ಶ್ರೀರಾಮ ರಾತ್ರಿ ಅಯೋಧ್ಯೆಯಲ್ಲಿದ್ದರೆ, ಹಗಲಿನಲ್ಲಿ ಎಲ್ಲಿರುತ್ತಾನೆ ಗೊತ್ತಾ?

ಪ್ರಭು ರಾಮಚಂದ್ರ ಹಗಲಿನಲ್ಲಿ ಓರ್ಚಾ ದೇವಾಲಯದಲ್ಲಿ ಉಳಿಯುತ್ತಾನೆ ಮತ್ತು ರಾತ್ರಿ ಸಮಯದಲ್ಲಿ ಅಯೋಧ್ಯೆಗೆ ಬರುತ್ತಾನೆ ಎಂಬ ಪ್ರತೀತಿ ಇದೆ. ಅಯೋಧ್ಯೆಯಂತೆಯೇ ಮಧ್ಯಪ್ರದೇಶದ ಓರ್ಚಾದಲ್ಲಿರುವ ರಾಮ ರಾಜ ಮಂದಿರವೂ ಬಹಳ ವಿಶೇಷವಾಗಿದ್ದು ಇದರ ಹಿಂದೆ ಒಂದು ಕಥೆ ಇದೆ. ವಾಸ್ತವವಾಗಿ, ಇಂದಿಗೂ ಈ ದೇವಾಲಯದ ಸಂಜೆಯ ಆರತಿಯ ನಂತರ, ಒಂದು ಬೆಳಕು ಹೊರಬರುತ್ತದೆ. ಇದು ಭಗವಾನ್ ಶ್ರೀ ರಾಮನ ರೂಪದಲ್ಲಿ ಅಯೋಧ್ಯೆಗೆ ಹೋಗುತ್ತದೆ ಎಂಬ ನಂಬಿಕೆ ಇದೆ.

ಶ್ರೀರಾಮ ರಾತ್ರಿ ಅಯೋಧ್ಯೆಯಲ್ಲಿದ್ದರೆ, ಹಗಲಿನಲ್ಲಿ ಎಲ್ಲಿರುತ್ತಾನೆ ಗೊತ್ತಾ?
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 22, 2024 | 5:01 PM

ಭಗವಾನ್ ರಾಮನಿಗೆ ಎರಡು ವಾಸಸ್ಥಾನಗಳಿವೆ ಎಂದರೆ ನಂಬುತ್ತೀರಾ? ನಿಮಗೆ ಈ ವಿಷಯ ವಿಚಿತ್ರವೆನಿಸಬಹುದು ಆದರೆ ಇದು ಸತ್ಯ. ಪ್ರಭು ರಾಮಚಂದ್ರ ಹಗಲಿನಲ್ಲಿ ಓರ್ಚಾ ದೇವಾಲಯದಲ್ಲಿ ಉಳಿಯುತ್ತಾನೆ ಮತ್ತು ರಾತ್ರಿ ಸಮಯದಲ್ಲಿ ಅಯೋಧ್ಯೆಗೆ ಬರುತ್ತಾನೆ ಎಂಬ ಪ್ರತೀತಿ ಇದೆ. ಅಯೋಧ್ಯೆಯಂತೆಯೇ, ಮಧ್ಯಪ್ರದೇಶದ ಓರ್ಚಾದಲ್ಲಿರುವ ರಾಮರಾಜ ಮಂದಿರವೂ ಬಹಳ ವಿಶೇಷವಾಗಿದ್ದು ಇದರ ಹಿಂದೆ ಒಂದು ಕಥೆ ಇದೆ. ವಾಸ್ತವವಾಗಿ, ಇಂದಿಗೂ ಈ ದೇವಾಲಯದ ಸಂಜೆಯ ಆರತಿಯ ನಂತರ, ಒಂದು ಬೆಳಕು ಹೊರಬರುತ್ತದೆ, ಇದು ಭಗವಾನ್ ಶ್ರೀ ರಾಮನ ರೂಪದಲ್ಲಿ ಅಯೋಧ್ಯೆಗೆ ಹೋಗುತ್ತದೆ ಎಂಬ ನಂಬಿಕೆ ಇದೆ.

