AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆ ರಾಮ ಮಂದಿರ ಪೂರ್ಣಗೊಳ್ಳಲು ಇನ್ನೆಷ್ಟು ಕೆಲಸ ಬಾಕಿ ಇವೆ? ಇಲ್ಲಿದೆ ಮಾಹಿತಿ

ಅಯೋಧ್ಯೆಯ ರಾಮ ಮಂದಿರ ಇನ್ನೂ ಪೂರ್ತಿಯಾಗಿ ನಿರ್ಮಾಣಗೊಳ್ಳಬೇಕಷ್ಟೆ. ಗರ್ಭಗುಡಿ ಹಾಗೂ ಮುಖ್ಯ ಗೋಪುರದ ಕೆಲಸ ಹೊರತುಪಡಿಸಿದರೆ ಉಳಿದ ಕಾಮಗಾರಿ ಇನ್ನಷ್ಟೇ ಆಗಬೇಕಿದೆ. ಹಾಗಾದರೆ ಇನ್ನೆಷ್ಟು ಕೆಲಸ ಬಾಕಿ ಇದೆ? ಏನೆಲ್ಲ ಕಾಮಗಾರಿ ನಡೆಯಬೇಕಿದೆ ಎಂಬ ಮಾಹಿತಿ ಇಲ್ಲಿದೆ.

ಅಯೋಧ್ಯೆ ರಾಮ ಮಂದಿರ ಪೂರ್ಣಗೊಳ್ಳಲು ಇನ್ನೆಷ್ಟು ಕೆಲಸ ಬಾಕಿ ಇವೆ? ಇಲ್ಲಿದೆ ಮಾಹಿತಿ
ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಮ ಮಂದಿರ
TV9 Web
| Updated By: Ganapathi Sharma|

Updated on: Jan 22, 2024 | 2:10 PM

Share

ಅಯೋಧ್ಯೆ, ಜನವರಿ 22: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಮ ಮಂದಿರದಲ್ಲಿ  (Ayodhya Ram Mandir) ರಾಮ ಲಲ್ಲಾ (Ram Lalla) ಪ್ರಾಣ ಪ್ರತಿಷ್ಠೆ ಸೋಮವಾರ ಮಧ್ಯಾಹ್ನ ಯಶಸ್ವಿಯಾಗಿ ನೆರವೇರಿತು. ಪ್ರಧಾನಿ ನರೇಂದ್ರ ಮೋದಿ (Narendra Modi), ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗತ್ ಹಾಗೂ ನೂರಾರು ಗಣ್ಯರ ಸಮ್ಮುಖದಲ್ಲಿ ಸಮಾರಂಭ ನೆರವೇರಿತು. ಆದರೆ, ಅಯೋಧ್ಯೆಯ ರಾಮ ಮಂದಿರ ಇನ್ನೂ ಪೂರ್ತಿಯಾಗಿ ನಿರ್ಮಾಣಗೊಳ್ಳಬೇಕಷ್ಟೆ. ಗರ್ಭಗುಡಿ ಹಾಗೂ ಮುಖ್ಯ ಗೋಪುರದ ಕೆಲಸ ಹೊರತುಪಡಿಸಿದರೆ ಉಳಿದ ಕಾಮಗಾರಿ ಇನ್ನಷ್ಟೇ ಆಗಬೇಕಿದೆ. ಹಾಗಾದರೆ ಇನ್ನೆಷ್ಟು ಕೆಲಸ ಬಾಕಿ ಇದೆ? ಏನೆಲ್ಲ ಕಾಮಗಾರಿ ನಡೆಯಬೇಕಿದೆ ಎಂಬ ಮಾಹಿತಿ ಇಲ್ಲಿದೆ.

