೊದಲು ಆ ನಿಯಮಗಳ ಬಗ್ಗೆ ತಿಳಿದುಕೊಳ್ಳಿ, ಇದನ್ನು ನಿರ್ಲಕ್ಷಿಸಿದರೆ, ಈ ಉಪವಾಸದ ಪೂರ್ಣ ಫಲ ಸಿಗಲಾರದು.

Papmochani Ekadashi: ಪಾಪಮೋಚನಿ ಏಕಾದಶಿ ದಿನ ಏನು ಮಾಡಬೇಕು, ಮಾಡಬಾರದು
ಸಾಂದರ್ಭಿಕ ಚಿತ್ರ
Follow us on

ಚೈತ್ರ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನವನ್ನು ಪಾಪಮೋಚನಿ ಏಕಾದಶಿ ಎಂದು ಕರೆಯಲಾಗುತ್ತದೆ. ಪ್ರತಿ ತಿಂಗಳ ಏಕಾದಶಿಯಂದು, ವಿಷ್ಣುವನ್ನು ಭಕ್ತಿಯಿಂದ ಪೂಜಿಸಿ ಉಪವಾಸ ಮಾಡಿದರೆ, ಶ್ರೀ ಹರಿಯ ಆಶೀರ್ವಾದವು ಸಿಗುತ್ತದೆ ಎಂಬ ನಂಬಿಕೆಯಿದೆ. ಅದರಂತೆ ವರ್ಷದ ಮೊದಲ ತಿಂಗಳಲ್ಲಿ ಬರುವ ಏಕಾದಶಿಯ ದಿನ, ಜನರು ತಾವು ಮಾಡಿದ ಪಾಪಗಳಿಂದ ಮುಕ್ತಿ ಪಡೆಯಲು ಮತ್ತು ಜೀವನದಲ್ಲಿ ಸದ್ಗುಣಗಳನ್ನು ಪಡೆಯಲು ಈ ಉಪವಾಸವನ್ನು ಪೂರ್ಣ ಭಕ್ತಿಯಿಂದ ಆಚರಿಸುತ್ತಾರೆ. ಈ ಏಕಾದಶಿ ಉಪವಾಸ ಮಾಡುವವರು ಧರ್ಮಗ್ರಂಥಗಳಲ್ಲಿ ತಿಳಿಸಿರುವ ಕೆಲವು ಪ್ರಮುಖ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಈ ದಿನ ಉಪವಾಸ ಮತ್ತು ದಾನಗಳನ್ನು ಮಾಡುವುದರ ಜೊತೆಗೆ, ಪಾಪಮೋಚನಿ ಏಕಾದಶಿಯಂದು ವಿಷ್ಣು ದೇವನಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ಏಕಾದಶಿಯಂದು ಆಚರಣೆ ಮಾಡುವುದರಿಂದ, ತಿಳಿದೋ ತಿಳಿಯದೆಯೋ ಮಾಡಿದ ಎಲ್ಲಾ ಪಾಪಗಳಿಂದ ಪರಿಹಾರ ಸಿಗುತ್ತದೆ. ಜೊತೆಗೆ ಈ ಉಪವಾಸದ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಹಾಗಾಗಿ ಪಾಪಮೋಚಿನಿ ಏಕಾದಶಿ ಉಪವಾಸವನ್ನು ಆಚರಿಸುವ ಮೊದಲು ಆ ನಿಯಮಗಳ ಬಗ್ಗೆ ತಿಳಿದುಕೊಳ್ಳಿ, ಇದನ್ನು ನಿರ್ಲಕ್ಷಿಸಿದರೆ, ಈ ಉಪವಾಸದ ಪೂರ್ಣ ಫಲ ಸಿಗಲಾರದು.

ಪಾಪಮೋಚನಿ ಏಕಾದಶಿ ದಿನದಂದು ಏನು ಮಾಡಬೇಕು?

-ಏಕಾದಶಿ ಉಪವಾಸದ ದಿನದಂದು ದಾನ ಮಾಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಗತ್ಯ ಇರುವವರಿಗೆ ನಿಮ್ಮ ಕೈಲಾದಷ್ಟು ದಾನ ಮಾಡದ ಹೊರತು ಏಕಾದಶಿ ಉಪವಾಸವನ್ನು ಅಪೂರ್ಣ ಎಂಬ ನಂಬಿಕೆ ಇದೆ. ಆದ್ದರಿಂದ, ಈ ದಿನ ದಾನ ಮಾಡಿ.

-ಈ ದಿನ, ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಬಳಿಕ, ನಿಮ್ಮ ಮನೆಯಲ್ಲಿರುವ ತುಳಸಿ ಗಿಡಕ್ಕೆ ನೀರನ್ನು ಹಾಕಿ. ದಿನವಿಡೀ ಏನನ್ನೂ ಸೇವನೆ ಮಾಡಬಾರದು. ಇದು ಸಾಧ್ಯವಾಗದಿದ್ದರೆ ನೀವು ಹಣ್ಣುಗಳನ್ನು ತಿನ್ನಬಹುದು.

-ದೇವಾಲಯದಲ್ಲಿ ಆಹಾರ ಅಥವಾ ಧಾನ್ಯಗಳನ್ನು ದಾನ ಮಾಡಿ.

