Raksha Bandhan 2021: ಸಹೋದರಿ ಗಾಂಧಾರಿಗಾಗಿ ತನ್ನ ಜೀವನವನ್ನೇ ಸವೆಸಿದ ಶಕುನಿ

| Updated By: ಆಯೇಷಾ ಬಾನು

Updated on: Aug 19, 2021 | 4:27 PM

ಮಹಾಭಾರತದ ಶಕುನಿಗೆ ತನ್ನ ಸಹೋದರಿ ಗಾಂಧಾರಿ ಮೇಲೆ ತುಂಬಾ ಪ್ರೀತಿ. ಆದ್ದರಿಂದಲೇ ಗಾಂಧಾರ ರಾಜ್ಯಕ್ಕೆ ರಾಜನಾಗದೆ ಕೊನೆಯ ಉಸಿರು ಇರುವವರೆಗೆ ತನ್ನ ತಂಗಿಯ ಮನೆಯಲ್ಲೇ ಉಳಿದುಬಿಡುತ್ತಾನೆ.

Raksha Bandhan 2021: ಸಹೋದರಿ ಗಾಂಧಾರಿಗಾಗಿ ತನ್ನ ಜೀವನವನ್ನೇ ಸವೆಸಿದ ಶಕುನಿ
ಶಕುನಿ ಮತ್ತು ಗಾಂಧಾರಿ
Follow us on

ದೇಶದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಮಹತ್ವ, ಇತಿಹಾಸ, ಹಾಗೂ ಹಬ್ಬದ ಹಿಂದೆ ತಿಳಿದುಕೊಳ್ಳಬೇಕಾದ ಸಂದೇಶವಿರುತ್ತೆ. ಹಬ್ಬಗಳು ಏಕತೆ ಮತ್ತು ಸಾಮಾಜಿಕ ಸಾಮರಸ್ಯದ ಭಾವನೆ ಮೂಡಿಸುತ್ತವೆ. ಇವು ಜನರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತವೆ. ಇನ್ನು ಅಸಂಖ್ಯಾತ ಸಂಬಂಧಗಳಲ್ಲಿ, ಅಣ್ಣ ತಂಗಿ ನಡುವಿನ ಬಂಧ ವಿಶೇಷವಾದದ್ದು. ಈ ಹಬ್ಬ ಸಹೋದರ ಸಹೋದರಿಯರಿಗೆ ವರ್ಷದಿಂದ ವರ್ಷಕ್ಕೆ ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಈ ಅಣ್ಣ-ತಂಗಿಯರ ರಕ್ಷಾ ಬಂಧನಕ್ಕೆ ವಿಶೇಷವೆಂಬಂತೆ ನಮ್ಮ ಭಾರತೀಯ ಮಹಾಕಾವ್ಯಗಳಲ್ಲಿ ಉಲ್ಲೇಖವಾದಂತಹ ಅಣ್ಣ-ತಂಗಿಯರ ಪ್ರೀತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಶಾಂತ ಮತ್ತು ಶ್ರೀರಾಮ (Shanta and Shri Rama)
ರಾಜ ದಶರಥ ಮತ್ತು ರಾಣಿ ಕೌಶಲ್ಯಾ ಅವರ ಹಿರಿಯ ಮಗಳು ಶಾಂತ. ಈಕೆ ಶ್ರೀ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರ ಅಕ್ಕ, ದಶರಥನ ನಾಲ್ಕು ಗಂಡು ಮಕ್ಕಳಲ್ಲಿ ಶಾಂತ ಹಿರಿಯಳು. ಆದ್ರೆ ಆಕೆ ಹುಟ್ಟಿದ ಕೂಡಲೇ ಅಂಗ ರಾಜ್ಯದ ರಾಜನಿಗೆ ದತ್ತು ನೀಡಲಾಗಿತ್ತು.

ಶ್ರೀ ಕೃಷ್ಣ ಮತ್ತು ಸುಭದ್ರ (Shri Krishna and Subhadra)
ಶ್ರೀ ಕೃಷ್ಣನು ದೇವಕಿ ಮತ್ತು ವಾಸುದೇವನ ಎಂಟನೆಯ ಮಗ. ಸೆರೆಮನೆಯಲ್ಲಿ ಕೃಷ್ಣನ ಜನನವಾಯಿತು. ಕೆಲ ವರ್ಷಗಳ ನಂತರ, ಕೃಷ್ಣನು ಕಂಸನನ್ನು ಕೊಂದು ತನ್ನ ತಂದೆ-ತಾಯಿಯನ್ನು ಸೆರೆವಾಸದಿಂದ ಬಿಡುಗಡೆ ಮಾಡಿದ ನಂತರ, ಸುಭದ್ರಾ ಜನಿಸಿದಳು. ಪುರಿ ಜಗನ್ನಾಥ ದೇವಸ್ಥಾನದ ವಾರ್ಷಿಕವಾಗಿ ನಡೆಸುವ ರಥ ಯಾತ್ರೆಯ ಸಂಪ್ರದಾಯವು ಸುಭದ್ರೆಯನ್ನು ತನ್ನ ಸಹೋದರರಾದ ಶ್ರೀ ಕೃಷ್ಣ ಮತ್ತು ಬಲರಾಮನ ಪ್ರೀತಿಯನ್ನು ಸಾರುತ್ತದೆ. ಸುಭದ್ರೆಯು ಪಾಂಡವ ರಾಜಕುಮಾರ ಅರ್ಜುನನನ್ನು ಮದುವೆಯಾಗಿ ಅಭಿಮನ್ಯುವಿಗೆ ತಾಯಿಯಾಗುತ್ತಾಳೆ. ಸುಭದ್ರೆ ಯೋಗಮಯ ದೇವಿಯ ಅವತಾರವೆಂದೂ ಹೇಳಲಾಗುತ್ತದೆ.

