AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಲಲ್ಲಾ ವಿಗ್ರಹದಲ್ಲೇನಿದೆ ವಿಶೇಷತೆ? ಎಳೆ ಎಳೆಯಾಗಿ ಬಿಚ್ಚಿಟ್ಟ ಶಿಲ್ಪಿಯ ಸಹೋದರ

ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಆದರೆ ಇದಕ್ಕೂ ಮುನ್ನ ರಾಮಲಲ್ಲಾ ಮೂರ್ತಿ ವಿಗ್ರಹ ವೈರಲ್​ ಆಗಿದೆ. ಹೀಗಾಗಿ ಮೈಸೂರಿನಲ್ಲಿ ಟಿವಿ9 ಜೊತೆ ಅರುಣ್ ಯೋಗಿರಾಜ್ ಸಹೋದರ ಸೂರ್ಯಪ್ರಕಾಶ್ ಅವರು ಮೂರ್ತಿ ವಿಶೇಷತೆ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ದಿಲೀಪ್​, ಚೌಡಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Jan 19, 2024 | 6:01 PM

Share

ಮೈಸೂರು, ಜನವರಿ 19: ಅಯೋಧ್ಯೆ (Ayodhya) ಮಂದಿರ ಲೋಕಾರ್ಪಣೆಗೆ ಕೆಲವು ದಿನವಷ್ಟೇ ಬಾಕಿ ಇದೆ. ಹೀಗಿರುವಾಗಲೇ ಬಾಲ ರಾಮನ ಮೂರ್ತಿಯ ಸಂಪೂರ್ಣ ಚಿತ್ರ ಬಹಿರಂಗವಾಗಿದೆ. ಜ.22 ರಂದು ಇದೇ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ರಾಮಲಲ್ಲಾ (Ram Lalla) ಮೂರ್ತಿ ವಿಗ್ರಹ ವೈರಲ್​ ಆಗುತ್ತಿರುವ ಹಿನ್ನೆಲೆ ಮೂರ್ತಿ ವಿಶೇಷತೆ ಬಗ್ಗೆ ಅರುಣ್ ಯೋಗಿರಾಜ್ ಸಹೋದರ ಸೂರ್ಯಪ್ರಕಾಶ್ ಟಿವಿ9ಗೆ ಪ್ರತಿಕ್ರಿಯಿಸಿದ್ದು, ರಾಮ ಸೂರ್ಯ ವಂಶಸ್ಥ. ಅದಕ್ಕಾಗಿ ತಲೆ ಮೇಲೆ ಸೂರ್ಯ ಇದೆ. ಪ್ರಭಾವಳಿ ಮೈಸೂರು ಶೈಲಿಯಲ್ಲಿ ಮೂಡಿ ಬಂದಿದೆ. ಪ್ರಭಾವಳಿಯಲ್ಲಿ ಎಲೆ ಮೂಡಿ ಬಂದಿದೆ. ಮೂರ್ತಿಯಲ್ಲಿ ರಾಮನ ದಶಾವತಾರ ಇದೆ ಎಂದು ಹೇಳಿದ್ದಾರೆ.

ಆಂಜನೇಯ ಬಲಭಾಗದಲ್ಲಿ, ಗರುಡ ಎಡಭಾಗದಲ್ಲಿ ಇದೆ. ಹೊಯ್ಸಳ ಶೈಲಿಯಲ್ಲ ಕೆತ್ತನೆ ಮಾಡುತ್ತಿದ್ದೇವೆ. ನಿಜವಾದ ಆಭರಣ ಹಾಕಿಕೊಂಡಾಗ ಕಾಣುವ ರೀತಿ ಇರುತ್ತೆ. ಇದೆ ಈ‌ ಕಲೆಯ ವಿಶೇಷವಾಗಿದೆ. ಬಟ್ಟೆಯಲ್ಲಿ ಬರುವ ಸುಕ್ಕುಗಳು ಕಾಣಿಸುತ್ತದೆ. ಪಾದವು ಕೂಡ ಸಾಕಷ್ಟು ವಿಶೇಷ ಇದೆ. ಐದು ವರ್ಷದ ಬಾಲಕನ ಪಾದ ಮುಟ್ಟಿದಾಗ ಸಿಗುವ ಸ್ಪರ್ಶದ ಅನುಭವವಾಗುತ್ತೆ ಎಂದಿದ್ದಾರೆ.

