ಪೋಷಕರು ಯಾವಾಗಲೂ ತಮ್ಮ ಮಕ್ಕಳ ಬಗ್ಗೆ ಚಿಂತಿಸುತ್ತಾರೆ. ತನ್ನ ಮಗು ಹೇಗೆ ಬೆಳೆಯುತ್ತದೆ? ಅದರ ಭವಿಷ್ಯ ಹೇಗಿರುತ್ತದೆ? ಅವನು ಬೆಳೆದು ನಿಂತಾಗ ಏನಾಗುತ್ತಾನೆ? ಎಂದೆಲ್ಲಾ ಬಾಲ್ಯದಿಂದಲೂ ಪೋಷಕರು ತಮ್ಮ ಮಕ್ಕಳ ಬಗ್ಗೆ ಚಿಂತೆ ನಡೆಸುತ್ತಿರುತ್ತಾರೆ. ಮತ್ತು ಅವರ ಭವಿಷ್ಯಕ್ಕಾಗಿ ಸೂಕ್ತ ಮುಂಜಾಗ್ರತೆ ವಹಿಸುತ್ತಾರೆ. ಮಕ್ಕಳ ಬಾಲ್ಯದ ಅಭ್ಯಾಸಗಳು… ಒಳ್ಳೆಯದು ಅಥವಾ ಕೆಟ್ಟದ್ದುಆಗಿರುತ್ತದೆ. ನಕಾರಾತ್ಮಕ ಅಭ್ಯಾಸಗಳು ಅವರನ್ನು ಬೇಗನೆ ಹಾಲಾಗಿಸುತ್ತದೆ ಎಂಬುದು ಸಾಮಾನ್ಯ ಅನಿಸಿಕೆ. ಅದಕ್ಕಾಗಿಯೇ ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಕೆಲವು ಧನಾತ್ಮಕ ಪೋಷಕ ವಿಷಯಗಳನ್ನು ಕಲಿಸುತ್ತಾರೆ. ಆದರೆ ಕೆಲ ಪೋಷಕರು ಮಕ್ಕಳ ಪಾಲನೆಗೆ ಗಮನ ಕೊಡಲು ವಿಫಲರಾಗುತ್ತಾರೆ ಅಥವಾ ಕೆಲವು ಪ್ರಮುಖ ವಿಷಯಗಳನ್ನು ಅರ್ಥಮಾಡಿಕೊಳ್ಳಲು ವಿಫಲವಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಆಚಾರ್ಯ ಚಾಣಕ್ಯ ಅವರ ಪ್ರಕಾರ, ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಬೇಕಾದ 3 ವಿಷಯಗಳಿವೆ. ಇವುಗಳಿಂದ ಮಕ್ಕಳು ಜೀವನದಲ್ಲಿ ಯಶಸ್ಸು ಸಾಧಿಸುವುದಲ್ಲದೆ ದೇಶದ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕುತ್ತಾರೆ ಎಂದು ಚಾಣಕ್ಯ ಹೇಳಿದರು.
ಸತ್ಯದ ಹಾದಿಯಲ್ಲಿ ನಡೆಯಲು ಕಲಿಸಿ
ಯಾರೇ ಇದ್ದರೂ ಯಾವುದಕ್ಕೂ ಸುಳ್ಳನ್ನು ಆಶ್ರಯಿಸಬೇಡಿ ಎಂದು ಚಾಣಕ್ಯ ಹೇಳಿದರು. ಸತ್ಯದ ಮಾರ್ಗವನ್ನು ಅನುಸರಿಸುವ ಜನರಿಗೆ ಕೆಟ್ಟದ್ದು ಆಗುವುದಿಲ್ಲ. ಅಂತಹವರು ತಮ್ಮ ಜೀವನದಲ್ಲಿ ಅಲ್ಪ ಸಮಸ್ಯೆಗಳನ್ನು ಹೊಂದಿರುತ್ತಾರೆ. ಸುಳ್ಳನ್ನು ಮುಚ್ಚಿಡಬೇಕಾದರೆ ಇನ್ನಷ್ಟು ಮತ್ತಷ್ಟು ಸುಳ್ಳನ್ನು ಹೇಳಬೇಕಾಗುತ್ತದೆ. ಆದ್ದರಿಂದ ಮಕ್ಕಳನ್ನು ಬಾಲ್ಯದಿಂದಲೇ ಸತ್ಯದ ಮಾರ್ಗದಲ್ಲಿ ನಡೆಯುವಂತೆ ಮಾಡಬೇಕು. ಅಂತಹ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ. ಅದಕ್ಕಾಗಿಯೇ ಚಾಣಕ್ಯ ಯಾವಾಗಲೂ ಮಕ್ಕಳು ನೈಜವಾದ, ನಿಜವಾದ, ಸತ್ಯವಾದ ಮಾರ್ಗದಲ್ಲಿ ನಡೆಯುವಂತೆ ಚಾಣಕ್ಯ ಸಲಹೆ ನೀಡುತ್ತಾರೆ.