-ಬೆಳಿಗ್ಗೆ ಮತ್ತು ಸಂಜೆ, ತುಳಸಿ ಕಟ್ಟೆಯ ಬಳಿ ತುಪ್ಪದ ದೀಪವನ್ನು ಹಚ್ಚಿ ಐದು ಪ್ರದಕ್ಷಿಣೆ ಹಾಕಿ.

-ಸಂಜೆ ಸಮಯದಲ್ಲಿ, ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸಬೇಕು.

-ಪಾಪಮೋಚಿನಿ ಏಕಾದಶಿ ದಿನದಂದು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ.

ಪಾಪಮೋಚನಿ ಏಕಾದಶಿ ದಿನದಂದು ಏನು ಮಾಡಬಾರದು?

-ಧಾರ್ಮಿಕ ನಂಬಿಕೆಯ ಪ್ರಕಾರ, ಏಕಾದಶಿ ದಿನದಂದು ಅನ್ನ ಅಥವಾ ಯಾವುದೇ ರೀತಿಯ ತಾಮಸ ಆಹಾರವನ್ನು ಸೇವನೆ ಮಾಡಬಾರದು.

-ಈ ದಿನ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು. ಹಿಂದೂ ನಂಬಿಕೆಯ ಪ್ರಕಾರ, ಏಕಾದಶಿ ದಿನದಂದು ಹಳದಿ ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ.

-ಪಾಪಮೋಚನಿ ಏಕಾದಶಿ ದಿನದಂದು, ತುಳಸಿ ಎಲೆಗಳನ್ನು ಕೀಳಬಾರದು. ಒಂದು ದಿನ ಮುಂಚಿತವಾಗಿ ತುಳಸಿ ಎಲೆಗಳನ್ನು ಪೂಜೆಗೆ ಅರ್ಪಿಸಲು ಇರಿಸಿ.

-ಏಕಾದಶಿ ದಿನ, ವ್ಯಕ್ತಿಯು ತನ್ನ ಕೂದಲು, ಉಗುರುಗಳನ್ನು ಕತ್ತರಿಸಬಾರದು. ಇದನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಬಡತನ ಬರುತ್ತದೆ ಜೊತೆಗೆ ದುರಾದೃಷ್ಟವನ್ನು ಪ್ರತಿ ಹಂತದಲ್ಲಿಯೂ ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

-ಏಕಾದಶಿ ಉಪವಾಸವನ್ನು ಆಚರಿಸುವ ವ್ಯಕ್ತಿಯು ಬೇರೆಯವರು ದಾನ ಮಾಡಿದ ಆಹಾರವನ್ನು ತೆಗೆದುಕೊಳ್ಳಬಾರದು ಅಥವಾ ತಿನ್ನಬಾರದು.

-ಈ ದಿನ ಉಪವಾಸ ಮಾಡುವ ವ್ಯಕ್ತಿಯು ಯಾವುದೇ ವಿಷಯಕ್ಕೂ ಕೋಪ ಮಾಡಿಕೊಳ್ಳಬಾರದು. ಮನೆಯಲ್ಲಿ ಯಾವುದೇ ರೀತಿಯ ವಾದ ಅಥವಾ ಸಂಘರ್ಷ ವಾಗುವುದನ್ನು ತಪ್ಪಿಸಬೇಕು.

ಇದನ್ನೂ ಓದಿ: ಚೈತ್ರ ನವರಾತ್ರಿಯ ದಿನ ಈ 4 ವಸ್ತುಗಳನ್ನು ಖರೀದಿಸಬೇಡಿ, ಶಾಶ್ವತವಾಗಿ ಬಡವರಾಗುತ್ತೀರಿ!

ಪಾಪಮೋಚನಿ ಏಕಾದಶಿ ಉಪವಾಸದ ಸಮಯದಲ್ಲಿ ಏನನ್ನು ತಿನ್ನಬೇಕು ಮತ್ತು ತಿನ್ನಬಾರದು?

-ಏಕಾದಶಿ ಉಪವಾಸದ ಸಮಯದಲ್ಲಿ ಹಣ್ಣುಗಳನ್ನು ಮಾತ್ರ ಸೇವನೆ ಮಾಡಬಹುದು.

-ಅತಿಯಾಗಿ ಪರಿಮಳವಿರುವ ಯಾವುದೇ ರೀತಿಯ ಪದಾರ್ಥಗಳನ್ನು ತಿನ್ನಬಾರದು, ಏಕೆಂದರೆ ಇದು ದೇಹ ಮತ್ತು ಮನಸ್ಸಿನ ಕಲ್ಮಶವನ್ನು ಹೆಚ್ಚಿಸುತ್ತದೆ, ಆದ್ದರಿಂದ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಈ ದಿನ ಕಡ್ಡಾಯವಾಗಿ ತಿನ್ನಬಾರದು.

-ಕ್ಯಾರೆಟ್, ಎಲೆಕೋಸು, ಪಾಲಕ್ ಮುಂತಾದ ತರಕಾರಿಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಜೊತೆಗೆ ಅನ್ನವನ್ನು ಕೂಡ ಸೇವನೆ ಮಾಡಬಾರದು. ಈ ರೀತಿಯಾಗಿ ನೀವು ಭಕ್ತಿಯಿಂದ ಉಪವಾಸ ಆಚರಣೆ ಮಾಡಿದಲ್ಲಿ ನಿಮಗೆ ವಿಷ್ಣುವಿನ ಅನುಗ್ರಹವಾಗುತ್ತದೆ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