Papmochani Ekadashi 2024: ಪಾಪಮೋಚನಿ ಏಕಾದಶಿಯಂದು ವಿಷ್ಣುವಿಗೆ ಈ ರೀತಿ ಪೂಜೆ ಮಾಡಿ!
ಈ ವರ್ಷ ಚೈತ್ರ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು, ಪಾಪಮೋಚನಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ಏಕಾದಶಿ ಉಪವಾಸದ ಸಮಯದಲ್ಲಿ ವಿಷ್ಣು ಮಂತ್ರವನ್ನು ಪಠಿಸುವುದು ಎಲ್ಲಾ ರೀತಿಯಿಂದಲೂ ಉತ್ತಮವೆಂದು ಪರಿಗಣಿಸಲಾಗಿದೆ. ಇದರಿಂದ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ಜೀವನದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ.
ಹಿಂದೂ ಧರ್ಮದಲ್ಲಿ ಮಹಿಳೆಯರು ಪ್ರತಿ ಏಕಾದಶಿಯಂದು ಕಟ್ಟುನಿಟ್ಟಾಗಿ ಉಪವಾಸವನ್ನು ಆಚರಿಸಿ, ವಿಷ್ಣುವನ್ನು ಭಕ್ತಿಯಿಂದ ಪೂಜಿಸುತ್ತಾರೆ. ಈ ವರ್ಷ ಚೈತ್ರ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು, ಪಾಪಮೋಚನಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ಏಕಾದಶಿ ಉಪವಾಸದ ಸಮಯದಲ್ಲಿ ವಿಷ್ಣು ಮಂತ್ರವನ್ನು ಪಠಿಸುವುದು ಎಲ್ಲಾ ರೀತಿಯಿಂದಲೂ ಉತ್ತಮವೆಂದು ಪರಿಗಣಿಸಲಾಗಿದೆ. ಇದರಿಂದ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ಜೀವನದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ.
ಪ್ರತಿ ವರ್ಷ ಪಾಪಮೋಚನಿ ಏಕಾದಶಿ ವ್ರತವನ್ನು ಭಕ್ತಿ ಶ್ರದ್ದೆಯಿಂದ ಆಚರಿಸಲಾಗುತ್ತದೆ. ಈ ಬಾರಿಯ ಉಪವಾಸವನ್ನು ಎ. 5 ರಂದು ಆಚರಿಸಲಾಗುತ್ತದೆ. ಏಕಾದಶಿ ವ್ರತದ ದಿನ ವಿಷ್ಣು ಮತ್ತು ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯನ್ನು ಪೂಜಿಸುವ ನಿಯಮವಿದೆ. ಜೊತೆಗೆ ಈ ದಿನ ದೇವರನ್ನು ಸಂತುಷ್ಠಿ ಪಡಿಸಲು ಭಕ್ತಿಯಿಂದ ಉಪವಾಸವನ್ನು ಸಹ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಬೇಡಿ ಬಂದ ಭಕ್ತನಿಗೆ ಸಂತೋಷ, ಶಾಂತಿ ಮತ್ತು ನೆಮ್ಮದಿ ಎಲ್ಲವೂ ಸಿಗುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಪಾಪಮೋಚನಿ ಏಕಾದಶಿಯ ಪೂಜಾ ವಿಧಾನ ಹೇಗಿರಬೇಕು? ಇಲ್ಲಿದೆ ಮಾಹಿತಿ.
ಪಾಪಮೋಚನಿ ಏಕಾದಶಿಯ ಶುಭ ಸಮಯ
ಈ ವರ್ಷ ಪಾಪಮೋಚನಿ ಏಕಾದಶಿ ಉಪವಾಸವನ್ನು ಎ. 5 ರಂದು ಆಚರಿಸಲಾಗುತ್ತದೆ. ಈ ವ್ರತವು ಎ. 4 ರಂದು ಸಂಜೆ 4:15 ಕ್ಕೆ ಪ್ರಾರಂಭವಾಗಿ ಎ. 5 ರಂದು ಮಧ್ಯಾಹ್ನ 1:28 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಪಾಪಮೋಚನಿ ಏಕಾದಶಿ ಉಪವಾಸವು ಉದಯ ತಿಥಿಯ ಪ್ರಕಾರ ಎ. 5 ರಂದು ಆಚರಣೆ ಮಾಡಲಾಗುತ್ತದೆ.
