Ramayan: ದಂಡಕಾರಣ್ಯವೆಂಬುದು ನಿಜವಾಗಿಯೂ ಇದೆಯಾ? ಅಲ್ಲಿಗೆ ಹೋಗುವುದು ಹೇಗೆ?

|

Updated on: Jan 19, 2024 | 3:05 PM

Dandakaranya: ಭಾರತೀಯ ಮಹಾಕಾವ್ಯವಾದ ರಾಮಾಯಣವನ್ನು ಓದಿದವರಿಗೆ ದಂಡಕಾರಣ್ಯದ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ರಾಕ್ಷಸರು ವಾಸವಾಗಿದ್ದ ದಟ್ಟವಾದ ಈ ಅರಣ್ಯದಲ್ಲಿ ವನವಾಸದಲ್ಲಿದ್ದ ರಾಮ, ಸೀತೆ, ಲಕ್ಷ್ಮಣ ಹಲವು ವರ್ಷಗಳ ಕಾಲ ವಾಸವಾಗಿದ್ದರು. ಈ ದಂಡಕಾರಣ್ಯ ಕಾಲ್ಪನಿಕ ಅರಣ್ಯವಾ? ಅಥವಾ ಇದು ನಿಜವಾಗಿಯೂ ಇದೆಯಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

Ramayan: ದಂಡಕಾರಣ್ಯವೆಂಬುದು ನಿಜವಾಗಿಯೂ ಇದೆಯಾ? ಅಲ್ಲಿಗೆ ಹೋಗುವುದು ಹೇಗೆ?
ಸಾಂದರ್ಭಿಕ ಚಿತ್ರ
Image Credit source: iStock
Follow us on

ರಾಮಾಯಣದಲ್ಲಿ (Ramayan) ರಾಮ-ಸೀತೆ-ಲಕ್ಷ್ಮಣರ ವನವಾಸವೇ ಬಹಳ ಮುಖ್ಯವಾದ ಘಟ್ಟ. ತನ್ನ ರಾಜ್ಯವನ್ನು ಭರತನ ಕೈಗೆ ಒಪ್ಪಿಸಿ ವನವಾಸಕ್ಕೆ ಹೊರಟ ಶ್ರೀರಾಮನಿಗೆ (Sri Ram) ಪತ್ನಿ ಸೀತೆಯೂ ಜೊತೆಯಾಗುತ್ತಾಳೆ. ಅಣ್ಣನೆಲ್ಲೋ ನಾನಲ್ಲೇ ಎಂದು ಲಕ್ಷ್ಮಣ ಕೂಡ ವನವಾಸಕ್ಕೆ ತೆರಳುತ್ತಾನೆ. ಕಾಡಿನಲ್ಲಿ ತಮ್ಮ ವನವಾಸದ ಸಮಯದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರು ಚಿತ್ರಕೂಟದಿಂದ ಭಾರತದ ಬೃಹತ್ ದಂಡಕಾರಣ್ಯ (Dandakaranya) ಎಂಬ ಅರಣ್ಯಕ್ಕೆ ಹೋದರು ಎಂದು ಧರ್ಮಗ್ರಂಥ ರಾಮಾಯಣದಲ್ಲಿ ತಿಳಿಸಲಾಗಿದೆ. ರಾಮಾಯಣದ ಪ್ರಕಾರ, ಈ ಮೂವರು ಬಹಳ ಸುಂದರವಾದ ಆದರೆ ಭಯಾನಕವಾದ ಕಾಡಿನಲ್ಲಿ ಹಲವು ವರ್ಷಗಳನ್ನು ಕಳೆದರು. ಈ ದಂಡಕಾರಣ್ಯ ಆಗಿನ ಕಾಲದಲ್ಲಿ ರಾಕ್ಷಸರಿಂದ ತುಂಬಿತ್ತು. ಅಲ್ಲಿ ಹೋದವರು ಜೀವಂತವಾಗಿ ಬರುವುದಿಲ್ಲ ಎಂಬ ನಂಬಿಕೆಯಿತ್ತು. ರಾಮಾಯಣದಲ್ಲಿ ವಿವರಿಸಲಾದ ಆ ದಂಡಕಾರಣ್ಯ ನಿಜವಾಗಿಯೂ ಇದೆಯಾ? ಅಲ್ಲಿಗೆ ನಾವು ಹೋಗಬಹುದಾ? ಎಂಬ ಕುತೂಹಲ ನಿಮಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.

