ಮತ್ತೆ ಮತ್ತೆ ನೋಡಬೇಕೆನಿಸುವ ಭಕ್ತಿಪ್ರದಾನ, ಪ್ರಕೃತಿದತ್ತ ಚುಂಚನಕಟ್ಟೆ ಸೀತೆ ಮಡು ವೈಭೋಗ, ಏನಿದರ ಸ್ಥಳ ಪುರಾಣ?

ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಇರುವ ಸೀತೆ ಮಡು ಇಂದಿಗೂ ಕೂಡ ಅನೇಕ ಕಥೆಗಳನ್ನು ವಿವರಿಸುತ್ತದೆ. ರಾಮಾಯಣದ ಸಮಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣರಿಗೆ ವನವಾಸದ ಪ್ರಸಂಗ ಎದುರಗುತ್ತಾದೆ. ಆ ಸಮಯದಲ್ಲಿ ಈಗಿನ ಕೆ.ಆರ್ ನಗರ ತಾಲ್ಲೂಕಿನ ಚುಂಚನಕಟ್ಟೆ (ಈ ಹಿಂದಿನ ಚುಂಚಾರಣ್ಯಕ್ಕೆ -Chunchanakatte Waterfall) ಕ್ಕೆ ಬಂದಿದ್ದರು. ಚುಂಚನಕಟ್ಟೆಯಲ್ಲಿ ಕೆಲವು ದಿನಗಳ ಕಾಲ ಉಳಿಯುತ್ತಾರೆ. ಈ ಸಮಯಲ್ಲಿ‌ ಸೀತೆ ಸ್ನಾನ ಮಾಡಬೇಕಾದ ಸ್ಥಿತಿ ಎದುರಾಗುತ್ತೆ.

Follow us
ದಿಲೀಪ್​, ಚೌಡಹಳ್ಳಿ
| Updated By: ಸಾಧು ಶ್ರೀನಾಥ್​

Updated on: Jan 19, 2024 | 5:39 PM

ಹಿಂದೂಗಳ ಅನೇಕ ವರ್ಷಗಳ ಕನಸಾಗಿದ್ದ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಒಂದೆರಡು ದಿನಗಳಷ್ಟೇ ಬಾಕಿ ಉಳಿದಿವೆ. ಮೈಸೂರಿನಲ್ಲಿ ಸಿಕ್ಕ ಕೃಷ್ಣ ಶಿಲೆ, ಮೈಸೂರಿನ ಶಿಲ್ಪಿಯಿಂದಲೇ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲ ಮೂರ್ತಿಯಾಗಿ ರೂಪುಗೊಂಡಿದೆ. ಇದಷ್ಟೆ ಅಲ್ಲದೆ ಮೈಸೂರಿಗೂ ರಾಮನಿಗೂ ಸಾಕಷ್ಟು ನಂಟಿದ್ದು ಐತಿಹಾಸಿಕ ಕುರುಹುಗಳು ಶ್ರೀರಾಮನ ಜೀವಂತಿಕೆಯನ್ನ ಸಾರಿ ಹೇಳ್ತಿವೆ.

