ರಾಮನ ಅನುಗ್ರಹಕ್ಕೆ ಇಂದು ಈ ಮಂತ್ರ ಪಠಣ ಮಾಡಿ

ರಾಮನು ಭಗವಾನ್ ವಿಷ್ಣುವಿನ ಏಳನೇ ಅವತಾರವಾಗಿದ್ದು ಆತನನ್ನು ನೀತಿ, ಸಹಾನುಭೂತಿ ಮತ್ತು ಕರ್ತವ್ಯದ ಪ್ರತಿರೂಪವೆಂದು ಕರೆಯಲಾಗುತ್ತದೆ. ಭಕ್ತರ ಶಕ್ತಿಯಾಗಿ ಅವರಿಗೆ ಮಾರ್ಗದರ್ಶನ ನೀಡುತ್ತಾ ಬಂದಿರುವ ರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ಅಯೋಧ್ಯೆಯಲ್ಲಿ ನಡೆಯುತ್ತಿದೆ. ಈ ಉತ್ಸಾಹದ ಜೊತೆ ಜೊತೆಗೆ ಭಗವಾನ್ ರಾಮನ ಕೆಲವು ಶಕ್ತಿಶಾಲಿ ಮಂತ್ರಗಳನ್ನು ಇಲ್ಲಿ ನೀಡಲಾಗಿದ್ದು ಇವುಗಳನ್ನು ಪಠಣ ಮಾಡುವ ಮೂಲಕ ರಾಮನ ಅನುಗ್ರಹ ಪಡೆಯಿರಿ.

ರಾಮನ ಅನುಗ್ರಹಕ್ಕೆ ಇಂದು ಈ ಮಂತ್ರ ಪಠಣ ಮಾಡಿ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 22, 2024 | 12:10 PM

ಭಗವಾನ್ ರಾಮನಿಗೆ ಹಿಂದೂ ಧರ್ಮದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನವಿದೆ ಏಕೆಂದರೆ ಪ್ರಭುವಿನ ವ್ಯಕ್ತಿತ್ವವೇ ಪೂಜನೀಯವಾಗಿದೆ. ರಾಮನು ಭಗವಾನ್ ವಿಷ್ಣುವಿನ ಏಳನೇ ಅವತಾರವಾಗಿದ್ದು ಆತನನ್ನು ನೀತಿ, ಸಹಾನುಭೂತಿ ಮತ್ತು ಕರ್ತವ್ಯದ ಪ್ರತಿರೂಪವೆಂದು ಕರೆಯಲಾಗುತ್ತದೆ. ಭಕ್ತರ ಶಕ್ತಿಯಾಗಿ ಅವರಿಗೆ ಮಾರ್ಗದರ್ಶನ ನೀಡುತ್ತಾ ಬಂದಿರುವ ರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ಅಯೋಧ್ಯೆಯಲ್ಲಿ ನಡೆಯುತ್ತಿದೆ. ಈ ಉತ್ಸಾಹದ ಜೊತೆ ಜೊತೆಗೆ ಭಗವಾನ್ ರಾಮನ ಕೆಲವು ಶಕ್ತಿಶಾಲಿ ಮಂತ್ರಗಳನ್ನು ಇಲ್ಲಿ ನೀಡಲಾಗಿದ್ದು ಇವುಗಳನ್ನು ಪಠಣ ಮಾಡುವ ಮೂಲಕ ರಾಮನ ಅನುಗ್ರಹ ಪಡೆಯಿರಿ.

-ಅತ್ಯಂತ ಸರಳವಾದ ಆದರೆ ಶಕ್ತಿಯುತವಾದ ಮಂತ್ರವೆಂದರೆ ‘ರಾಮ’. ಈ ನಾಮ ಸ್ಮರಣೆ ನಿಮ್ಮ ಸಕಲ ಕಂಟಕವನ್ನು ದೂರ ಮಾಡಿ ನಿಮಗೆ ನೆಮ್ಮದಿಯನ್ನು ನೀಡುತ್ತದೆ. ಕೇವಲ ಇದನ್ನು ಉಚ್ಚರಿಸುವುದರಿಂದ ಪರಿವರ್ತಕ ಪರಿಣಾಮಗಳು ಉಂಟಾಗುತ್ತವೆ ಎಂದು ನಂಬಲಾಗಿದೆ. ಏಕೆಂದರೆ ಅವನ ಹೆಸರು ದೈವಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಈ ನಾಮ ಸ್ಮರಣೆಯನ್ನು ಪಠಿಸುವುದರಿಂದ ನಿಮ್ಮ ಮನಸ್ಸು ಮತ್ತು ಆತ್ಮದ ಶುದ್ಧೀಕರಣವಾಗುತ್ತದೆ. ಜೀವನದಲ್ಲಿ ಶಾಂತಿ, ಸಾಮರಸ್ಯ ಮತ್ತು ಅಪಾರ ಶಕ್ತಿ ದೊರೆಯುವುದಲ್ಲದೆ, ಕಷ್ಟದ ಪರಿಸ್ಥಿತಿಯಲ್ಲಿ ಅದನ್ನು ನಿಭಾಯಿಸುವ ಸಾಮರ್ಥ್ಯವನ್ನು ನಿಮಗೆ ನೀಡುತ್ತದೆ.

