New Year 2022: ವರ್ಷದ ಕೊನೆಯ ಶನಿವಾರ, ಇಂದು ಶನಿ ಮಹಾತ್ಮನ ಕೃಪಾಕಟಾಕ್ಷ ಬೇಡುವುದು ಹೇಗೆ?
ಇಂದಿನ ಶನಿವಾರಕ್ಕೆ ವಿಶೇಷ ಯೋಗವಿದೆ. ಇಂದು ಶನಿ ದೇವನ ಪ್ರಕೋಪವನ್ನು ಕಡಿಮೆ ಮಾಡಿಕೊಳ್ಳಲು ಪುಷ್ಯ ಮಾಸದ ಕೃಷ್ಣ ಪಕ್ಷದಲ್ಲಿ ಷಷ್ಠಿ ತಿಥಿ ಬಂದಿದೆ. ಇಂದು ಚಂದ್ರ ಗ್ರಹ ಸಿಂಹ ರಾಶಿಯಲ್ಲಿ ಇರುವನು. ಬೆಳಗ್ಗೆ 11.23 ವರೆಗೂ ಇದರಿಂದ ಪ್ರೀತಿಯ ಯೋಗ ಪ್ರಾಪ್ತಿಯಿದೆ. ಇಂದು ಆಯುಷ್ಮಾನ್ ಯೋಗವೂ ಇದೆ.
ಕರ್ಮಫಲ ಆಶೀರ್ವದಿಸುವ (Karamfal Data Shani Dev) ಶನಿ ದೇವನನ್ನು ಒಂದು ಕ್ರೂರ ಗ್ರಹ ಎಂದು ಕರೆಯಲಾಗುತ್ತದೆ. ಶನಿ ಮಹಾತ್ಮ (Shani Dev) ಯಾರ ಮೇಲಾದರೂ ಕೋಪಗೊಂಡರೆ ಅಥವಾ ಅಶುಭ ಪ್ರಕಟಿಸಿದರೆ ಅಂತಹ ವ್ಯಕ್ತಿಯ ಜೀವನ ನಿಜಕ್ಕೂ ಸಂಕಟಮಯವಾಗುತ್ತದೆ. ಅನೇಕ ತೊಂದರೆಗಳಿಗೆ ಯಾತನೆಗಳಿಗೆ ಈಡಾಗುತ್ತದೆ ಎಂಬ ನಂಬಿಕೆಯಿದೆ. ಕಲಿಯುಗದಲ್ಲಿ ಶನಿ ಮಹಾತ್ಮನನ್ನು ಹೆಚ್ಚು ಪ್ರಭಾವಶಾಲೀ ಗ್ರಹ ಎಂದು ಪರಿಗಣಿಸಲಾಗಿದೆ. ಶನಿ ದೇವನ ಪ್ರಕೋಪಗೊಂಡರೆ ಮನುಷ್ಯ ಹಾಗಿರಲಿ, ದೇವಾನುದೇವತೆಗಳೇ ಗಾಬರಿಗೆ ಬೀಳುತ್ತಾರೆ! ಶನಿ ದೇವರ ಕೆಟ್ಟ ದೃಷ್ಟಿ ಬಿತ್ತೆಂದರೆ ಮನುಷ್ಯ ಹಾಗಿರಲಿ, ಆ ಶಿವನೂ ಬಚಾವಾಗಲಾರ. ಅದಕ್ಕೇ ಹೇಳಿದ್ದು.. ಶನಿ ಅತ್ಯಂತ ಕ್ರೂರ ಗ್ರಹ ಎಂದು. ಅದಕ್ಕೇ ಹೇಳಿದ್ದು.. ಯಾರೇ ಆಗಲಿ ಆಶನಿ ಮಹಾತ್ಮನನ್ನು ಸದಾ ಸುಪ್ರಸನ್ನನಾಗಿ ಇಡಬೇಕು ಅಂತಾ.
ಅಕಸ್ಮಾತ್ ಯಾರಾದರೂ ಶನಿ ದೇವರ ವಕ್ರ ದೃಷ್ಟಿಗೆ ಬಿದ್ದರೆ ಅಂತಹವರು ತಕ್ಷಣವೇ ಏನಾದರೂ ಉಪಾಯ ಮಾಡಿ ಶನಿಯನ್ನು ಪ್ರಸನ್ನಗೊಳಿಸಬೇಕು. ಯಾರ ಮೇಲೆ ಶನಿ ದೇವರು ವಕ್ರದೃಷ್ಟಿ ಬೀರುತ್ತಾರೋ ಅಂತಹವರ ಆರೋಗ್ಯ, ಧನ, ಮಾನ, ಸಮ್ಮಾನ, ದೈನಂದಿನ ಜೀವನ ಭಾರೀ ಏರುಪೇರಾಗಿಬಿಡುತ್ತದೆ. ಶನಿಯ ವಕ್ರದೃಷ್ಟಿಯಿಂದ ನರಳುವವರು ಜೀವನದಲ್ಲಿ ಅಸಫಲತೆಯನ್ನು ಅನುಕ್ಷಣವೂ ಎದುರಿಸುತ್ತಿರುತ್ತಾರೆ. ಹೀಗಿರುವಾಗ ಹೊಸ ವರ್ಷದ ಹೊಸ್ತಿಲಲ್ಲಿ 2021ನೇ ಸಾಲಿನ ಕೊನೆಯ ಶನಿವಾರ ಶನಿದೇವನನ್ನು ಒಲಿಸಿಕೊಳ್ಳುವುದು ಹೇಗೆ? ಅದಕ್ಕೆ ಇರುವ ಮಾರ್ಗೋಪಾಯಗಳು ಏನು ಎಂಬುದನ್ನು ತಿಳಿದುಕೊಳ್ಳೋಣ.