ರಾಜ್ಯದ ಹಲವೆಡೆ ರಾಮನ ಹೆಜ್ಜೆ ಗುರುತಿದೆ. ವನವಾಸದ ಸಮಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣರು ರಾಜ್ಯದ ಅನೇಕ ಸ್ಥಳಗಳಲ್ಲಿ ಸುತ್ತಾಟ ನಡೆಸಿ ಪೌರಾಣಿಕ ಕುರುಹುಗಳನ್ನ ಬಿಟ್ಟು ಹೋಗಿದ್ದಾರೆ. ಹೌದು. ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಇರುವ ಸೀತೆ ಮಡು ಇಂದಿಗೂ ಕೂಡ ಅನೇಕ ಕಥೆಗಳನ್ನು ವಿವರಿಸುತ್ತದೆ. ಏನಿದು ಸೀತೆ ಮಡು ಇತಿಹಾಸ ಅನ್ನೋದನ್ನ ನೋಡೋದಾದ್ರೆ ರಾಮಾಯಣದ ಸಮಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣರಿಗೆ ವನವಾಸದ ಪ್ರಸಂಗ ಎದುರಾಗುತ್ತದೆ. ಅವರು ವನವಾಸದ ಸಮಯದಲ್ಲಿ ಈಗಿನ ಕೆ.ಆರ್. ನಗರ ತಾಲ್ಲೂಕಿನ ಚುಂಚನಕಟ್ಟೆಗೆ (ಈ ಹಿಂದಿನ ಚುಂಚಾರಣ್ಯ) ಬಂದಿದ್ದರು. ರಾಮನ ಪರಿವಾರ ಚುಂಚನಕಟ್ಟೆಯಲ್ಲಿ ಕೆಲವು ದಿನಗಳ ಕಾಲ ಉಳಿಯುತ್ತಾರೆ. ಈ ಸಮಯದಲ್ಲಿ‌ ಸೀತೆ ಸ್ನಾನ ಮಾಡಬೇಕಾದ ಸ್ಥಿತಿ ಎದುರಾಗುತ್ತೆ.

ಈ ವೇಳೆ‌ ಎಲ್ಲಿಯೂ ಕೂಡ ನದಿ ಇರುವ ಸುಳಿವು ಸಿಗುವುದಿಲ್ಲವಂತೆ. ಆ ಸಮಯದಲ್ಲಿ ಲಕ್ಷ್ಮಣ ಸೀತೆಗಾಗಿ ಬಾಣವನ್ನು ನೆಲದ ಕಡೆಗೆ ಪ್ರಯೋಗ ಮಾಡುತ್ತಾನೆ. ಬಾಣವನ್ನು ಬಿಟ್ಟ ಜಾಗದಿಂದ ನೀರು ಚಿಮ್ಮುತ್ತದಂತೆ. ಆ ನೀರಿನಲ್ಲಿ ಸೀತೆ ಸ್ನಾನ ಮಾಡುತ್ತಾರೆ ಎನ್ನುವುದು ಹಿಂದೂ ಪುರಾಣದ ಮಾತು. ಈ‌ ರೀತಿ ಸೀತೆ ಸ್ನಾನ ಮಾಡುವ ಸ್ಥಳವನ್ನು ಇಂದಿಗೂ ಕೂಡ ಎಲ್ಲರೂ ಸೀತೆ ಮಡು ಎಂದು ಕರೆಯುತ್ತಾರೆ, ಜೊತೆಗೆ ಲಕ್ಷ್ಮಣ ಬಾಣವನ್ನು ಬಿಟ್ಟ ಸ್ಥಳವನ್ನು ಧನಷ್ಕೋಟಿ ಎಂದು ಕರೆಯುತ್ತಾರೆ ಎಂದು ಅರ್ಚಕರಾದ ನಾರಾಯಣ್ ಅಯ್ಯಂಗಾರ್ ಮಹತ್ವದ ಮಾಹಿತಿ ನೀಡುತ್ತಾರೆ.

ಜೊತೆಗೆ ಇಲ್ಲಿನ ಜನರ ವಿಶೇಷ ನಂಬಿಕೆಯೆಂದರೆ ನದಿಯಲ್ಲಿ ಹೆಚ್ಚು ನೀರು ಬಂದ ಸಮಯದಲ್ಲಿ ಸೀತೆ ಮಡುವಿನಲ್ಲಿ ಸೀಗೆಕಾಯಿ ಹಾಗೂ ಹರಿಶಿಣ ಬಣ್ಣದ ನೀರು ಬರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ ಕೂಡ. ಇದಷ್ಟೆ ಅಲ್ಲದೆ ರಾಮ ಸೀತೆ ದೇವಸ್ಥಾನಕ್ಕೆ ಹೋದರೆ ನಮಗೆ ಹೆಚ್ಚು ಕಾಣಿಸುವುದು ರಾಮನ ಎಡ ಭಾಗದಲ್ಲಿ ಸೀತೆ ನಿಂತು ದರ್ಶನ ನೀಡ್ತಿರೋ ಮೂರ್ತಿ.