ರಾಮಾಯಣದಲ್ಲಿ ಉಲ್ಲೇಖಿಸಲಾದ ಐತಿಹಾಸಿಕ ದಂಡಕಾರಣ್ಯ ಪ್ರದೇಶವು 92,200 ಚದರ ಕಿ.ಮೀ. ವಿಸ್ತೀರ್ಣದಲ್ಲಿದೆ. ಇದು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ, ಒಡಿಶಾ, ತೆಲಂಗಾಣ ಮತ್ತು ಕರ್ನಾಟಕ ಸೇರಿದಂತೆ ಪಶ್ಚಿಮದಲ್ಲಿ ಅಬುಜ್ಮರ್ ಬೆಟ್ಟಗಳನ್ನು ಮತ್ತು ಪೂರ್ವ ಘಟ್ಟಗಳನ್ನು ಒಳಗೊಂಡಿದೆ.

ಇದನ್ನೂ ಓದಿ: Ramayan: ಸೀತೆಯ ಅಗ್ನಿಪರೀಕ್ಷೆ ನಡೆದಿದ್ದು ಎಲ್ಲಿ?

ರಾಮಾಯಣದಲ್ಲಿ ಹೇಳಲಾದ ದಂಡಕಾರಣ್ಯದ ಬಹುತೇಕ ಭಾಗ ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿದೆ. ಈ ಪ್ರದೇಶವು ದಟ್ಟ ಕಾಡು, ಪ್ರಾಣಿಗಳು, ಜಲಪಾತಗಳು, ಪುರಾತನ ದೇವಾಲಯಗಳು, ಅರಮನೆಗಳು, ಬುಡಕಟ್ಟು ಜನರ ಮನೆಗಳು ಮತ್ತು ಬೆರಗುಗೊಳಿಸುವ ಬುಡಕಟ್ಟು ಕಲೆಗಳಿಗೆ ನೆಲೆಯಾಗಿದೆ. ತಿರತ್‌ಗಡ್ ಜಲಪಾತ, ಕಂಗೇರ್ ಧಾರಾ, ಚಿತ್ರಧಾರಾ, ಮಾಂಡವಾ ಜಲಪಾತ ಮತ್ತು ತಮದ ಘುಮರ್ ನೀವು ಬಸ್ತಾರ್‌ನಲ್ಲಿ ಭೇಟಿ ನೀಡಲೇಬೇಕಾದ ಇತರೆ ಹಲವಾರು ಸ್ಥಳಗಳು.

ದಂಡಕಾರಣ್ಯವು ಎರಡು ಪದಗಳ ಸಂಯೋಜನೆಯಾಗಿದೆ. ದಂಡ ಎಂಬುದು ದಂಡಕ ಎಂಬ ರಾಕ್ಷಸನ ಮನೆ ಮತ್ತು ಅರಣ್ಯ ಎಂದರೆ ಕಾಡು ಎಂದರ್ಥ. ಆದ್ದರಿಂದ ಈ ಪ್ರದೇಶವು ರಾಕ್ಷಸರು ವಾಸಿಸುತ್ತಿದ್ದ ದಂಡ ಸಾಮ್ರಾಜ್ಯವಾಗಿತ್ತು. ಈ ಸ್ಥಳವು ರಾವಣನ ಅಡಿಯಲ್ಲಿ ಲಂಕಾ ಸಾಮ್ರಾಜ್ಯದ ಅಧೀನದಲ್ಲಿತ್ತು.

ಇದನ್ನೂ ಓದಿ: ರಾಮಫಲದ ವಿಶೇಷತೆಯೇನು? ಈ ಹಣ್ಣಿಗೂ ರಾಮಾಯಣಕ್ಕೂ ಏನು ಸಂಬಂಧ?

ದಂಡಕಾರಣ್ಯಕ್ಕೆ ಹೋಗುವುದು ಹೇಗೆ?:

ನೀವು ರಾಯ್‌ಪುರದಿಂದ ದಂಡಕಾರಣ್ಯದಲ್ಲಿರುವ ನಿಮ್ಮ ಹೋಟೆಲ್‌ಗೆ ಕ್ಯಾಬ್ ಅನ್ನು ಬುಕ್ ಮಾಡಬಹುದು. ಇದಕ್ಕೆ 289 ಕಿ.ಮೀ ದೂರ ಪ್ರಯಾಣಿಸಬೇಕು. ಅಂದರೆ, ಕ್ಯಾಬ್​ನಲ್ಲಿ 7 ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ.

ಇನ್ನಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:00 pm, Fri, 19 January 24