ವೃಷಭ ರಾಶಿಯ ಮಂದಿ ತಮ್ಮ ಜೀವನ ಸಂಗಾತಿಯಿಂದ ಈ ಗುಣಗಳನ್ನು ಬಯಸುತ್ತಾರೆ, ಏನು ತಿಳಿಯಿರಿ

ವೃಷಭ ರಾಶಿಯ ಮಂದಿ ಹಠವಾದಿಗಳು, ಮೂಡಿಗಳು, ಆಕ್ರಮಣಕಾರಿಗಳು ಜೊತೆಗೆ ಬುದ್ಧಿವಂತರೂ ಆಗಿರುತ್ತಾರೆ. ಅವರಿಗೆ ಐಶ್ಚರ್ಯ ಮತ್ತು ವಿಲಾಸಿ ಜೀವನ ಇಷ್ಟವಾಗಿರುತ್ತದೆ. ಬೆಲೆಬಾಳುವ ವಸ್ತುಗಳ ಬಗ್ಗೆ ಅವರಿಗೆ ಆಸೆಯಿರುತ್ತದೆ. ಅವರನ್ನು ಆಸೆಬುರುಕ, ಠೊಳ್ಳು ಜನ ಎಂದೂ ಗುರುತಿಸುತ್ತಾರೆ.

ವೃಷಭ ರಾಶಿಯ ಮಂದಿ ತಮ್ಮ ಜೀವನ ಸಂಗಾತಿಯಿಂದ ಈ ಗುಣಗಳನ್ನು ಬಯಸುತ್ತಾರೆ, ಏನು ತಿಳಿಯಿರಿ
ವೃಷಭ ರಾಶಿಯ ಮಂದಿ ತಮ್ಮ ಜೀವನ ಸಂಗಾತಿಯಿಂದ ಈ ಗುಣಗಳನ್ನು ಬಯಸುತ್ತಾರೆ, ಏನು ಇಳಿಯಿರಿ
Follow us
TV9 Web
| Updated By: ಆಯೇಷಾ ಬಾನು

Updated on: Sep 28, 2021 | 8:02 AM

ವೃಷಭ ರಾಶಿಯ ಮಂದಿ ತಮ್ಮ ಜೀವನ ಸಂಗಾತಿಯಿಂದ ಅನೇಕ ಗುಣಗಳನ್ನು ಬಯಸುತ್ತಾರೆ, ಈ ಗುಣಗಳು ಇಲ್ಲವಾದರೆ ಅವರು ಅಂತಹ ಜೀವನ ಸಂಗಾತಿಯನ್ನು ಬೇಡವೆನ್ನುತ್ತಾರೆ. ಜಾತಕದಲ್ಲಿ ಇರುವ 12 ರಾಶಿಗಳ ಪೈಕಿ ವೃಷಭ ರಾಶಿಯ ಜನ ತನ್ನ ಸಂಗಾತಿಯ ಬಗ್ಗೆ ಸ್ಪಷ್ಟವಾಗಿ ಕೆಲ ಗುಣ ವಿಶೇಷಗಳನ್ನು ಹೊಂದಿರುತ್ತಾರೆ. ವೃಷಭ ರಾಶಿಯವರು ಸಹ ಸ್ವತಃ ಕೆಲ ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಮತ್ತು ತಮ್ಮ ಸಂಗಾತಿಯಿಂದಲೂ ಆ ಗುಣಗಳನ್ನ ನಿರೀಕ್ಷಿಸುತ್ತಾರೆ. ಅದರ ಹುಡುಕಾಟದಲ್ಲಿ ಆ ಗುಣಗಳು ಗೋಚರವಾಗದಿದ್ದರೆ ನಿರಾಶೆಗೊಳ್ಳುತ್ತಾರೆ.

