ಶ್ರೀರಾಮ ವನವಾಸದ ಸಮಯದಲ್ಲಿ ಬಿಟ್ಟಿದ್ದ ಬಾಣದ ತುಂಡು ಇಲ್ಲೇ ಇದೆ!
Shri Rama Arrowhead: ಶ್ರೀರಾಮ ವನವಾಸದ ಸಮಯದಲ್ಲಿ ಬಿಟ್ಟಿದ್ದ ಬಾಣದ ತುಂಡು ಇಲ್ಲೇ ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಗ್ರಾಮದ ಬಳಿ ಇರುವ ಶ್ರೀರಾಮದೇವರ ಬೆಟ್ಟದಲ್ಲಿದೆ!
ಅಯೋಧ್ಯೆಯ ಶ್ರೀರಾಮ ತನ್ನ ವನವಾಸದ ಸಮಯದಲ್ಲಿ ಲಕ್ಷ್ಮಣ, ಸೀತೆಯ ಜೊತೆ ಅದೊಂದು ದಂಡಕಾರಣ್ಯಕ್ಕೆ ಭೇಟಿ ನೀಡಿ ಪತ್ನಿಯ ತೊಡೆಯ ಮೇಲೆ ಮಲಗಿ ವಿಶ್ರಾಂತಿ ಪಡೆದಿದ್ದನಂತೆ. ಆಗ ಕಾಕಾಸುರ ಎಂಬ ಅಸುರ ಸೀತೆಯ ತೊಡೆ ಕುಕ್ಕಿದ ಕಾರಣ ರಕ್ತ ಸುರಿದು ಶ್ರೀರಾಮನಿಗೆ ತಗುಲಿತ್ತು. ಆಗ ಎಚ್ಚರಗೊಂಡ ಶ್ರೀರಾಮ ಕಾಕಸುರನಿಗೆ ಬಾಣ ಬಿಟ್ಟಿದ್ದ. ಕೊನೆಗೆ ಕಾಕಸುರ ಶ್ರೀರಾಮನಿಗೆ ಶರಣಾದ ಕಾರಣ ರಾಮ ಬಿಟ್ಟ ಬಾಣವನ್ನು ಹಿಡಿದು ಎರಡು ತುಂಡು ಮಾಡಿದ್ದನಂತೆ. ಅದರಲ್ಲಿ ಒಂದು ತುಂಡು ನಮ್ಮದೆ ರಾಜ್ಯದ ಅದೊಂದು ಸ್ಥಳದಲ್ಲಿ ಭದ್ರವಾಗಿದೆ.
ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಗ್ರಾಮದ ಬಳಿ ಇರುವ ಶ್ರೀರಾಮದೇವರ ಬೆಟ್ಟ ಇದೆ. ಹೆಸರೇ ಹೇಳುವ ಹಾಗೆ ತ್ರೇತಾಯುಗದಲ್ಲಿ ಶ್ರೀರಾಮ ಆತನ ಪತ್ನಿ ಸೀತೆ ಸೇರಿದಂತೆ ಲಕ್ಷ್ಮಣ ವನವಾಸ ಹೊರಟಾಗ ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಬಳಿಯ ದಟ್ಟಕಾರಣ್ಯ ಹಾಗೂ ಬೆಟ್ಟಕ್ಕೆ ಆಗಮಿಸಿದ್ದರಂತೆ. ಆಗ ಪತ್ನಿ ಸೀತೆಯ ತೊಡೆಯ ಮೇಲೆ ಶ್ರೀರಾಮ ತಲೆಯನ್ನಿಟ್ಟು ವಿಶ್ರಾಂತಿ ಮಾಡುತ್ತಿದ್ದಾಗ ಕಾಕಸುರನೆಂಬ ರಾಕ್ಷಸ ಸೀತೆಯ ತೊಡೆಗೆ ಕುಕ್ಕಿದ್ದನಂತೆ.