ರಾಮ ಮಂದಿರದ ಗರ್ಭಗುಡಿಯ ಬಾಗಿಲುಗಳು ಚಿನ್ನದ ಪದರದಿಂದ ಹೊಳೆಯುತ್ತಿವೆ. ಕಬ್ಬಿಣ ಮತ್ತು ಸಿಮೆಂಟ್ ಬಳಸದೆ ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ, ಮಾಡಲಾಗುತ್ತಿದೆ. ಗರ್ಭಗುಡಿಯ ನಂತರ ಇದೀಗ ಎರಡನೇ ಮಹಡಿ ಕೂಡ ಭವ್ಯವಾದ ರೂಪದಲ್ಲಿ ನಿರ್ಮಾಣವಾಗುತ್ತಿದೆ.

ಇಡೀ ದೇವಾಲಯವನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

ರಾಮಮಂದಿರದ ಶಿಖರವು ಚಿನ್ನದ ಕಲಶದಿಂದ ಹೊಳೆಯಲಿದೆ. ಇತರ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಲು ಸುಮಾರು ಒಂದು ವರ್ಷ ಬೇಕಾಗಲಿದೆ. ಇದರೊಂದಿಗೆ ಭಕ್ತಾದಿಗಳಿಗೆ ಸೌಕರ್ಯಗಳನ್ನು ಒದಗಿಸಲು ಬೇಕಾದ ಹಲವು ಕಾಮಗಾರಿಗಳು ಇನ್ನಷ್ಟೇ ಆಗಬೇಕಿದೆ. ದೇವಾಲಯದ ಸಂಕೀರ್ಣಕ್ಕೆ ಪ್ರವೇಶ ದ್ವಾರಗಳನ್ನು ನಿರ್ಮಿಸುವುದರ ಜತೆಗೆ ಭಕ್ತರಿಗೆ ಸುತ್ತು ಬರಲು ಸಂಕೀರ್ಣದಲ್ಲಿ ಅನೇಕ ಪಥಗಳನ್ನು ನಿರ್ಮಾಣ ಮಾಡಲಾಗುತ್ತದೆ. ದೇವಾಲಯದ ಸುತ್ತಲೂ ಉದ್ಯಾನವನಗಳು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ನಿರ್ಮಿಸಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.

ರಾಮ ಲಲ್ಲಾ ದೇವಾಲಯದ ಎರಡನೇ ಮಹಡಿಯಲ್ಲಿ ಗೋಡೆಯನ್ನು ನಿರ್ಮಿಸಲಾಗುವುದು. ಇದು ದೇವಾಲಯದ ಸಂಕೀರ್ಣವನ್ನು ಎಲ್ಲಾ ಕಡೆಯಿಂದ ಸುತ್ತುವರಿಯಲಿದೆ. ಈ ಗೋಡೆಯು ದೇವಾಲಯದ ಸೌಂದರ್ಯದ ಪ್ರಮುಖ ಭಾಗವಾಗಿದೆ. ಈ ಆವರಣದಲ್ಲಿ 7 ದೇವಾಲಯಗಳನ್ನು ನಿರ್ಮಿಸಲಾಗುವುದು. ಈ ದೇವಾಲಯಗಳಲ್ಲಿ ವಿಷ್ಣು, ಶಿವ, ಬ್ರಹ್ಮ, ಗಣೇಶ, ಹನುಮಾನ್, ದುರ್ಗಾ ಮತ್ತು ಸರಸ್ವತಿಯ ವಿಗ್ರಹಗಳನ್ನು ಸ್ಥಾಪಿಸಲಾಗುವುದು. ಈ ರೀತಿಯಾಗಿ, ರಾಮ ಲಲ್ಲಾ ದೇವಾಲಯದಲ್ಲಿ ಅನೇಕ ದೇವತೆಗಳು ಮತ್ತು ದೇವತೆಗಳ ದರ್ಶನಗಳ ವ್ಯವಸ್ಥೆ ಮಾಡಲಾಗುತ್ತದೆ.