ವೃಷಭ ರಾಶಿಯ ಮಂದಿ ಹಠವಾದಿಗಳು, ಮೂಡಿಗಳು, ಆಕ್ರಮಣಕಾರಿಗಳು ಜೊತೆಗೆ ಬುದ್ಧಿವಂತರೂ ಆಗಿರುತ್ತಾರೆ. ಅವರಿಗೆ ಐಶ್ಚರ್ಯ ಮತ್ತು ವಿಲಾಸಿ ಜೀವನ ಇಷ್ಟವಾಗಿರುತ್ತದೆ. ಬೆಲೆಬಾಳುವ ವಸ್ತುಗಳ ಬಗ್ಗೆ ಅವರಿಗೆ ಆಸೆಯಿರುತ್ತದೆ. ಅವರನ್ನು ಆಸೆಬುರುಕ, ಠೊಳ್ಳು ಜನ ಎಂದೂ ಗುರುತಿಸುತ್ತಾರೆ. ಅವರು ಆತ್ಮವಿಶ್ವಾಸಿಗಳು, ಹಗಲು ರಾತ್ರಿ ಎನ್ನದೆ ಕೆಲಸ ಮಾಡುವ ಶ್ರಮಜೀವಿಗಳು. ಏನೇ ಕೆಲಸ ಮಾಡಿದರೂ ಅದರಲ್ಲಿ ತನ್ಮಯರಾಗಿ ಪೂರ್ಣ ಪ್ರಾಣದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಧೈರ್ಯಶಾಲಿಗಳು: ವೃಷಭ ರಾಶಿಯ ಮಂದಿ ಯಾರನ್ನೇ ಆಗಲಿ ಪ್ರೀತಿಸುವುದಕ್ಕೆ ಮತ್ತು ಅವರ ಮೇಲೆ ಪೂರ್ಣ ಪ್ರಮಾಣದಲ್ಲಿ ವಿಶ್ವಾಸವಿಡುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ವೃಷಭ ರಾಶಿಯವರ ಜೀವನ ಸಂಗಾತಿಯಾಗಿ ಬರುವವರು ತುಂಬಾ ನಿರೀಕ್ಷಣೆಯಲ್ಲಿ ಸಮಯ ವ್ಯಯ ಮಾಡುತ್ತಾರೆ. ಇದರಿಂದ ಅವರ ಜೀವನ ಸಂಗಾತಿಯಾಗಿ ಬರುವವರು ಧೈರ್ಯಗೆಡಬಾರದು. ಸಂಬಂಧ ಬೆಳೆಸುವುದರಲ್ಲಿ ಆತುರ ತೋರಬಾರದು.

ನೇರವಂತಿಕೆ: ವೃಷಭ ರಾಶಿಯ ಇರುವುದನ್ನೇ ಅಗಿಯಲು ಅಥವಾ ಮೆಲುಕು ಹಾಕಲು ಬರುವುದಿಲ್ಲ. ಪ್ರಾಮಾಣಿಕರು, ಮೊಂಡುವಾದಿಗಳು ಆದರೂ ಸಾದಾಸೀದಾ ಮನುಷ್ಯರಾಗಿದ್ದು, ಜೀವನ ಸಂಗಾತಿಯಿಂದಲ್ಲೂ ಅದನ್ನೇ ಬಯಸುತ್ತಾರೆ. ತನ್ನ ಬಾಳ ಸಂಗಾತಿಯಾಗಿ ಬರುವವರು ಯಾವುದೇ ಕೂಟ ನೀತಿಯಲ್ಲಿ ತೊಡಗಿರಬಾರದು.

ಕಷ್ಟ ಜೀವಿಗಳು: ವೃಷಭ ರಾಶಿಯವರು ವಿಲಾಸಿ ಜೀವನಕ್ಕೆ ಮನಸೋತಿರುತ್ತಾರೆ. ಇದರಿಂದಾಗಿ ತನ್ನ ಜೀವನ ಸಂಗಾತಿ ಉದ್ಯೋಗಕ್ಕೆ ಹೋಗಿ ಹಣ ಸಂಪಾದಿಸುವುದನ್ನು ಇಚ್ಛಿಸುವುದಿಲ್ಲ.

ಭರವಸೆಯ ಜೀವಿಗಳು: ವೃಷಭ ರಾಶಿಯವರು ಅವಿಶ್ವಸನೀಯ ರೂಪದಲ್ಲಿದ್ದರೂ ವಿಶ್ವಸನೀಯರಾಗಿ ಹೊರಹೊಮ್ಮುತ್ತಾರೆ. ಅವರ ಮೇಲೆ ನಿಶ್ಚಿತವಾಗಿ ಭರವಸೆಯಿಡಬಹುದು. ಇವರ ಜೀವನ ಸಂಗಾತಿಯೂ ಇದೇ ಗುಣ ಹೊಂದಿರಬೇಕು ಎಂದು ಬಯಸುತ್ತಾರೆ. ಇನ್ನು ಸಂಬಂಧದ ವುಷಯದಲ್ಲಿ ಸಮರ್ಪಣಾ ಭಾವದಿಂದ ಇರಬೇಕು ಎಂದು ಬಯಸುತ್ತಾರೆ.

(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)

(qualities that every taurus person wants in their life partner know what)

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