Astrology Numerology: ಎಪ್ರಿಲ್ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೇಗಿರುತ್ತೆ ತಿಳಿಯಿರಿ!

ಜನ್ಮ ದಿನಾಂಕದ ಸಂಖ್ಯೆಯು ನಿಮ್ಮ ವ್ಯಕ್ತಿತ್ವ ಮತ್ತು ಸಾಮರ್ಥ್ಯವನ್ನು ತಿಳಿಸುತ್ತದೆ. ಈ ಮೂಲಕ ನೀವು ನಿಮ್ಮ ಗುಣ, ಅದೃಷ್ಟದ ಬಣ್ಣ ಮತ್ತು ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳಬಹುದು. ಇದು ತಿಂಗಳು ಮತ್ತು ತಾರೀಖಿಗೆ ಅನುಗುಣವಾಗಿ ಬದಲಾಗಬಹುದು. ನೀವು ಎಪ್ರಿಲ್ ತಿಂಗಳಿನಲ್ಲಿ ಯಾವ ದಿನದಂದು ಜನಿಸಿದ್ದೀರಾ? ಹಾಗಾದರೆ ನಿಮ್ಮ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Astrology Numerology: ಎಪ್ರಿಲ್ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೇಗಿರುತ್ತೆ ತಿಳಿಯಿರಿ!
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 04, 2024 | 12:08 PM

ಜ್ಯೋತಿಷ್ಯದಲ್ಲಿ ಸಂಖ್ಯಾಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ನೀವು ಜನಿಸಿದ ಸಂಖ್ಯೆಯ ಆಧಾರದ ಮೇಲೆ ನಿಮ್ಮ ಸ್ವಭಾವ ಹೇಗಿರುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಅಂದರೆ ಜನ್ಮ ದಿನಾಂಕದ ಸಂಖ್ಯೆಯು ನಿಮ್ಮ ವ್ಯಕ್ತಿತ್ವ ಮತ್ತು ಸಾಮರ್ಥ್ಯವನ್ನು ತಿಳಿಸುತ್ತದೆ. ಈ ಮೂಲಕ ನೀವು ನಿಮ್ಮ ಗುಣ, ಅದೃಷ್ಟದ ಬಣ್ಣ ಮತ್ತು ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳಬಹುದು. ಇದು ತಿಂಗಳು ಮತ್ತು ತಾರೀಖಿಗೆ ಅನುಗುಣವಾಗಿ ಬದಲಾಗಬಹುದು. ನೀವು ಎಪ್ರಿಲ್ ತಿಂಗಳಿನಲ್ಲಿ ಯಾವ ದಿನದಂದು ಜನಿಸಿದ್ದೀರಾ? ಹಾಗಾದರೆ ನಿಮ್ಮ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಜನನ ಸಂಖ್ಯೆ: 1,10, 19, 28

ಈ ಸಂಖ್ಯೆಯಲ್ಲಿ ಜನಿಸಿದವರು ನಾಯಕರಾಗುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಒಂದು ತಂಡವನ್ನು ಅಥವಾ ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ. ಇವರ ಅದೃಷ್ಟದ ಬಣ್ಣ ಕಡುಗೆಂಪು, ಅದೃಷ್ಟ ಸಂಖ್ಯೆ 8, ಇದು ಸಮೃದ್ಧಿ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಯಶಸ್ಸು ಧೈರ್ಯವನ್ನು ಅವಲಂಬಿಸಿರುತ್ತದೆ.

ಜನನ ಸಂಖ್ಯೆ: 2, 11, 20, 29

ಈ ದಿನ ಜನಿಸಿದ ವ್ಯಕ್ತಿಗಳು ಶಾಂತ ಸ್ವಭಾವದವರು. ಎಂತಹ ಕ್ಲಿಷ್ಟಕರ ಸಂದರ್ಭವನ್ನು ಕೂಡ ಬುದ್ದಿವಂತಿಕೆಯಿಂದ ಪರಿಹರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಕೋಪ ಬಂದರೂ ಕೂಡ ಪ್ರತಿಕ್ರಿಯಿಸುವುದಿಲ್ಲ. ಈ ಸಂಖ್ಯೆಯ ಅದೃಷ್ಟದ ಬಣ್ಣ ಬೂದು, ಅದೃಷ್ಟ ಸಂಖ್ಯೆ 4. ಶಾಂತ ನಡವಳಿಕೆಯೇ ಇವರ ಯಶಸ್ಸಾಗಿರುತ್ತದೆ.