ಮೈಸೂರಿನ ಕೆ.ಅರ್. ನಗರ ತಾಲ್ಲೂಕಿನ ಚುಂಚನಕಟ್ಟೆಯಲ್ಲಿರೋ ಶ್ರೀ ರಾಮ ದೇವಸ್ಥಾನದಲ್ಲಿ ಸೀತೆ ರಾಮನ ಬಲ ಭಾಗದಲ್ಲಿ ನಿಂತು ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಈ ರೀತಿ ಬಲಭಾಗದಲ್ಲಿ ನಿಂತು ದರ್ಶನ ನೀಡುವುದಕ್ಕೂ ಒಂದು ಕಥೆಯಿದೆ. ಈ ಹಿಂದೆ ವನವಾಸದ ಸಮಯದಲ್ಲಿ ಶ್ರೀ ರಾಮ, ಸೀತೆ, ಲಕ್ಷ್ಮಣ ಚುಂಚನಕಟ್ಟೆಗೆ ಅಗಮಿಸುತ್ತಾರೆ. ಈ ಸಮಯದಲ್ಲಿ ಚುಂಚನಕಟ್ಟೆಯಲ್ಲಿಯೇ ತೃಣಬಿಂದು ಮಹರ್ಷಿಗಳು ಬೀಡು ಬಿಟ್ಟಿರುತ್ತಾರೆ.

ಈ ವೇಳೆ ಲಕ್ಷ್ಮಣ ಧನುಸ್ಸು ಪ್ರಯೋಗ ಮಾಡಿ ನೀರು ಹರಿಸಿದ್ದ ಜಾಗವನ್ನು ಇದೇ ರೀತಿ ಹರಿಯುವ ರೀತಿಯಲ್ಲಿ ಮಾಡುವಂತೆ ರಾಮನನ್ನು ಕೇಳಿಕೊಳ್ಳುತ್ತಾರೆ ತೃಣಬಿಂದು ಮಹರ್ಷಿ. ಅದಷ್ಟೆ ಅಲ್ಲದೆ ಎಲ್ಲಾ ಕಡೆ ಸೀತಾ ಮಾತೆಯನ್ನು ತನ್ನ ಎಡ ಭಾಗದಲ್ಲಿ ನಿಲ್ಲಿಸಿ ದರ್ಶನ ನೀಡುತ್ತೀರಿ. ಆದರೆ ನನಗೆ ನೀವು ಸೀತೆ ಮಾತೆಯನ್ನು ತಮ್ಮ ಬಲ ಭಾಗದಲ್ಲಿ ನಿಲ್ಲಿಸಿ ದರ್ಶನ ಕೊಡಬೇಕು ಎಂದು ಕೇಳಿಕೊಳ್ಳುತ್ತಾನೆ. ಇದರಿಂದ ರಾಮ ತೃಣಬಿಂದು ಮಹರ್ಷಿಗಾಗಿ ಸೀತೆಯನ್ನು ಬಲಭಾಗದಲ್ಲಿ ನಿಲ್ಲಿಸಿ ದರ್ಶನ ನೀಡುತ್ತಾನೆ. ಈ ಕಾರಣದಿಂದ ಮಹರ್ಷಿಗಳು ಅದೇ ರೀತಿ ವಿಗ್ರಹಗಳನ್ನು ಕೆತ್ತನೆ ನಡೆಸಿ, ಪ್ರತಿಷ್ಠಾಪನೆ ಮಾಡುತ್ತಾರೆ.

ಒಟ್ಟಿನಲ್ಲಿ ಆ ಕಡೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದ್ರೆ, ಮತ್ತೊಂದೆಡೆ ರಾಮ ಬಿಟ್ಟು ಹೋದ ಕುರುಹುಗಳು ಅದರಲ್ಲೂ ನಮ್ಮ ಕರ್ನಾಟಕದಲ್ಲಿ ರಾಮನ ಇರುವಿಕೆಯನ್ನ ಸಾರಿ ಸಾರಿ ಹೇಳುತ್ತಿವೆ.

 ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