ಆಗ ರಕ್ತ ಸುರಿದು ರಾಮ ಎಚ್ಚರಗೊಂಡಾಗ ಕಾಕಸುರನ ಮೇಲೆ ಬಾಣ ಪ್ರಯೋಗ ಮಾಡಿದ್ದ. ಕೊನೆಗೆ ಕಾಕಸುರ ರಾಮನಿಗೆ ಶರಣಾದ ಕಾರಣ ಬಿಟ್ಟಿದ್ದ ಬಾಣವನ್ನು ಹಿಡಿದ ರಾಮ ಎರಡು ತುಂಡು ಮಾಡಿದ್ದನಂತೆ. ಅದರಲ್ಲಿ ಒಂದು ತುಂಡು ಮಂಡಿಕಲ್ಲು ರಾಮದೇವರ ಬೆಟ್ಟದ ಮೇಲಿದ್ದು, ಇನ್ನೊಂದು ಮಹಾರಾಷ್ಟ್ರದಲ್ಲಿದೆಯಂತೆ. ಅದಕ್ಕೆ ಗ್ರಾಮಸ್ಥರು ಬೆಟ್ಟದಲ್ಲಿ ದೇವಸ್ಥಾನ ಕಟ್ಟಿಸಿ ಬಾಣವನ್ನು ಗುಹೆಯಲ್ಲಿಟ್ಟಿದ್ದರು. ಇತ್ತಿಚಿಗೆ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಮಾಡುತ್ತಿರುವ ಕಾರಣ ಬಾಣದ ತುಂಡನ್ನು ಬೇರೆ ದೇವಸ್ಥಾನವೊಂದರಲ್ಲಿ ಸಂರಕ್ಷಿಸಿದ್ದಾರೆ.
Also Read: ಅಯೋಧ್ಯೆ ರಾಮ ಮಂದಿರಕ್ಕೆ ಬೆಂಗಳೂರು ಕೈಗಾರಿಕೋದ್ಯಮಿಯಿಂದ ಬೃಹದಾಕಾರದ ‘ಅಳಿಲು’ ಸೇವೆ!
ಮತ್ತೊಂದೆಡೆ ಶ್ರೀರಾಮ ಹಾಗೂ ತಂಡ ಮಂಡಿಕಲ್ಲು ದಟ್ಟಕಾರಣ್ಯದ ಬೆಟ್ಟದಲ್ಲಿದ್ದ ಋಷಿಮುನಿಗಳ ಆಶ್ರಮದಲ್ಲಿ ತಂಗಿದ್ದನಂತೆ. ಅದರ ಕುರುಹುಗಾಗಿ ಬೆಟ್ಟದಲ್ಲಿ ಎರಡು ಗುಹೆಗಳಿದ್ದು, ನೂರಾರು ವರ್ಷಗಳ ಹಿಂದೆ ನಿರ್ಮಾಣ ಮಾಡಿದ ರೀತಿಯಲ್ಲಿ ಮಣ್ಣಿನ ಆಸನ ವ್ಯವಸ್ಥೆಗಳಿವೆ. ಬಂಡೆಯ ಗುಹೆಯೊಳಗೆ ಮನುಷ್ಯರು ಇದ್ದರು ಎನ್ನುವುದನ್ನು ಸಾರಿ ಸಾರಿ ಹೇಳುತ್ತಿವೆ. ಇದ್ರಿಂದ ಅಯೋಧ್ಯೆಯ ಶ್ರೀರಾಮನ ಸವಿನೆನಪಿಗಾಗಿ ಬೆಟ್ಟದಲ್ಲಿ ಲಕ್ಷ್ಮಣ, ಸೀತೆ, ಆಂಜನೇಯ ಸಮೇತ ಶ್ರೀರಾಮರ ವಿಗ್ರಹಗಳನ್ನು ನೂರಾರು ವರ್ಷಗಳ ಹಿಂದೆಯೆ ಪ್ರತಿಷ್ಠಾಪಿಸಿ ನೂರಾರು ವರ್ಷಗಳಿಂದ ಪೂಜೆ, ಪುನಸ್ಕಾರಗಳನ್ನು ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