ಜನನ ಸಂಖ್ಯೆ: 3, 12, 21, 30

ಈ ಸಂಖ್ಯೆಯಲ್ಲಿ ಜನಿಸಿದ ವ್ಯಕ್ತಿಗಳು ಸೃಜನಶೀಲರಾಗಿರುತ್ತಾರೆ. ಬುದ್ಧಿವಂತಿಕೆಯೇ ಇವರ ಅಸ್ತ್ರವಾಗಿರುತ್ತದೆ. ಹಳದಿ ಬಣ್ಣ ಇವರಿಗೆ ಮತ್ತಷ್ಟು ಅದೃಷ್ಟ ತಂದುಕೊಡುತ್ತದೆ, ಇವರ ಅದೃಷ್ಟ ಸಂಖ್ಯೆ 7. ಸಾಧ್ಯವಾದಷ್ಟು ಹೊಸ ವಿಷಯಗಳನ್ನು ಪ್ರಯತ್ನಿಸಿ. ಏಕೆಂದರೆ ನಿಮ್ಮ ಅನನ್ಯ ದೃಷ್ಟಿಕೋನವೇ ಪ್ರಗತಿಯ ಕೀಲಿಕೈ ಆಗಿರುತ್ತದೆ.

ಜನನ ಸಂಖ್ಯೆ: 4, 13, 22

ಈ ದಿನ ಜನಿಸಿದ ವ್ಯಕ್ತಿಗಳು ತಮ್ಮ ಪ್ರೀತಿಪಾತ್ರರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇವರ ಅದೃಷ್ಟದ ಬಣ್ಣ ಗಾಢ ಹಸಿರು, ಇದು ನಿಮ್ಮ ಕೌಶಲಗಳನ್ನು ಹೆಚ್ಚಿಸುತ್ತದೆ. ಈ ದಿನ ಜನಿಸಿದವರು ಪ್ರತಿ ದಿನದ ಸ್ಪಷ್ಟ ಯೋಜನೆಯನ್ನು ರಚಿಸಿಕೊಂಡು ಆ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಿ. ಇವರ ಅದೃಷ್ಟದ ಸಂಖ್ಯೆ 6, ಇದು ಜವಾಬ್ದಾರಿಯನ್ನು ಪ್ರತಿನಿಧಿಸುತ್ತದೆ.

ಜನನ ಸಂಖ್ಯೆ: 5, 14, 23

ಈ ಸಂಖ್ಯೆಯಲ್ಲಿ ಜನಿಸಿದ ವ್ಯಕ್ತಿಗಳು ಸಾಹಸಮಯ ಪ್ರವೃತ್ತಿಯನ್ನು ಇಷ್ಟ ಪಡುತ್ತಾರೆ. ಇವರ ಅದೃಷ್ಟದ ಬಣ್ಣ ನೀಲಿ, ಅದೃಷ್ಟ ಸಂಖ್ಯೆ 3, ಇದು ಸಂತೋಷ ಮತ್ತು ಸಂಭ್ರಮವನ್ನು ಸೂಚಿಸುತ್ತದೆ. ಸಾಧ್ಯವಾದಲ್ಲಿ ನೀವು ಅನುಭವಿಸಿದ ಸಾಹಸ ಕಥೆಗಳನ್ನು ಹೊಸ ಜನರೊಂದಿಗೆ ಹಂಚಿಕೊಳ್ಳಿ. ಇದು ನಿಮಗೆ ಭರಪೂರ ಸಂತೋಷವನ್ನು ಬಹುಮಾನವಾಗಿ ನೀಡುತ್ತದೆ.

