AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pradosh Vrat: ಭೌಮ ಪ್ರದೋಷ ವ್ರತಾಚರಣೆಯ ಸಮಯ, ಪೂಜಾ ವಿಧಾನ

ಮಹಾದೇವನಿಗೆ ಸಮರ್ಪಿತವಾದ ಪ್ರದೋಷ ವ್ರತವು ಮಂಗಳವಾರ ಬಂದಿರುವುದರಿಂದ ಇದನ್ನು ಭೌಮ ಪ್ರದೋಷ ಎನ್ನಲಾಗುತ್ತದೆ. ಹಾಗಾಗಿ ಶಿವನ ಜೊತೆಗೆ ಪಾರ್ವತಿ ದೇವಿಯನ್ನು ಕೂಡ ಪೂಜಿಸಲಾಗುತ್ತದೆ. ಪ್ರದೋಷ ಉಪವಾಸವನ್ನು ಆಚರಿಸುವುದರಿಂದ ಸಂತೋಷ, ಸಮೃದ್ಧಿ ಹೆಚ್ಚಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಆದ್ದರಿಂದ, ಪೂಜೆಯ ವಿಧಾನ ಮತ್ತು ಶುಭ ಸಮಯವನ್ನು ತಿಳಿದುಕೊಂಡು ಅದರಂತೆ ಆಚರಿಸೋಣ.

Pradosh Vrat: ಭೌಮ ಪ್ರದೋಷ ವ್ರತಾಚರಣೆಯ ಸಮಯ, ಪೂಜಾ ವಿಧಾನ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jan 22, 2024 | 6:05 PM

Share

ಕ್ಯಾಲೆಂಡರ್ ವರ್ಷದ ಎರಡನೇ ಪ್ರದೋಷ ವ್ರತ ಅಥವಾ ಉಪವಾಸದ ಆಚರಣೆಯನ್ನು ಜ. 23 ರಂದು ಆಚರಿಸಲಾಗುತ್ತದೆ. ಪ್ರತಿ ತಿಂಗಳು ಕೃಷ್ಣ ಮತ್ತು ಶುಕ್ಲ ಪಕ್ಷದ ತ್ರಯೋದಶಿ ದಿನದಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಮಹಾದೇವನಿಗೆ ಸಮರ್ಪಿತವಾದ ಪ್ರದೋಷ ವ್ರತವು ಮಂಗಳವಾರ ಬಂದಿರುವುದರಿಂದ ಇದನ್ನು ಭೌಮ ಪ್ರದೋಷ ಎನ್ನಲಾಗುತ್ತದೆ. ಹಾಗಾಗಿ ಶಿವನ ಜೊತೆಗೆ ಪಾರ್ವತಿ ದೇವಿಯನ್ನು ಕೂಡ ಪೂಜಿಸಲಾಗುತ್ತದೆ. ಪ್ರದೋಷ ಉಪವಾಸವನ್ನು ಆಚರಿಸುವುದರಿಂದ ಸಂತೋಷ, ಸಮೃದ್ಧಿ ಹೆಚ್ಚಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಆದ್ದರಿಂದ, ಪೂಜೆಯ ವಿಧಾನ ಮತ್ತು ಶುಭ ಸಮಯವನ್ನು ತಿಳಿದುಕೊಂಡು ಅದರಂತೆ ಆಚರಿಸೋಣ.

ಭೌಮ ಪ್ರದೋಷದ ಶುಭ ಸಮಯ

ಕೃಷ್ಣ ಪಕ್ಷದ ತ್ರಯೋದಶಿ ತಿಥಿಯ ಪ್ರಾರಂಭ: ಜ. 22 ರಂದು ಸಂಜೆ 07:51ಕ್ಕೆ

ಕೃಷ್ಣ ಪಕ್ಷದ ತ್ರಯೋದಶಿ ತಿಥಿಯ ಅಂತ್ಯ: ಜ. 23 ರಂದು ರಾತ್ರಿ 08:39 ಕ್ಕೆ

ಪ್ರದೋಷ ಪೂಜಾ ಮುಹೂರ್ತ: ಜ. 23ರ ಸಂಜೆ 05:41 ರಿಂದ ರಾತ್ರಿ 08:20 ರ ವರೆಗೆ (ಅವಧಿ: 02 ಗಂಟೆ 39 ನಿಮಿಷ)

ಭೌಮ್ ಪ್ರದೋಷದ ಪೂಜಾ ವಿಧಾನ:

ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿದ ನಂತರ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಶಿವ ಮತ್ತು ಇತರ ದೇವರುಗಳನ್ನು ಇಟ್ಟು ಪೂಜೆ ಮಾಡಿ . ನೀವು ಉಪವಾಸವನ್ನು ಆಚರಿಸಬೇಕಾದರೆ ನೀರು, ಹೂ ಮತ್ತು ಅಕ್ಷತೆಯನ್ನು ನಿಮ್ಮ ಕೈಯಲ್ಲಿ ಇಟ್ಟುಕೊಂಡು ಉಪವಾಸವನ್ನು ಆಚರಿಸುವ ಪ್ರತಿಜ್ಞೆ ತೆಗೆದುಕೊಳ್ಳಿ. ನಂತರ ಸಂಜೆ, ಮುಸ್ಸಂಜೆಯ ಸಮಯದಲ್ಲಿ ಮನೆಯ ದೇವರ ಮನೆಯಲ್ಲಿ ದೀಪವನ್ನು ಬೆಳಗಿಸಿ. ನಂತರ ಶಿವ ದೇವಾಲಯದಲ್ಲಿ ಅಥವಾ ಮನೆಯಲ್ಲಿ ಶಿವನ ಮೂರ್ತಿಗಳಿಗೆ ಅಭಿಷೇಕ ಮಾಡುವ ಮೂಲಕ ಪೂಜೆಯನ್ನು ಮಾಡಿ. ಬಳಿಕ ಪ್ರದೋಷ ವ್ರತದ ಕಥೆಯನ್ನು ಕೇಳಿ. ನಂತರ ತುಪ್ಪದ ದೀಪ ಹಚ್ಚಿ ಶಿವನ ಆರತಿ ಮಾಡಿ. ಕೊನೆಗೆ ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ.

ಇದನ್ನೂ ಓದಿ: ಶ್ರೀರಾಮ ರಾತ್ರಿ ಅಯೋಧ್ಯೆಯಲ್ಲಿದ್ದರೆ, ಹಗಲಿನಲ್ಲಿ ಎಲ್ಲಿರುತ್ತಾನೆ ಗೊತ್ತಾ?

ಪ್ರದೋಷ ವ್ರತದಂದು ಈ ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಿ

-ತುಪ್ಪ

-ಮೊಸರು

-ಹೂವುಗಳು

-ಹಣ್ಣುಗಳು

-ಅಕ್ಷತೆ

-ಬಿಲ್ವಪತ್ರೆ

-ಜೇನುತುಪ್ಪ

-ಹಸಿ ಹಾಲು

-ಹೆಸರು ಬೇಳೆ

-ಶಮಿ ಎಲೆ ಅಥವಾ ಶಮೆ ಪತ್ರೆ

ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್