ಪಾಪಮೋಚನಿ ಏಕಾದಶಿಯ ಪೂಜಾ ವಿಧಾನ;
-ಈ ಪಾಪಮೋಚನಿ ಏಕಾದಶಿ ದಿನದಂದು, ಮುಂಜಾನೆ ಬೇಗನೆ ಎದ್ದು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ.
-ಇದಾದ ಬಳಿಕ, ಮನೆಯ ದೇವರ ಕೋಣೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ನಂತರ ವಿಷ್ಣು ಮತ್ತು ಲಕ್ಷ್ಮೀ ದೇವಿಯ ವಿಗ್ರಹ ಅಥವಾ ಫೋಟೋ ಇದ್ದಲ್ಲಿ ಅದನ್ನು ಮಣೆಯ ಮೇಲೆ ಇಟ್ಟು ಅಲಂಕಾರ ಮಾಡಿ.
-ವಿಷ್ಣು ದೇವರಿಗೆ ಪಂಚಾಮೃತ ಅಭಿಷೇಕ ಮಾಡಿ, ಹಳದಿ ಹೂವನ್ನು ಅರ್ಪಿಸಿ, ಅರಿಶಿನ ತಿಲಕವನ್ನು ಹಚ್ಚಿರಿ.
-ವಿಷ್ಣುವಿನ ಆರಾಧನೆಯಲ್ಲಿ ತುಳಸಿ ಎಲೆಗಳನ್ನು ಸೇರಿಸಲು ಮರೆಯದಿರಿ.
-ವಿಷ್ಣುವನ್ನು ಮೆಚ್ಚಿಸಲು ವಿಷ್ಣು ಚಾಲೀಸಾವನ್ನು ಪಠಿಸಿ.
-ಆರತಿ ಮಾಡುವ ಮೂಲಕ ಭಕ್ತಿಯಿಂದ ಪೂಜೆ ಮಾಡಿ.
ಇದನ್ನೂ ಓದಿ: ಸೋಮವತಿ ಅಮಾವಾಸ್ಯೆಯಂದು ಈ 5 ವಸ್ತುಗಳನ್ನು ದಾನ ಮಾಡಿ!
ಪಾಪಮೋಚನಿ ಏಕಾದಶಿಯ ಮಹತ್ವವೇನು?
ಹಿಂದೂ ಧರ್ಮದಲ್ಲಿ, ಪಾಪಮೋಚನಿ ಏಕಾದಶಿ ಉಪವಾಸ ಮಾಡುವ ಮೂಲಕ, ವ್ಯಕ್ತಿಯು ಎಲ್ಲಾ ರೀತಿಯ ರೋಗಗಳಿಂದ ಮುಕ್ತನಾಗುತ್ತಾನೆ ಜೊತೆಗೆ ಸಂತಾನ ಭಾಗ್ಯ ಇಲ್ಲದ ದಂಪತಿಗಳಿಗೆ ಸಂತಸದ ವಿಷಯ ಕೇಳಿಬರುತ್ತದೆ. ಈ ಉಪವಾಸದಿಂದ ಭಕ್ತರ ಎಲ್ಲಾ ಮಾನಸಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದರೊಂದಿಗೆ, ಈ ಉಪವಾಸವು ಜನರನ್ನು ಪಾಪದಿಂದ ಪಾರು ಮಾಡುತ್ತದೆ. ಮನೆಯಲ್ಲಿ ಜೀವನ ಪೂರ್ತಿ ಸುಖ, ಶಾಂತಿ ಮತ್ತು ನೆಮ್ಮದಿ ಎಲ್ಲವೂ ನೆಲೆಸಿರುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