ಯಾವುದನ್ನೇ ಆಗಲಿ ಪಡೆಯಲು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ, ಅದಕ್ಕೂ ಒಂದು ಮೌಲ್ಯ ಇರುತ್ತದೆ. ಅಸಭ್ಯತೆ, ಮುಂಗೋಪಿತನ ಆದರೂ ಅಷ್ಟೇ, ಅದಕ್ಕೂ ಬೆಲೆ ತೆರಬೇಕಾಗುತ್ತದೆ. ಈ ದುರ್ಗುಣ ಹೊಂದಿರುವವರು ಜೀನವದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ. ಕುಟುಂಬಸ್ಥರು, ಸ್ನೇಹಿತ ವರ್ಗ, ಸುತ್ತಮುತ್ತಲ ಜನರು ಇಂತಹವರನ್ನು ಉಪೇಕ್ಷಿಸುವುದು ಜಾಸ್ತಿ. ಅದೂ ಸಹಜವೇ! ಯಾರು ತಾನೇ ಇಂತಹ ಅಸಭ್ಯರ ಜೊತೆ ಗುರುತಿಸಿಕೊಳ್ಳಲು ಬಯಸುತ್ತಾರೆ.
ಅಷ್ಟಕ್ಕೂ ಅಸಭ್ಯವಾಗಿರುವುದು ತುಂಬಾ ಸುಲಭ. ಆದರೆ ಶಾಂತವಾಗಿರುವುದು, ಇಂದ್ರಿಯನಿಗ್ರಹ ಮಾಡಿಕೊಂಡು ಸಂಯಮದಿಂದ ಇರುವುದು ನಿಜಕ್ಕೂ ಕಠಿಣವೇ ಸರಿ. ತುಂಬಾ ಪ್ರಯಾಸ ಪಡಬೇಕಾಗುತ್ತದೆ. ಹಾಗಂತ ಎಲ್ಲರೂ ಅಸಭ್ಯರು ಆಗಿರುವುದಿಲ್ಲ. ಪ್ರತಿಕೂಲ ಪರಿಸ್ಥಿತಿಗಳು, ಪ್ರತಿಕೂಲ ವಾತಾವರಣಗಳು ನಮ್ಮನ್ನು ಅಸಭ್ಯತನಕ್ಕೆ ತಳ್ಳುತ್ತವೆ. ಆದರೆ ಎಕ್ಸಾಕ್ಟ್ಲಿ ಅಂತಹ ಸಂದರ್ಭಗಳಲ್ಲಿಯೇ ನಾವು ನಮ್ಮ ತನ ಕಾಯ್ದುಕೊಂಡು, ಸಭ್ಯರಾಗಿ ಉಳಿಯಬೇಕಾಗುತ್ತದೆ. ಇನ್ನು ಜ್ಯೋತಿಷ್ಯದ ಅನುಸಾರ ಮೂರು ರಾಶಿಯವರು ತುಂಬಾ ಕಠೋರರು, ಅಸಭ್ಯರು, ಅಶಿಸ್ತಿನ ಜನರು ಆಗಿರುತ್ತಾರೆ.
ಮಿಥುನ ರಾಶಿ:
ಮಿಥುನ ರಾಶಿಯವರು ತುಂಬಾ ನೀರಸವಾಗಿರುತ್ತಾರೆ. ಆದರೆ ಇದು ಅಂತರ್ಗತವಾಗಿ ಅವರಲ್ಲಿ ಹುದುಗಿರುವ ಸ್ವಭಾವ ಅಲ್ಲ. ಒಳ್ಳೆಯ ಮೂಡ್ನಲ್ಲಿ ಇಲ್ಲದಿದ್ದಾಗ ಅಂತಹ ಕೆಟ್ಟ ಸ್ವಭಾವ ಪ್ರಕಟವಾಗುತ್ತದೆ.
ತುಲಾ ರಾಶಿ:
ತುಲಾ ರಾಶಿಯವರು ಆಗಾಗ ಸ್ವಾರ್ಥಿಗಳು, ಅಸಭ್ಯರು, ಮುಂಗೋಪಿಗಳು ಆಗುತ್ತಿರುತ್ತಾರೆ. ಇವರು ಜನ ಪ್ರಿಯರೂ ಆಗಿರುತ್ತಾರೆ. ಆದರೆ ಅವರು ಬಯಸಿದ್ದನ್ನು ಸಾಧಿಸಿಕೊಳ್ಳಲು ಆಗದೇ ಇದ್ದಾಗ ತಮ್ಮ ಎದುರಿಗಿನ ಜನರ ಮೇಲೆ ಅಸಭ್ಯ ವ್ಯಕ್ತಿತ್ವ ಪ್ರದರ್ಶನಕ್ಕೆ ಇಡುತ್ತಾರೆ. ತುಲಾ ರಾಶಿಯವರು ಸರಿಯಾದ ಮೂಡ್ನಲ್ಲಿ ಇಲ್ಲಾ ಅಂದಾಗ ಅಂತಹವರಿಂದ ದೂರವುಳಿಯುವದೇ ಕ್ಷೇಮ, ಉಚಿತ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರು ಕೆಟ್ಟ ಮನಸ್ಸಿನವರಲ್ಲ. ಆದರೆ ಅವರು ಕೆಲವು ನಿರ್ದಿಷ್ಟ ವ್ಯಕ್ತಿಗಳ ಜೊತೆ ತುಂಬಾ ಕಠಿಣರಾತ್ತಾರೆ. ಏಕೆಂದರೆ ಅಂತಹವರು ಇವರಿಗೆ ಸ್ವಭಾವತಃ ಇಷ್ಟವಿರುವುದಿಲ್ಲ. ವೃಶ್ಚಿಕ ರಾಶಿಯವರಿಗೆ ಕೆಲವರ ಜೊತೆ ಇಚ್ಛೆಯಿರುವುದಿಲ್ಲ. ಅಂತಹವರು ತಮ್ಮೊಂದಿಗೆ ಸಮಾನಮನಸ್ಕರು ಅಲ್ಲ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ. ಹಾಗಾಗಿ ಅಂತಹವರು ಎದುರಾದಾಗ ವೃಶ್ಚಿಕ ರಾಶಿಯವರು ತಮ್ಮ ಅಸಭ್ಯತೆ ಪ್ರದರ್ಶಿಸುತ್ತಾರೆ. ಇವ್ರ ವೈಬ್ಸ್ ಅವರೊಂದಿಗೆ ತಾಳಮೇಳ ಆಗದೆ ಸ್ನೇಹಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಹಾಗಾಗಿ ಇಂತಹ ವೃಶ್ಚಿಕ ರಾಶಿಯವರ ಜೊತೆ ಮಾತುಕತೆ ನಡೆಸುವ ಮುನ್ನ ತುಂಬಾ ಎಚ್ಚರಿಕೆಯಿಂದಿದ್ದು, ಜಾಗ್ರತೆಯಿಂದ ಇರಬೇಕಾಗುತ್ತದೆ.
(people with these 3 zodiac signs are rude and Uncultured know about these zodiac signs)