ಇದರ ಹಿಂದಿನ ಇತಿಹಾಸವೇನು?

16 ನೇ ಶತಮಾನದಲ್ಲಿ, ಓರ್ಚಾದ ಬುಂದೇಲಾ ರಾಜ ದೇವ ಕೃಷ್ಣನ, ರಾಣಿ ಕುನ್ವಾರಿ, ಭಗವಾನ್ ರಾಮನ ಮಹಾನ್ ಭಕ್ತರಾಗಿದ್ದರು ಎಂದು ಹೇಳಲಾಗುತ್ತದೆ. ಈ ವಿಷಯವಾಗಿ ಇಬ್ಬರೂ ಅನೇಕ ಬಾರಿ ಜಗಳವಾಡುತ್ತಿದ್ದರಂತೆ. ಒಮ್ಮೆ ರಾಜನು ರಾಣಿಯನ್ನು ವೃಂದಾವನಕ್ಕೆ ಹೋಗುವಂತೆ ಹೇಳಿದಾಗ, ರಾಣಿ ಅಯೋಧ್ಯೆಗೆ ಹೋಗಲು ಬಯಸಿದಳಂತೆ, ಆಗ ಕೋಪಗೊಂಡ ರಾಜನು ನೀನು ರಾಮನನ್ನು ತುಂಬಾ ನಂಬುವುದಾದರೆ ಅಯೋಧ್ಯೆಯಿಂದ ಓರ್ಚಾಕ್ಕೆ ತಂದು ಕೂರಿಸು ಎಂದು ವ್ಯಂಗ್ಯ ಮಾಡುತ್ತಾನಂತೆ. ಆಗ ರಾಣಿ ಅಯೋಧ್ಯೆಗೆ ಹೋಗಿ ಬಹಳ ಕಷ್ಟಕರವಾದ ತಪಸ್ಸು ಮಾಡಿ ರಾಮನನ್ನು ಒಲಿಸಿಕೊಳ್ಳುತ್ತಾಳಂತೆ. ಭಗವಾನ್ ರಾಮನು ಅವಳ ಪ್ರಾರ್ಥನೆಯಿಂದ ಸಂತೋಷಗೊಂಡು ಒಂದು ಷರತ್ತಿನ ಮೇರೆಗೆ ಅವಳ ಜೊತೆ ಬರಲು ಒಪ್ಪುತ್ತಾನಂತೆ. ಪ್ರಭುವಿನ ಷರತ್ತು “ಒಂದು ದೇವಾಲಯದಿಂದ ಇನ್ನೊಂದು ಆಲಯಕ್ಕೆ ತಾನು ಹೋಗುವುದಿಲ್ಲ, ಆರಂಭದಲ್ಲಿ ರಾಣಿಯು ಇರಿಸುವ ಸ್ಥಳದಲ್ಲಿಯೇ ನೆಲೆಸಿರುತ್ತೇನೆ ಎನ್ನುವುದಾಗಿರುತ್ತದೆ”. ಅಯೋಧ್ಯೆಯಿಂದ ಬಂದ ರಾಮನಿಗಾಗಿ, ರಾಜ ದೇವಾಲಯವನ್ನು ನಿರ್ಮಿಸುತ್ತಾನಂತೆ. ಈ ಸಮಯದಲ್ಲಿ ರಾಮನನ್ನು ರಾಣಿ ತನ್ನ ಅರಮನೆಯಲ್ಲಿ ಪೂಜಿಸುತ್ತಿರುತ್ತಾಳೆ. ಅಂತಿಮವಾಗಿ ದೇವಾಲಯವು ಸಿದ್ಧವಾದಾಗ, ಭಗವಾನ್ ರಾಮನು ತನ್ನ ಷರತ್ತಿನ ಕಾರಣದಿಂದಾಗಿ ಚಲಿಸಲು ನಿರಾಕರಿಸುತ್ತಾನಂತೆ ಹಾಗಾಗಿ ರಾಣಿಯ ಅರಮನೆ ಅಂತಿಮವಾಗಿ ರಾಮ ರಾಜ ದೇವಾಲಯವಾಯಿತು. ಇಲ್ಲಿ, ಭಗವಾನ್ ರಾಮನನ್ನು ದೇವರಾಗಿ ಮಾತ್ರವಲ್ಲದೆ ರಾಜನಾಗಿಯೂ ಪೂಜಿಸಲಾಗುತ್ತದೆ. ಹಾಗಾಗಿ ಭಾರತದಲ್ಲಿ ರಾಮನನ್ನು ರಾಜನಾಗಿ ಪೂಜಿಸುವ ಏಕೈಕ ದೇವಾಲಯ ಇದಾಗಿದೆ.