70 ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಅಡಿಪಾಯವನ್ನು ಹಾಕಲು 2587 ಸ್ಥಳಗಳ ಮಣ್ಣನ್ನು ಬಳಸಲಾಗಿದೆ. ದೇವಾಲಯದಲ್ಲಿ 5 ಆಕರ್ಷಕ ಮಂಟಪಗಳು ಗೋಚರಿಸುತ್ತವೆ. ಇವುಗಳಲ್ಲಿ ಸಭಾ ಮಂಟಪ, ಕೀರ್ತನ ಮಂಟಪ, ನೃತ್ಯ ಮಂಟಪ, ರಂಗ ಮಂಟಪ ಮತ್ತು ಪ್ರಾರ್ಥನಾ ಮಂಟಪ ಸೇರಿವೆ. ವಿನ್ಯಾಸದ ರಚನೆಯನ್ನು ನಾವು ನೋಡಿದರೆ, ಇದು ದೇಶದ ಅತಿದೊಡ್ಡ ದೇವಾಲಯವಾಗಿರಲಿದೆ.

ದೇವಾಲಯವನ್ನು ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪೂರ್ವದಿಂದ ಪಶ್ಚಿಮಕ್ಕೆ ಇದರ ಉದ್ದ 380 ಅಡಿ ಆಗಿದ್ದು, ಅಗಲ 250 ಅಡಿ ಮತ್ತು ಎತ್ತರ 161 ಅಡಿ. ವಿಶೇಷವೆಂದರೆ ಇದನ್ನು ತಯಾರಿಸಲು ಕಬ್ಬಿಣ ಅಥವಾ ಉಕ್ಕನ್ನು ಬಳಸಲಾಗಿಲ್ಲ, ಆದ್ದರಿಂದ ಇದು ಹೆಚ್ಚು ಬಾಳಿಕೆ ಬರುವಂಥದ್ದಾಗಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಮುಹೂರ್ತ ನಿಗದಿಪಡಿಸಿದ್ದು ಬೆಳಗಾವಿಯ ವಿದ್ಯಾವಿಹಾರ ವಿದ್ಯಾಲಯ ಕುಲಪತಿ

ದೇವಾಲಯದ ನೆಲಮಟ್ಟದಿಂದ ಗರ್ಭ ಗೃಹದ ಶಿಖರದ ಎತ್ತರ 161 ಅಡಿ. ಇಡೀ ದೇವಾಲಯದ ಸಂಕೀರ್ಣದಲ್ಲಿ 392 ಕಂಬಗಳು ಮತ್ತು 44 ದ್ವಾರಗಳಿವೆ. ಕಂಬಗಳು ಮತ್ತು ಗೋಡೆಗಳ ಮೇಲೆ ದೇವರು ಮತ್ತು ದೇವತೆಗಳ ಪ್ರತಿಮೆಗಳಿವೆ. ನೆಲ ಅಂತಸ್ತಿನಲ್ಲಿ 160 ಕಂಬಗಳು, ಮೊದಲ ಮಹಡಿಯಲ್ಲಿ 132 ಕಂಬಗಳು ಮತ್ತು ಎರಡನೇ ಮಹಡಿಯಲ್ಲಿ 74 ಕಂಬಗಳಿವೆ. ಇಡೀ ದೇವಾಲಯದ ಸಂಕೀರ್ಣದಲ್ಲಿ 12 ದ್ವಾರಗಳಿವೆ. ದೇವಾಲಯದ ಸುತ್ತ ನಿರ್ಮಿಸಲಾಗುವ ಗೋಡೆಯ ಉದ್ದ 732 ಮೀಟರ್ ಮತ್ತು ಅಗಲ 14 ಅಡಿ ಇರಲಿದೆ. ಇಲ್ಲಿ ಹೆಚ್ಚಿನ ನಿರ್ಮಾಣ ಕಾರ್ಯ ಇನ್ನಷ್ಟೇ ಆಗಬೇಕಿದೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್