-“ಶ್ರೀರಾಮ ಶರಣಂ ಮಮ” ಈ ಮಂತ್ರವು ಭಗವಾನ್ ರಾಮನಿಗೆ ಸಮರ್ಪಿತವಾಗಿದ್ದು ಇದನ್ನು ಪಠಿಸುವುದರಿಂದ ಜೀವನದಲ್ಲಿ ರಾಮನ ರಕ್ಷಣೆ ಪ್ರಾಪ್ತವಾಗುತ್ತದೆ. ನೀವು ಒತ್ತಡದ ದಿನಗಳನ್ನು ಎದುರಿಸುತ್ತಿದ್ದರೆ ಅಥವಾ ಸರಿಯಾದ ಮಾರ್ಗದರ್ಶನವನ್ನು ಪಡೆಯಲು ಸಾಧ್ಯವಾಗದಿದ್ದಾಗ ಈ ರಕ್ಷಣಾ ಮಂತ್ರವನ್ನು ಪಠಿಸುವುದು ವಿಶೇಷವಾಗಿ ಸೂಕ್ತವಾಗಿದೆ.

-“ಓಂ ರಂ ರಾಮಾಯ ನಮಃ” ಎಂಬ ಮಂತ್ರವನ್ನು ಭಕ್ತಿಯಿಂದ ಪಠಿಸುವುದರಿಂದ, ಜೀವನದಲ್ಲಿ ಶಾಂತಿ ಪ್ರಾಪ್ತವಾಗಿ ಬರುವ ಅಡೆತಡೆಗಳು ರಾಮನ ಅನುಗ್ರಹದಿಂದ ಎಲ್ಲವೂ ಮಾಯವಾಗುತ್ತದೆ. ಈ ಸಣ್ಣ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಏಕಾಗ್ರತೆ ಮತ್ತು ಶಾಂತಿ, ಸಮೃದ್ಧಿ ನಿಮ್ಮದಾಗುತ್ತದೆ.

ಇದನ್ನೂ ಓದಿ: ಇಂದು ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯಂದು ಶ್ರೀ ರಾಮನ ಈ 108 ಹೆಸರುಗಳನ್ನು ಜಪಿಸಿ 

-“ಓಂ ದಶರಥಾಯ ವಿದ್ಮಹೇ , ಸೀತಾ ವಲ್ಲಭಾಯ ಧೀಮಹಿ, ತನ್ನೋ ಶ್ರೀರಾಮಃಪ್ರಚೋದಯಾತ್‌” ಇದು ರಾಮ ಗಾಯತ್ರಿ ಮಂತ್ರವಾಗಿದ್ದುಅತ್ಯಂತ ಶಕ್ತಿಯುತ ಮಂತ್ರಗಳಲ್ಲಿ ಒಂದಾಗಿದೆ. ಇದನ್ನು ನಿಯಮಿತವಾಗಿ ಪಠಣ ಮಾಡುವುದರಿಂದ ಭಕ್ತನಿಗೆ ದೈಹಿಕ ಮತ್ತು ಭಾವನಾತ್ಮಕ ಶಕ್ತಿ ನೀಡುತ್ತದೆ ಹಾಗೂ ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯಲು ಅನುವು ಮಾಡಿಕೊಡುತ್ತದೆ.

-“ರಾಮ ರಾಮೇತಿ, ರಮೇ ರಾಮೇ ಮನೋರಮೇ| ಸಹಸ್ರನಾಮ ತತ್ತುಲ್ಯಂ, ರಾಮನಾಮ ವರಾನನೇ” ರಾಮನ ಈ ಮಂತ್ರವು ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದರ ಪಠಣೆಯಿಂದ ಓರ್ವ ವ್ಯಕ್ತಿಯು ಮಾನಸಿಕ ಶಾಂತಿಯನ್ನು ಪಡೆದುಕೊಳ್ಳುತ್ತಾನೆ.

ಈ ಮೇಲಿನ ಮಂತ್ರಗಳನ್ನು ಪಠಣ ಮಾಡುವ ಮೂಲಕ ರಾಮನ ಅನುಗ್ರಹಕ್ಕೆ ಪಾತ್ರರಾಗಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