Yamuna Jayanti: ಇಂದು ಶ್ರೀ ಕೃಷ್ಣನ ಪತ್ನಿ ಯಮುನಾ ಭೂಮಿಗೆ ಇಳಿದು ಬಂದ ದಿನ

ಯಮುನಾ ಜಯಂತಿ ಒಂದು ಪ್ರಮುಖ ಹಬ್ಬವಾಗಿದೆ, ವಿಶೇಷವಾಗಿ ಶ್ರೀಕೃಷ್ಣನ ಭಕ್ತರಿಗೆ. ಹಿಂದೂ ಪುರಾಣಗಳ ಪ್ರಕಾರ ಯಮುನಾ ದೇವಿಯು ಶ್ರೀಕೃಷ್ಣನ ಪತ್ನಿ. ಅದಕ್ಕಾಗಿಯೇ ಈ ಹಬ್ಬವು ಬ್ರಜ್, ಮಥುರಾ ಮತ್ತು ವೃಂದಾವನದ ಜನರಿಗೆ ಅಂತಹ ಗೌರವವನ್ನು ಹೊಂದಿದೆ.

Yamuna Jayanti: ಇಂದು ಶ್ರೀ ಕೃಷ್ಣನ ಪತ್ನಿ ಯಮುನಾ ಭೂಮಿಗೆ ಇಳಿದು ಬಂದ ದಿನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Apr 07, 2022 | 6:30 AM

ಯಮುನಾ ಛಾತ್ ಅಥವಾ ಯಮುನಾ ಜಯಂತಿಯನ್ನು ಮುಖ್ಯವಾಗಿ ಮಥುರಾದಲ್ಲಿ ಆಚರಿಸಲಾಗುತ್ತದೆ. ಇದು ಯಮುನಾ ದೇವಿಯು ಭೂಮಿಗೆ ಇಳಿದ ದಿನವನ್ನು ಸೂಚಿಸುತ್ತದೆ. ಆದ್ದರಿಂದ ಈ ದಿನವನ್ನು ಯಮುನಾ ಜಯಂತಿ ಅಥವಾ ಯಮುನಾ ದೇವಿಯ ಜನ್ಮ ವಾರ್ಷಿಕೋತ್ಸವ ಎಂದು ಪರಿಗಣಿಸಲಾಗಿದೆ. ಇದನ್ನು ಚೈತ್ರ ಮಾಸದ ಶುಕ್ಲ ಪಕ್ಷ ಷಷ್ಠಿಯಂದು ಆಚರಿಸಲಾಗುತ್ತದೆ ಮತ್ತು ಚೈತ್ರ ನವರಾತ್ರಿಯ ಸಮಯದಲ್ಲಿ ಬರುತ್ತದೆ. ಭಗವಾನ್ ಶ್ರೀ ಕೃಷ್ಣನ ಪತ್ನಿಯಾದ ಯಮುನಾ ದೇವಿಯ ಯಮುನಾ ಛತ್ ಅನ್ನು ಮುಖ್ಯವಾಗಿ ಮಥುರಾ ಮತ್ತು ವೃಂದಾವನದ ಜನರು ಆಚರಿಸುತ್ತಾರೆ.

ಯಮುನಾ ಜಯಂತಿ 2022 ದಿನಾಂಕ ತಿಥಿ ಆರಂಭ: ಏಪ್ರಿಲ್ 06ರ ಸಂಜೆ 6:01 ತಿಥಿ ಕೊನೆಗೊಲ್ಳುವುದು: ಏಪ್ರಿಲ್ 07ರ ರಾತ್ರಿ 8:33ಕ್ಕೆ

ಯಮುನಾ ಜಯಂತಿ ಆಚರಣೆಗಳು: ಭಕ್ತರು ಮುಂಜಾನೆಯೇ ಬೇಗ ಎದ್ದು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಾರೆ. ಈ ದಿನ ಯಮುನಾ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಾಗೂ ಈ ದಿನ ಭಕ್ತರು ಶ್ರೀಕೃಷ್ಣನನ್ನು ಪೂಜಿಸುತ್ತಾರೆ. ಅವರು ಈ ದಿನ ಉಪವಾಸವನ್ನು ಮಾಡುತ್ತಾರೆ. ಮರುದಿನ ಬೆಳಗಿನ ಪೂಜಾ ವಿಧಿವಿಧಾನಗಳನ್ನು ಮುಗಿಸಿದ ನಂತರ ಉಪವಾಸವನ್ನು ಮುಗಿಸುತ್ತಾರೆ. ದೇವಿಗೆ ವಿಶೇಷ ಆಹಾರವನ್ನು ನೈವೇದ್ಯಗಳನ್ನು ತಯಾರಿಸಲಾಗುತ್ತದೆ. ಪೂಜೆಯ ನಂತರ, ಬ್ರಾಹ್ಮಣರಿಗೆ ಅನ್ನದಾನವನ್ನು ಮಾಡಲಾಗುತ್ತೆ. ಸ್ನೇಹಿತರು ಮತ್ತು ಸಂಬಂಧಿಕರಿಗೆ ಪ್ರಸಾದವನ್ನು ವಿತರಿಸಲಾಗುತ್ತದೆ.

ಯಮುನಾ ಜಯಂತಿ ಪ್ರಾಮುಖ್ಯತೆ ಯಮುನಾ ಜಯಂತಿ ಒಂದು ಪ್ರಮುಖ ಹಬ್ಬವಾಗಿದೆ, ವಿಶೇಷವಾಗಿ ಶ್ರೀಕೃಷ್ಣನ ಭಕ್ತರಿಗೆ. ಹಿಂದೂ ಪುರಾಣಗಳ ಪ್ರಕಾರ ಯಮುನಾ ದೇವಿಯು ಶ್ರೀಕೃಷ್ಣನ ಪತ್ನಿ. ಅದಕ್ಕಾಗಿಯೇ ಈ ಹಬ್ಬವು ಬ್ರಜ್, ಮಥುರಾ ಮತ್ತು ವೃಂದಾವನದ ಜನರಿಗೆ ಅಂತಹ ಗೌರವವನ್ನು ಹೊಂದಿದೆ. ಯಮುನಾ ನದಿಯನ್ನು ಹಿಂದೂ ಸಂಸ್ಕೃತಿಯಲ್ಲಿ ಗಂಗಾ, ಬ್ರಹ್ಮಪುತ್ರ, ಸರಸ್ವತಿ ಮತ್ತು ಗೋದಾವರಿಯಂತೆ ಪವಿತ್ರ ನದಿ ಎಂದು ಪೂಜಿಸಲಾಗುತ್ತದೆ. ಅದಕ್ಕಾಗಿಯೇ ಈ ದಿನವು ಯಮುನಾ ದೇವಿಯ ಅವರೋಹಣವನ್ನು ಮತ್ತು ಆಕೆಯ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

ಇದನ್ನೂ ಓದಿ: ‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ನಿಗೆ ಜನ್ಮಾಷ್ಟಮಿ ದಿನ ಸಾರಥಿಯ ಶುಭ ಹಾರೈಕೆ!

Krishna Janmashtami 2021 ಶ್ರೀ ಕೃಷ್ಣನ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಆಸಕ್ತಿಕರ ಸಂಗತಿಗಳು

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