AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಬಾಲರಾಮನ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣ -ಶಾಸಕ ಜಿ.ಟಿ.ದೇವೇಗೌಡ ಘೋಷಣೆ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಮಲಲ್ಲಾ ಮೂರ್ತಿಯ ಶಿಲೆ ಸಿಕ್ಕಿದೆ. ಜ.22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗುತ್ತೆ. ಹೀಗಾಗಿ ಶ್ರೀ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಾಗದಲ್ಲೇ ಮಂದಿರ ನಿರ್ಮಾಣ ಮಾಡುತ್ತೇವೆ. ಜ.22ರಂದು ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗುತ್ತೆ. ಎಲ್ಲಾ ಜನರ ಬಳಿ ದೇಣಿಗೆ ಸಂಗ್ರಹ ಮಾಡಿ ಮಂದಿರ ನಿರ್ಮಾಣ ಮಾಡಲಾಗುತ್ತೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರು: ಬಾಲರಾಮನ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣ -ಶಾಸಕ ಜಿ.ಟಿ.ದೇವೇಗೌಡ ಘೋಷಣೆ
ಶಾಸಕ ಜಿ.ಟಿ.ದೇವೇಗೌಡ
ರಾಮ್​, ಮೈಸೂರು
| Edited By: |

Updated on: Jan 20, 2024 | 12:56 PM

Share

ಮೈಸೂರು, ಜ.20: ಬಾಲರಾಮನ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲಾಗುತ್ತೆ ಎಂದು ಮೈಸೂರಿನಲ್ಲಿ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ (GT Devegowda) ಘೋಷಣೆ ಮಾಡಿದ್ದಾರೆ. ಜ.22ರಂದು ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡ್ತೇವೆ. ಎಲ್ಲರ ಬಳಿ ದೇಣಿಗೆ ಸಂಗ್ರಹ ಮಾಡಿ ಮೈಸೂರು ತಾಲೂಕಿನ ಹಾರೋಹಳ್ಳಿಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು JDS ಶಾಸಕ ಜಿ.ಟಿ.ದೇವೇಗೌಡ ಅವರು ತಿಳಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಜಿ.ಟಿ. ದೇವೇಗೌಡ, ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಆಗಿದೆ. ದೇಶದ ಜನರು ಎದುರು ನೋಡುತ್ತಿರುವ ಬಾಲ ರಾಮನ ವಿಗ್ರಹ ಮೈಸೂರು ತಾಲೂಕಿನ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿಯ ದಲಿತ ಸಮುದಾಯದ ಮುಖಂಡರಾದ ರಾಮದಾಸ್ ಜಮೀನಿನಲ್ಲಿ ಕೃಷ್ಣ ಶಿಲೆ ಸಿಕ್ಕಿರುವುದು ನಮಗೆಲ್ಲ ಸಂತೋಷ. ಇಡೀ ಭಾರತ ದೇಶ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ರಾಮಲಲ್ಲಾ ವಿಗ್ರಹದ ಕಡೆ ನೋಡುತ್ತಿದ್ದಾರೆ. ನಮ್ಮ ದಲಿತ ಬಾಂಧವರ ಜಮೀನಿನಲ್ಲಿ ಮೂಡಿ ಬಂದಿರುವ ಶಿಲೆ. ಈ ಶಿಲೆಯನ್ನ ಕೆತ್ತನೆ ಮಾಡಿರುವವರು ನಮ್ಮ ಮೈಸೂರಿನವರು. ಕೃಷ್ಣ ಶಿಲೆಯನ್ನು ಹುಡುಕಿದ ಶ್ರೀನಿವಾಸ್ ಕೂಡ ನಮ್ಮ ಮೈಸೂರಿನವರು. ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದಿದ್ದ ವೇಳೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡಿದ್ದರು. ಈಗ ಇದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಮಲಲ್ಲಾ ಮೂರ್ತಿಯ ಶಿಲೆ ಸಿಕ್ಕಿದೆ. ಜ.22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗುತ್ತೆ. ಹೀಗಾಗಿ ಶ್ರೀ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಾಗದಲ್ಲೇ ಮಂದಿರ ನಿರ್ಮಾಣ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆಯಂದು ರಿಲಯನ್ಸ್ ಇಂಡಸ್ಟ್ರೀಸ್​​ಗೆ ರಜೆ ಘೋಷಿಸಿದ ಮುಖೇಶ್ ಅಂಬಾನಿ

ಜ.22ರಂದು ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗುತ್ತೆ. ಎಲ್ಲಾ ಜನರ ಬಳಿ ದೇಣಿಗೆ ಸಂಗ್ರಹ ಮಾಡಿ ಮಂದಿರ ನಿರ್ಮಾಣ ಮಾಡಲಾಗುತ್ತೆ. ಅರುಣ್ ಯೋಗಿರಾಜ್ ಅವರಿಂದಲೇ ದೇಗುಲಕ್ಕೆ ಮೂರ್ತಿ ಕೆತ್ತನೆ ಮಾಡಿಸಲಾಗುತ್ತೆ. ಅರುಣ್ ಮೈಸೂರಿಗೆ ಬಂದ ನಂತರ ಅವರಿಗೆ ಈ ಬಗ್ಗೆ ಮನವಿ ಮಾಡಲಾಗುವುದು. ರಾಮ, ಲಕ್ಷ್ಮಣ, ಸೀತಾ, ಭರತ, ಶತೃಘ್ನ ಸ್ವ ಪರಿವಾರ ಸಮೇತವಾದ ದೇಗುಲ ಇದಾಗಲಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.