ಡಿಸೆಂಬರ್ 25 – ಶನಿವಾರ ವಿಶೇಷ ದಿನ: ಇಂದಿನ ಶನಿವಾರಕ್ಕೆ ವಿಶೇಷ ಯೋಗವಿದೆ. ಇಂದು ಶನಿ ದೇವನ ಪ್ರಕೋಪವನ್ನು ಕಡಿಮೆ ಮಾಡಿಕೊಳ್ಳಲು ಪುಷ್ಯ ಮಾಸದ ಕೃಷ್ಣ ಪಕ್ಷದಲ್ಲಿ ಷಷ್ಠಿ ತಿಥಿ ಬಂದಿದೆ. ಇಂದು ಚಂದ್ರ ಗ್ರಹ ಸಿಂಹ ರಾಶಿಯಲ್ಲಿ ಇರುವನು. ಬೆಳಗ್ಗೆ 11.23 ವರೆಗೂ ಇದರಿಂದ ಪ್ರೀತಿಯ ಯೋಗ ಪ್ರಾಪ್ತಿಯಿದೆ. ಇಂದು ಆಯುಷ್ಮಾನ್ ಯೋಗವೂ ಇದೆ. ಇಂದು ಶನಿ ದೇವನನ್ನು ಪೂಜಿಸಲು, ಭಜಿಸಲು ಅತ್ಯಂತ ಪ್ರಶಸ್ತ ಕಾಲವಾಗಿದೆ. ಇಂದು ಶ್ರದ್ಧಾ ಭಕ್ತಿ, ನಿಷ್ಠೆಯಿಂದ ಶನಿ ದೇವನನ್ನು ಆರಾಧಿಸಿದರೆ ಒಳ್ಳೆಯ ಫಲ ದೊರಕುತ್ತದೆ.
ಶನಿಮಹಾತ್ಮನನ್ನು ಪ್ರಸನ್ನ ಗೊಳಿಸಲು ಇದುವೇ ಸರಳ ಮಾರ್ಗ: ನಿಮ್ಮ ಜೀವನದಲ್ಲಿ ಶನಿ ದೆಶೆ ಇದೆ ಎಂತಾದರೆ ಇಂದು ಶನಿದೇವರ ಗುಡಿಗೆ ತೆರಳಿ ಭಕ್ತಿಯಿಂದ ನಮಸ್ಕರಿಸಿ, ಜಪಿಸಿ. ಶನಿ ದೇವರ ಮುಂದೆ ನಿಂತು ಧ್ಯಾನ ಮಾಡಬೇಡಿ. ಶನಿ ವಿಗ್ರಹದ ಎದುರಿನಲ್ಲಿ ಸ್ವಲ್ಪ ಎಡ ಅಥವಾ ಬಲಕ್ಕೆ ಕುಳಿತು ಅಥವಾ ನಿಂತು ಪ್ರಾರ್ಥನೆ ಮಾಡಿ. ಶನಿ ದೇವನಿಗೆ ಎಳ್ಳಿನ ತೈಲ ದೀಪ ಹಚ್ಚಿ. ಶನಿ ಮಂತ್ರ ಮತ್ತು ಶನಿ ಚಾಲೀಸ್ ಅನ್ನು ಪಠಿಸಿ. ಶನಿಗೆ ಪ್ರಸನ್ನವಾಗುವ ವಸ್ತುಗಳನ್ನುದಾನ ಮಾಡಿ.
ಕೆಟ್ಟ ಕರ್ಮಗಳಿಂದ ದುಷ್ಪರಿಣಾಮಗಳಿಗೆ ಈಡಾಗಿದ್ದರೆ ನೀವು ಈ ಕೆಳಗಿನ ಅತ್ಯಂತ ಶಕ್ತಿಶಾಲಿ ಶನಿ ಬೀಜ ಮಂತ್ರವನ್ನು ಪಠಿಸಿ:
ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ ಓಂ ಐಂಗ್ ಹ್ರಿಂಗ್ ಶ್ರೀಂಗ್ ಶಂಗ್ ಶನೈಶ್ಚರಾಯ ನಮಃ ಓಂ ಓಂ ಹಿಂ ಶಂ ಶನಯೇ ನಮಃ ಓಂ ಶಂ ಶನೈಶ್ಚರಾಯ ನಮಃ
Also Read: Shani Mantra: ಶನಿಯ ಈ ಮಂತ್ರಗಳನ್ನು ಪಠಿಸಿದರೆ ಎಲ್ಲಾ ಶನಿ ದೋಷಗಳು ದೂರವಾಗುತ್ತವೆ