ಈಗಲೂ ನಾವು ಭೇಟಿ ಕೊಡಬಹುದಾದ ರಾಮಾಯಣದ 13 ಪ್ರಾಚೀನ ತಾಣಗಳು ಇಲ್ಲಿವೆ
ಹಿಂದೂ ಧರ್ಮದ ಅತ್ಯಂತ ಜನಪ್ರಿಯ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣವು ವಾಸ್ತವದಲ್ಲಿ ನಡೆದಿದೆಯೋ ಇಲ್ಲವೋ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದ್ರೆ ನಡೆದಿದೆ ಎಂಬ ಸಾಕ್ಷಿಯನ್ನು ನೀಡುವಂತಹ ಅನೇಕ ಪುರಾವೆಗಳನ್ನು ನಾವು ಈಗಲೂ ನೋಡಬಹುದು. ರಾಮಾಯಣದ ಪ್ರಭಾವವು ತಲೆಮಾರುಗಳನ್ನು ಮೀರಿದ್ದು ಮತ್ತು ಅವುಗಳಿಂದ ನಮ್ಮ ಜೀವಕ್ಕೆ ಬೇಕಾದ ಅನೇಕ ಸಂದೇಶಗಳು, ಜೀವಕ್ಕೆ ಮಾರ್ಗ ದರ್ಶನಗಳು ಸಿಗುತ್ತವೆ. ಅದೇನೇ ಇರಲಿ, ಸದ್ಯ ನಾವೀಗ ರಾಮಾಯಣಕ್ಕೆ ಸಂಬಂಧಪಟ್ಟ ಕೆಲವು ತಾಣಗಳನ್ನು ಪರಿಚಯಿಸುತ್ತಿದ್ದೇವೆ. ಇವುಗಳನ್ನು ಹಿಂದೂ ಮಹಾಕಾವ್ಯದಲ್ಲಿ ಉಲ್ಲೇಖಿಸಲಾಗಿಲ್ಲ ಆದರೆ ಪ್ರಸ್ತುತ ಸಮಯದಲ್ಲಿ ಅಸ್ತಿತ್ವದಲ್ಲಿವೆ. ಬಹುಶಃ ರಾಮಾಯಣವು ಈ ತಾಣಗಳಲ್ಲಿ ನಡೆದಿರಬಹುದು ಎಂಬ ಅಭಿಪ್ರಾಯ ಜನರಲ್ಲಿದೆ.