Ram Navami 2024: ಪ್ರಾಚೀನ ಶ್ರೀನಾಥ ದೇವಾಲಯದಿಂದ ಅಯೋಧ್ಯೆ ರಾಮನಿಗೆ “ಮಥಾಡಿ” ಮಹಾಪ್ರಸಾದ!

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 17, 2024 | 10:18 AM

ಮೊದಲ ಬಾರಿಗೆ, 'ಮಥಾಡಿ' ಎಂದು ಕರೆಯಲ್ಪಡುವ ಮಹಾಪ್ರಸಾದವನ್ನು ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀಕೃಷ್ಣನ ಪ್ರಾಚೀನ ಶ್ರೀನಾಥ ದೇವಾಲಯದಿಂದ ಅಯೋಧ್ಯೆ ರಾಮನಿಗೆ ಕಳುಹಿಸಲಾಗುತ್ತಿದೆ. ಈ ಯಾತ್ರೆ ಭಾನುವಾರ ಶ್ರೀನಾಥನ ದೇವಸ್ಥಾನದಿಂದ ಪ್ರಾರಂಭವಾಗಿದ್ದು ಇಂದು (ಎ. 17) ಶ್ರೀ ರಾಮ ನವಮಿಯಂದು ಅಯೋಧ್ಯೆಯನ್ನು ತಲುಪಲಿದೆ.

Ram Navami 2024: ಪ್ರಾಚೀನ ಶ್ರೀನಾಥ ದೇವಾಲಯದಿಂದ ಅಯೋಧ್ಯೆ ರಾಮನಿಗೆ ಮಥಾಡಿ ಮಹಾಪ್ರಸಾದ!
ಸಾಂದರ್ಭಿಕ ಚಿತ್ರ
Follow us on

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಗವಾನ್ ರಾಮನ ಪಟ್ಟಾಭಿಷೇಕದ ನಂತರ ನಡೆಯಲಿರುವ ಮೊದಲ ಶ್ರೀರಾಮ ನವಮಿ ಆಚರಣೆಗೆ ಇಡೀ ದೇಶ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮೊದಲ ಬಾರಿಗೆ, ‘ಮಥಾಡಿ’ ಎಂದು ಕರೆಯಲ್ಪಡುವ ಮಹಾಪ್ರಸಾದವನ್ನು ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀಕೃಷ್ಣನ ಪ್ರಾಚೀನ ಶ್ರೀನಾಥ ದೇವಾಲಯದಿಂದ ಅಯೋಧ್ಯೆ ರಾಮನಿಗೆ ಕಳುಹಿಸಲಾಗುತ್ತಿದೆ. ಈ ಯಾತ್ರೆ ಭಾನುವಾರ ಶ್ರೀನಾಥನ ದೇವಸ್ಥಾನದಿಂದ ಪ್ರಾರಂಭವಾಗಿದ್ದು ಇಂದು (ಎ. 17) ಶ್ರೀ ರಾಮ ನವಮಿಯಂದು ಅಯೋಧ್ಯೆಯನ್ನು ತಲುಪಲಿದೆ. ಈ ಮಥಾಡಿ ಪ್ರಸಾದವನ್ನು ಬಾಲರಾಮನಿಗೆ ನೈವೇದ್ಯ ಮಾಡಿದ ಬಳಿಕ, ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುವುದು. ಈ ನಿಟ್ಟಿನಲ್ಲಿ, ಒಂದು ಲಕ್ಷ ಮಥಾಡಿ ಮಹಾಪ್ರಸಾದವನ್ನು ಅಯೋಧ್ಯೆಗೆ ಕಳುಹಿಸಲಾಗುತ್ತಿದೆ ಎಂದು ಶ್ರೀನಾಥ ದೇವಾಲಯದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಮಥಾಡಿ “ಮಹಾಪ್ರಸಾದಂ ಯಾತ್ರೆ”ಯು ನಾಥದ್ವಾರದಿಂದ ಪ್ರಾರಂಭವಾಗಿ ಭಿಲ್ವಾರಾ, ಜೈಪುರ, ಮಥುರಾ ಜತಿಪುರ ಮತ್ತು ಲಕ್ನೋ ಮೂಲಕ ಅಯೋಧ್ಯೆಯನ್ನು ತಲುಪುತ್ತದೆ. ರಾಮನವಮಿಯ ಸಂದರ್ಭದಲ್ಲಿ, ಅಯೋಧ್ಯೆಯಲ್ಲಿ ವಿತರಿಸಲಾಗುವ ಈ ಮಥಾಡಿ ಪ್ರಸಾದವನ್ನು ಶ್ರೀನಾಥ ದೇವಾಲಯದಲ್ಲಿ ಉಚಿತವಾಗಿ ವಿತರಿಸಲಾಗುವುದು.

ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಅರ್ಪಣೆಯಾಗಲಿದೆ 1,11,111 ಕೆಜಿ ಲಡ್ಡು

ಮಥಾಡಿ ಮಹಾಪ್ರಸಾದ ಎಂದರೇನು?

‘ಮಥಾಡಿ’ ಎಂಬ ಆಹಾರ ಪದಾರ್ಥವನ್ನು ಶ್ರೀಕೃಷ್ಣನ ಪ್ರಸಾದವಾಗಿ ನೀಡಲಾಗುತ್ತದೆ. ಇದು ಒಂದು ವಿಶೇಷ ಖಾದ್ಯ. ಇದನ್ನು ಉದಯಪುರ ನಾಥದ್ವಾರದ ಶ್ರೀನಾಥ ದೇವಸ್ಥಾನದಲ್ಲಿ ಮಾತ್ರ ತಯಾರಿಸಲಾಗುತ್ತದೆ. ಈ ಪ್ರಸಾದವು ದೇಶದ ಬೇರೆ ಯಾವುದೇ ದೇವಾಲಯದಲ್ಲಿ ಕಂಡುಬರುವುದಿಲ್ಲ ಎಂಬುದೇ ಇದರ ವಿಶೇಷ. ಈ ಮಥಾಡಿ ಪ್ರಸಾದವನ್ನು ಬೇಗನೆ ಹಾಳಾಗದಂತೆ ದೀರ್ಘಕಾಲದವರೆಗೆ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