ಎಲ್ಲಿಯ ಅಯೋಧ್ಯಾ? ಎಲ್ಲಿಯ ಹಾರೋಹಳ್ಳಿ? ಇದು ನಮ್ಮ ಪುಣ್ಯ

ಇನ್ನು ಟಿವಿ9ಗೆ ಕೃಷ್ಣ ಶಿಲೆ ಸಿಕ್ಕ ಜಮೀನು ಮಾಲೀಕ ರಾಮದಾಸ್ ಮಾತನಾಡಿದ್ದು, ದೇವಸ್ಥಾನಕ್ಕೆ ಭೂಮಿ‌ ಕೊಡುವುದಕ್ಕಿಂತ ಪುಣ್ಯದ ಕೆಲಸ ಬೇರೆ ಏನಿದೆ ಖುಷಿಯಿಂದ ನಾನು ದೇವಸ್ಥಾನ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದೇನೆ. ಅದಕ್ಕಾಗಿ ಬೇಕಾದ ಜಾಗ ನನ್ನ ಜಮೀನಿನಲ್ಲೇ ನೀಡುತ್ತೇನೆ. ಎಲ್ಲಿಯ ಅಯೋಧ್ಯಾ? ಎಲ್ಲಿಯ ಹಾರೋಹಳ್ಳಿ? ಇದು ನಮ್ಮ ಪುಣ್ಯ. ಇದು ಪುಣ್ಯಸ್ಥಳ ಅದಕ್ಕಾಗಿ ಇಲ್ಲಿ ದೇವಸ್ಥಾನ ನಿರ್ಮಾಣ ಆಗ್ತಿದೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ ರಾಮಲಲ್ಲಾ ವಿಗ್ರಹಕ್ಕೆ ಶಿಲೆ ತೆಗೆದುಕೊಟ್ಟ ಶ್ರೀನಿವಾಸ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ರಾಮಲಲ್ಲಾ ವಿಗ್ರಹದ ಜೊತೆಗೆ ಸೀತೆ, ಲಕ್ಷ್ಮಣ, ಹನುಮ, ಭರತ, ಶತೃಘ್ನ ವಿಗ್ರಹಕ್ಕೂ ಶಿಲೆ ಪೂರೈಕೆ ಮಾಡಲಾಗಿದೆ. ರಾಮಲಲ್ಲಾ ವಿಗ್ರಹ ಕೆತ್ತನೆಗೆ 9 ಅಡಿ, 8 ಇಂಚು ಅಡಿ ಉದ್ದ, 4 ಅಡಿ ಅಗಲದ ಶಿಲೆ ನೀಡಲಾಗಿದೆ. ಸೀತಾ ವಿಗ್ರಹಕ್ಕೆ 7 ಅಡಿ ಉದ್ದ, 4 ಅಡಿ ಅಗಲದ ಶಿಲೆ. ಭರತನ ವಿಗ್ರಹಕ್ಕೆ 5 ಅಡಿ ಉದ್ದ, 5 ಅಡಿ ಅಗಲದ ಶಿಲೆ. ಲಕ್ಷ್ಮಣ ವಿಗ್ರಹಕ್ಕೆ 6 ಅಡಿ ಉದ್ದ, 5 ಅಡಿ ಅಗಲದ ಶಿಲೆ. ಶತೃಘ್ನ ವಿಗ್ರಹಕ್ಕೆ 5 ಅಡಿ ಉದ್ದ, 4 ಅಡಿ ಅಗಲದ ವಿಗ್ರಹ ಪೂರೈಕೆ ಮಾಡಲಾಗಿದೆ ಎಂದು ಟಿವಿ9ಗೆ ಶ್ರೀನಿವಾಸ್ ಅವರು ಶಿಲೆ ಪೂರೈಕೆ ಮಾಡಿದ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಈ ಎಲ್ಲಾ ಶಿಲೆಗಳು ನಂಬರ್ 1 ಶಿಲೆಗಳು. ಸುಮಾರು ವರ್ಷಗಳಿಂದ ಶಿಲೆ ತೆಗೆಯುವ ಕೆಲಸ ಮಾಡುತ್ತಿದ್ದೇನೆ. ಈ ರೀತಿಯ ಶಿಲೆ ಹಿಂದೆ ಸಿಕ್ಕಿಲ್ಲ ಮುಂದೆ ಸಿಗುವುದಿಲ್ಲ. ನಾನು ಶಿಲೆಯನ್ನು ಮೊದಲು ನೋಡಿದ್ದು ಇದೀಗ ಶಿಲೆ ಮೂರ್ತಿ ರೂಪವಾಗಿದೆ. ರಾಮಲಲ್ಲಾ ಮೂರ್ತಿ ನೋಡಬೇಕು ಅಂತಾ ತುಂಬಾ ಆಸೆಯಾಗುತ್ತಿದೆ. ದಯಮಾಡಿ ಅವಕಾಶ ಮಾಡಿ ಕೊಡಿ ಎಂದು ಅತ್ಯಂತ ಭಾವುಕರಾಗಿ ಟಿವಿ9 ಮೂಲಕ ಶ್ರೀನಿವಾಸ್ ಅವರು ಮನವಿ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