ರಾವಣ ಮತ್ತು ಸೂರ್ಪನಕಿ(Ravana and Surpanakha)
ಲಂಕೆಯ ರಾಜನಾದ ರಾಕ್ಷಸ ರಾವಣನಿಗೆ ತನ್ನ ಸಹೋದರಿ ಸೂರ್ಪನಕಿ ಎಂದರೆ ಎಲ್ಲಿಲ್ಲದ ಪ್ರೀತಿ. ತಂಗಿಗಾಗಿ ಏನು ಬೇಕಾದರೂ ಮಾಡುವಂತಹವನಾಗಿದ್ದ. ಶ್ರೀರಾಮ ಮತ್ತು ಲಕ್ಷ್ಮಣರಿಂದ ಮದುವೆಗೆ ತಿರಸ್ಕರಿಸಲ್ಪಟ್ಟ ನಂತರ ಸೂರ್ಪನಕಿ ಸಹಾಯಕ್ಕಾಗಿ ರಾವಣನನ್ನು ಕೇಳಿಕೊಳ್ಳುತ್ತಾಳೆ ತನಗಾದ ಅವಮಾನ ಹೇಳುತ್ತಾಳೆ. ಆಗ ರಾವಣ ಸೀತೆಯನ್ನು ಅಪಹರಿಸುವ ಮೂಲಕ ಅವಮಾನವನ್ನು ತೀರಿಸಿಕೊಳ್ಳಲು ನಿರ್ಧರಿಸುತ್ತಾನೆ.

ದುಶಾಲ ಮತ್ತು ಕೌರವ ಸಹೋದರರು(Dushala and the Kaurava brothers)
ಧೃತರಾಷ್ಟ್ರ ಮತ್ತು ಗಾಂಧಾರಿಯ ಏಕೈಕ ಪುತ್ರಿ ದುಶಾಲ. ಈಕೆಗೆ ನೂರು ಸಹೋದರರಿದ್ದರು, ಮತ್ತು ಅವರು ಮಹಾಭಾರತದ ಪ್ರಸಿದ್ಧ ಕೌರವರು. ಈಕೆಗೆ 100 ಸಹೋದರರ ಪ್ರೀತಿ ಸಿಗುತ್ತಿತ್ತು. ದುಶಾಲ ಜಯಧ್ರತನ ಪತ್ನಿ.

ಶಕುನಿ ಮತ್ತು ಗಾಂಧಾರಿ(Shakuni and Gandhari)
ಮಹಾಭಾರತದ ಶಕುನಿಗೆ ತನ್ನ ಸಹೋದರಿ ಗಾಂಧಾರಿ ಮೇಲೆ ತುಂಬಾ ಪ್ರೀತಿ. ಆದ್ದರಿಂದಲೇ ಗಾಂಧಾರ ರಾಜ್ಯಕ್ಕೆ ರಾಜನಾಗದೆ ಕೊನೆಯ ಉಸಿರು ಇರುವವರೆಗೆ ತನ್ನ ಸಹೋದರಿಯ ಮನೆಯಲ್ಲೇ ಉಳಿದುಬಿಡುತ್ತಾನೆ. ದೃಷ್ಟಿಹೀನನಾದ ಧೃತರಾಷ್ಟ್ರನನ್ನು ತನ್ನ ಸಹೋದರಿ ಮದುವೆಯಾಗುವುದು ಶಕುನಿಗೆ ಇಷ್ಟವಿರಲಿಲ್ಲ. ಹೀಗಾಗಿ ಮದುವೆಯ ಪ್ರಸ್ತಾಪ ತಂದ ಭೀಷ್ಮ ಮೇಲೆ ಸೇಡು ತೀರಿಸಿಕೊಳ್ಳುವುದು ಶಕುನಿಯ ಬಯಕೆಯಾಗಿತ್ತು. ಆದ್ರೆ ಕೊನೆಯಲ್ಲಿ, ಅವನ ಸೇಡು ಭೀಷ್ಮರಿಗೆ ಮಾತ್ರವಲ್ಲದೆ ಗಾಂಧಾರಿಯ ಇಡೀ ಕುಟುಂಬಕ್ಕೆ ವಿನಾಶಕಾರಿಯಾಯಿತು.

ಇದನ್ನೂ ಓದಿ: Mehndi Designs: ರಕ್ಷಾ ಬಂಧನದ ಸಲುವಾಗಿ ಹಚ್ಚಿಕೊಳ್ಳುವ ಸುಲಭದ ಮೆಹಂದಿ ಡಿಸೈನ್​ಗಳು; ಮದರಂಗಿಯಲ್ಲಿ ಕಂಗೊಳಿಸಲಿ ನಿಮ್ಮ ಕೈಗಳು

Published On - 7:49 am, Thu, 19 August 21