ಜನನ ಸಂಖ್ಯೆ: 6, 15, 24

ಈ ದಿನ ಜನಿಸಿದ ವ್ಯಕ್ತಿಗಳು ಸಹಾಯ ಮಾಡುವ ಮನೋಭಾವದವರಾಗಿದ್ದು, ಚಿಕ್ಕದಾಗಲಿ ದೊಡ್ಡದಾಗಲಿ, ಮತ್ತೊಬ್ಬರಿಗೆ ಸಹಾಯ ಮಾಡಿ ಸಂತೋಷ ಪಡುತ್ತಾರೆ. ಲ್ಯಾವೆಂಡರ್ ಇವರ ಅದೃಷ್ಟದ ಬಣ್ಣವಾಗಿದ್ದು, 9 ಅದೃಷ್ಟದ ಸಂಖ್ಯೆಯಾಗಿದೆ. ಇವರ ಸುತ್ತಮುತ್ತಲಿರುವವರು ಕಷ್ಟ ಪಡುವುದನ್ನು ಈ ವ್ಯಕ್ತಿಗಳು ಎಂದಿಗೂ ಸಹಿಸುವುದಿಲ್ಲ.

ಜನನ ಸಂಖ್ಯೆ: 7, 16, 25

ಈ ಸಂಖ್ಯೆಯಲ್ಲಿ ಜನಿಸಿದ ವ್ಯಕ್ತಿಗಳು ಎಂತಹ ಸಂದರ್ಭದಲ್ಲಿಯೂ ಸತ್ಯವನ್ನೇ ಹೇಳುತ್ತಾರೆ. ಈ ದಿನ ಜನಿಸಿದವರ ಅದೃಷ್ಟದ ಬಣ್ಣ ನೀಲಿ. ಅದೃಷ್ಟ ಸಂಖ್ಯೆ 5. ಇದು ಹೊಂದಾಣಿಕೆ ಮತ್ತು ಬದಲಾವಣೆಯನ್ನು ಸೂಚಿಸುತ್ತದೆ. ಹೊಸ ದೃಷ್ಟಿಕೋನಗಳಿಗೆ ಮುಕ್ತರಾಗಿರಿ.

ಜನನ ಸಂಖ್ಯೆ: 8, 17, 26

ಈ ದಿನ ಜನಿಸಿದ ವ್ಯಕ್ತಿಗಳು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಇವರ ಅದೃಷ್ಟದ ಬಣ್ಣ ಚಿನ್ನದ ಬಣ್ಣ ಅಥವಾ ಹಳದಿ ಬಣ್ಣ. ಅದೃಷ್ಟ ಸಂಖ್ಯೆ 1, ಇವರಲ್ಲಿ ನಾಯಕತ್ವದ ಗುಣವಿರುತ್ತದೆ. ತಮ್ಮ ಗುರಿ ಸಾಧನೆಗೆ ದೃಢನಿಶ್ಚಯವಿರುತ್ತದೆ. ಈ ತಿಂಗಳಲ್ಲಿ ಜನಿಸಿದವರು ಕೆಲಸದಲ್ಲಿ ಉನ್ನತ ಜವಾಬ್ದಾರಿ ತೆಗೆದುಕೊಳ್ಳುವುದು ಅಥವಾ ಹೊಸ ಉದ್ಯಮಗಳನ್ನು ಪ್ರಾರಂಭಿಸುವುದರತ್ತ ಗಮನಹರಿಸಬಹುದು.

ಜನನ ಸಂಖ್ಯೆ: 9, 18, 27

ಈ ಸಂಖ್ಯೆಯಲ್ಲಿ ಜನಿಸಿದ ವ್ಯಕ್ತಿಗಳು ಸಹಾಯ ಮಾಡುವುದಕ್ಕೆ ಹೆಸರುವಾಸಿಯಾಗಿರುತ್ತಾರೆ. ಹಸಿರು ಇವರ ಅದೃಷ್ಟದ ಬಣ್ಣವಾಗಿದ್ದು, ಅದೃಷ್ಟ ಸಂಖ್ಯೆ 2. ಇವರು ಇತರರಿಗೆ ಸಹಾಯ ಮಾಡುವುದರ ಜೊತೆಗೆ ಎಲ್ಲರನ್ನೂ ಸುಲಭವಾಗಿ ನಂಬುತ್ತಾರೆ. ಇದು ಅವರಿಗೆ ಒಳ್ಳೆಯದನ್ನು ಮಾಡಬಹುದು, ಕೆಲವೊಮ್ಮೆ ಅವರಿಗೆ ಮುಳುವಾಗಬಹುದು. ಹಾಗಾಗಿ ಜಾಗೃತರಾಗಿರಿ.

Published On - 11:27 am, Thu, 4 April 24

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