ಇದನ್ನೂ ಓದಿ: Ram Lalla: ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಹೇಗಿದ್ದಾನೆ? ವೈರಲ್ ಆಯ್ತು ಫೋಟೋ

ಪ್ರಾಣಪ್ರತಿಷ್ಠಾಪನೆ ದಿನ ಶಿಲ್ಪಿ ಕೂಡ ಅಂದು ಉಪವಾಸದಲ್ಲಿ ಇರುತ್ತಾರೆ. ಉಗುಳನ್ನು ಕೂಡ ನುಂಗುವಂತಿಲ್ಲ. ಆಹಾರ ಪದ್ದತಿ ಕೂಡ ಬೇರೆ ರೀತಿ ಇರುತ್ತದೆ. ಮನಸ್ಸು, ದೃಷ್ಟಿಯನ್ನು ನೀಡುವ ಶಿಲ್ಪಿ ಮನಸ್ಸು, ವಿಚಾರ ಸ್ಪಷ್ಟವಾಗಿರ ಬೇಕು. ಮೂರ್ತಿ ಇನ್ನು ಪರಿಪೂರ್ಣವಾಗಿಲ್ಲ. ಮೂರು ಬೆರಳು ಅಭಾಯಸ್ತ ಹೊಂದಿ, ಎರಡು ಬೆರಳು ಬಲಗೈನಲ್ಲಿ ಬಾಣವನ್ನು ಹಿಡಿದಿರುತ್ತಾನೆ.

ಎಡಗೈನಲ್ಲಿ ಬಿಲ್ಲನ್ನು ಹಿಡಿದಿರುತ್ತಾ‌ನೆ. ಬಿಲ್ಲು ಬಾಣವನ್ನು ಹಾಕಿದಾಗಲೆ ಮೂರ್ತಿ ಪೂರ್ಣವಾಗುವುದು. ಮೂರ್ತಿಗೆ ಶಕ್ತಿ ತುಂಬುವ ಕೆಲಸವಾಗುತ್ತಿದೆ. ದೃಷ್ಟಿಯನ್ನು ನೀಡುವುದು ಶಿಲ್ಪಿಯ ಅಂತಿಮ ಕೆಲಸವಾಗಿದೆ ಎಂದು ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಏಕಾಶಿಲಾ‌ ಹನುಮ.. ಅದೂ ಸಹ ಶಿಲ್ಪಿ ಅರುಣ್ ಯೋಗಿರಾಜ್ ಅವರದ್ದೇ ಕೆತ್ತನೆ, ಇಲ್ಲಿದೆ ನೋಡಿ

ಈಗಾಗಲೇ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಮೂರ್ತಿ ಗರ್ಭಗುಡಿ ಸೇರಿದೆ. ಭವ್ಯ ಮಂದಿರದಲ್ಲಿ 51 ಇಂಚು ಎತ್ತರದ, 5 ವರ್ಷದ ಧನುರ್ಧಾರಿ ಬಾಲರಾಮ ಮೂರ್ತಿಯ ದಿವ್ಯಕಾಂತಿ ಪಳಪಳ ಹೊಳೆಯುತ್ತಿದೆ. ಕರುನಾಡಿನ ಮಣ್ಣಿನಲ್ಲಿ ಸಿಕ್ಕ ಕೃಷ್ಣ ಶಿಲೆಯಲ್ಲಿ ಜನ್ಮ ಪಡೆದ ಬಾಲರಾಮನ ಮೂರ್ತಿಗೆ, ಸೋಮವಾರ ಪ್ರಾಣ ಪ್ರತಿಷ್ಠಾನೆಯಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:57 pm, Fri, 19 January 24