ಪ್ರತಿದಿನ ಭಗವಾನ್ ರಾಮನಿಗೆ ಸಶಸ್ತ್ರ ನಮಸ್ಕಾರ ಮಾಡಲಾಗುತ್ತದೆ. ರಾಜ ರಾಮನೊಂದಿಗೆ, ಪತ್ನಿ ಸೀತೆ, ಸಹೋದರ ಲಕ್ಷ್ಮಣ, ಮಹಾರಾಜ್ ಸುಗ್ರೀವನನ್ನು ಕೂಡ ಇಲ್ಲಿ ಪೂಜಿಸಲಾಗುತ್ತದೆ. ಬಲ ಭಾಗದಲ್ಲಿರುವ ದರ್ಬಾರ್ ನಲ್ಲಿ ದುರ್ಗಾ ಮಾತೆಯೂ ಇದ್ದಾಳೆ. ಸೀತಾ ಮಾತೆಯ ಕಾಲಿನ ಬಳಿ ಹನುಮಾನ್ ಮತ್ತು ಜಾಂಬವಂತರು ಪ್ರಾರ್ಥಿಸುತ್ತಿರುವ ಭಂಗಿಯಲ್ಲಿ ಕುಳಿತಿದ್ದಾರೆ. ಈ ದೇವಾಲಯದ ವಿಶೇಷತೆಯೆಂದರೆ ಭಗವಾನ್ ರಾಮನು ತನ್ನ ಬಲಗೈಯಲ್ಲಿ ಖಡ್ಗ ಮತ್ತು ಇನ್ನೊಂದು ಕೈಯಲ್ಲಿ ಗುರಾಣಿಯನ್ನು ಹಿಡಿದು ಪದ್ಮಾಸನದಲ್ಲಿ ಕುಳಿತಿದ್ದಾನೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿದ ರಾಮಲಲ್ಲಾ ಪ್ರಾಣ ಪ್ರತಿಷ್ಠೆ

ಇಲ್ಲಿನ ಪೊಲೀಸರು ರಾಮನಿಗೆ ಗನ್ ಸೆಲ್ಯೂಟ್ ಮಾಡುತ್ತಾರೆ!

ದೇವರನ್ನು ಹೊರತು ಪಡಿಸಿ ಬೇರೆ ಯಾವುದೇ ವಿಐಪಿಗೆ ನಮಸ್ಕರಿಸದ ನಗರ ಇದಾಗಿದ್ದು, ರಾಮನನ್ನು ರಾಜನಾಗಿ ಪೂಜಿಸುವುದು ಮಾತ್ರವಲ್ಲ, ಅವನಿಗೆ ರಾಜ ಮರ್ಯಾದೆ ಕೊಟ್ಟು ವಂದಿಸಲಾಗುತ್ತದೆ. ಈ ಸಂಪ್ರದಾಯವು ಬ್ರಿಟಿಷ್ ಆಳ್ವಿಕೆಯ ಹಿಂದಿನಿಂದಲೂ ಇಲ್ಲಿ ನಡೆಯುತ್ತಿದೆ. ಪ್ರಸ್ತುತ ಮಧ್ಯಪ್ರದೇಶ ಪೊಲೀಸರು ಇಲ್ಲಿ ರಾಮನಿಗೆ ಗನ್ ಸೆಲ್ಯೂಟ್ ಮಾಡುತ್ತಾರೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:33 pm, Mon, 22 January 24