ಶಿಸ್ತುಬದ್ಧವಾಗಿರಲು ಕಲಿಸಿ
ಪ್ರತಿಯೊಬ್ಬರ ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಏಕೆಂದರೆ ಅದರಿಂದ ಎಲ್ಲೆಡೆ ಶಿಸ್ತುಬದ್ಧವಾಗಿ ಜೀವನ ಅನುಸರಿಸುವುದು ಅಭ್ಯಾಸವಾಗಿ ಪರಿಣಮಿಸುತ್ತದೆ. ಶಾಲೆಗಳು, ಕಾಲೇಜುಗಳು ಅಥವಾ ಕಚೇರಿಗಳಲ್ಲಿ ನಿಯಮಿತ ಶಿಸ್ತುಬದ್ಧ ಜೀವನ ಅನುಸರಿಸುವುದು ಅಭ್ಯಾಸವಾಗುತ್ತದೆ. ಆದ್ದರಿಂದ ಮಕ್ಕಳು ಬಾಲ್ಯದಿಂದಲೇ ಶಿಸ್ತಿನ ಜೀವನ ನಡೆಸುವ ಅಭ್ಯಾಸವನ್ನು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಅವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ವ್ಯಕ್ತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಮಾಯವಾಗುತ್ತವೆ. ಶಿಸ್ತಿನ ವ್ಯಕ್ತಿಗೆ ಸಮಾಜದಲ್ಲಿ ಗೌರವವಿದೆ. ಅವರ ಆರೋಗ್ಯವೂ ಇತರರಿಗಿಂತ ಉತ್ತಮವಾಗಿರುತ್ತದೆ. ಶಿಸ್ತು ಒಬ್ಬ ವ್ಯಕ್ತಿಗೆ ಸಮಯದ ಮೌಲ್ಯವನ್ನು ತೋರಿಸುತ್ತದೆ. ಆಚಾರ್ಯ ಚಾಣಕ್ಯ ಹೇಳುವಂತೆ ಪ್ರಪಂಚದಲ್ಲಿ ಸಮಯಕ್ಕಿಂತ ಶಕ್ತಿಯುತವಾದದ್ದು ಯಾವುದೂ ಇಲ್ಲ.
ಉತ್ತಮ ಮೌಲ್ಯಗಳನ್ನು ನೀಡಿ
ಒಬ್ಬ ವ್ಯಕ್ತಿಯು ಹೇಗೆ ಇರುತ್ತಾನೆ ಎಂಬುದು ಅವನ ದೇಹ ಸ್ವರೂಪದಿಂದ ನಿರ್ಧರಿಸಲ್ಪಡುವುದಿಲ್ಲ. ಅದು ಅವನ ನಡವಳಿಕೆಯಿಂದ ನಿರ್ಧರಿಸಲ್ಪಡುತ್ತದೆ. ಬಾಲ್ಯದಿಂದಲೂ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಮೂಲಕ, ಅವರು ಎಂದಿಗೂ ತಮ್ಮ ಹೆತ್ತವರ ಹೆಸರನ್ನು ಕೆಡಿಸಲು ಬಯಸುವುದಿಲ್ಲ. ಉನ್ನತ ಮೌಲ್ಯಗಳನ್ನು ಹೊಂದಿರುವ ಜನರು ಸಮುದಾಯದಲ್ಲಿ ಗೌರವವನ್ನು ಪಡೆಯುತ್ತಾರೆ. ಆದರೆ ಅವರ ಕುಟುಂಬಕ್ಕೆ ಪ್ರತಿಷ್ಠೆಯನ್ನು ತರುತ್ತಾರೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಶಿಕ್ಷಣ ನೀಡಿ ಬದುಕಿನ ನಿಜವಾದ ಆದರ್ಶಗಳನ್ನು ಪರಿಚಯಿಸಬೇಕು. ಆಚಾರ್ಯ ಚಾಣಕ್ಯ ಈ ಬಗ್ಗೆ ಹೇಳುವುದೇನೆಂದರೆ ಮಕ್ಕಳ ನಡವಳಿಕೆಯಲ್ಲಿ ಪ್ರೀತಿ, ಸೌಹಾರ್ದತೆ, ಪರಿಶುದ್ಧತೆ, ಸಹಜತೆ ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಕಾಳಜಿ ವಹಿಸಬೇಕು. ಇದನ್ನು ಮಾಡುವುದರಿಂದ ಮಗುವಿಗೆ ಅವನ ಭವಿಷ್ಯದಲ್ಲಿ ಹೆಚ್ಚು ಸಹಾಯವಾಗುತ್ತದೆ. ಸಮಾಜವೂ ಅಭಿವೃದ್ಧಿಯಾಗುತ್ತದೆ.