ಕ್ಯಾಲೆಂಡರ್ ವರ್ಷದ ಎರಡನೇ ಪ್ರದೋಷ ವ್ರತ ಅಥವಾ ಉಪವಾಸದ ಆಚರಣೆಯನ್ನು ಜ. 23 ರಂದು ಆಚರಿಸಲಾಗುತ್ತದೆ. ಪ್ರತಿ ತಿಂಗಳು ಕೃಷ್ಣ ಮತ್ತು ಶುಕ್ಲ ಪಕ್ಷದ ತ್ರಯೋದಶಿ ದಿನದಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಮಹಾದೇವನಿಗೆ ಸಮರ್ಪಿತವಾದ ಪ್ರದೋಷ ವ್ರತವು ಮಂಗಳವಾರ ಬಂದಿರುವುದರಿಂದ ಇದನ್ನು ಭೌಮ ಪ್ರದೋಷ ಎನ್ನಲಾಗುತ್ತದೆ. ಹಾಗಾಗಿ ಶಿವನ ಜೊತೆಗೆ ಪಾರ್ವತಿ ದೇವಿಯನ್ನು ಕೂಡ ಪೂಜಿಸಲಾಗುತ್ತದೆ. ಪ್ರದೋಷ ಉಪವಾಸವನ್ನು ಆಚರಿಸುವುದರಿಂದ ಸಂತೋಷ, ಸಮೃದ್ಧಿ ಹೆಚ್ಚಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಆದ್ದರಿಂದ, ಪೂಜೆಯ ವಿಧಾನ ಮತ್ತು ಶುಭ ಸಮಯವನ್ನು ತಿಳಿದುಕೊಂಡು ಅದರಂತೆ ಆಚರಿಸೋಣ.
ಕೃಷ್ಣ ಪಕ್ಷದ ತ್ರಯೋದಶಿ ತಿಥಿಯ ಪ್ರಾರಂಭ: ಜ. 22 ರಂದು ಸಂಜೆ 07:51ಕ್ಕೆ
ಕೃಷ್ಣ ಪಕ್ಷದ ತ್ರಯೋದಶಿ ತಿಥಿಯ ಅಂತ್ಯ: ಜ. 23 ರಂದು ರಾತ್ರಿ 08:39 ಕ್ಕೆ
ಪ್ರದೋಷ ಪೂಜಾ ಮುಹೂರ್ತ: ಜ. 23ರ ಸಂಜೆ 05:41 ರಿಂದ ರಾತ್ರಿ 08:20 ರ ವರೆಗೆ (ಅವಧಿ: 02 ಗಂಟೆ 39 ನಿಮಿಷ)
ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿದ ನಂತರ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಶಿವ ಮತ್ತು ಇತರ ದೇವರುಗಳನ್ನು ಇಟ್ಟು ಪೂಜೆ ಮಾಡಿ . ನೀವು ಉಪವಾಸವನ್ನು ಆಚರಿಸಬೇಕಾದರೆ ನೀರು, ಹೂ ಮತ್ತು ಅಕ್ಷತೆಯನ್ನು ನಿಮ್ಮ ಕೈಯಲ್ಲಿ ಇಟ್ಟುಕೊಂಡು ಉಪವಾಸವನ್ನು ಆಚರಿಸುವ ಪ್ರತಿಜ್ಞೆ ತೆಗೆದುಕೊಳ್ಳಿ. ನಂತರ ಸಂಜೆ, ಮುಸ್ಸಂಜೆಯ ಸಮಯದಲ್ಲಿ ಮನೆಯ ದೇವರ ಮನೆಯಲ್ಲಿ ದೀಪವನ್ನು ಬೆಳಗಿಸಿ. ನಂತರ ಶಿವ ದೇವಾಲಯದಲ್ಲಿ ಅಥವಾ ಮನೆಯಲ್ಲಿ ಶಿವನ ಮೂರ್ತಿಗಳಿಗೆ ಅಭಿಷೇಕ ಮಾಡುವ ಮೂಲಕ ಪೂಜೆಯನ್ನು ಮಾಡಿ. ಬಳಿಕ ಪ್ರದೋಷ ವ್ರತದ ಕಥೆಯನ್ನು ಕೇಳಿ. ನಂತರ ತುಪ್ಪದ ದೀಪ ಹಚ್ಚಿ ಶಿವನ ಆರತಿ ಮಾಡಿ. ಕೊನೆಗೆ ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ.
ಇದನ್ನೂ ಓದಿ: ಶ್ರೀರಾಮ ರಾತ್ರಿ ಅಯೋಧ್ಯೆಯಲ್ಲಿದ್ದರೆ, ಹಗಲಿನಲ್ಲಿ ಎಲ್ಲಿರುತ್ತಾನೆ ಗೊತ್ತಾ?
-ತುಪ್ಪ
-ಮೊಸರು
-ಹೂವುಗಳು
-ಹಣ್ಣುಗಳು
-ಅಕ್ಷತೆ
-ಬಿಲ್ವಪತ್ರೆ
-ಜೇನುತುಪ್ಪ
-ಹಸಿ ಹಾಲು
-ಹೆಸರು ಬೇಳೆ
-ಶಮಿ ಎಲೆ ಅಥವಾ ಶಮೆ ಪತ್ರೆ
ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