Ravana worshipped in India: ಭಾರತದಲ್ಲಿಯೂ ರಾವಣನನ್ನು ಪೂಜಿಸುವ ಸ್ಥಳಗಳಿವೆ

| Updated By: ಅಕ್ಷತಾ ವರ್ಕಾಡಿ

Updated on: Mar 22, 2024 | 6:50 PM

ಲಂಕೆಯ ರಾಜ ಸೀತೆಯನ್ನು ಅಪಹರಿಸಿದನು ಹಾಗಾಗಿ ರಾಮನಿಗೆ ಅವನ ವಿರುದ್ಧ ಯುದ್ಧ ಮಾಡಬೇಕಾಯಿತು. ಆದರೆ ಇದರ ಹೊರತಾಗಿ ರಾವಣ ಮಹಾನ್ ಶಿವ ಭಕ್ತನಾಗಿದ್ದ ಎಂಬುದು ಕೂಡ ಸತ್ಯ. ಅಲ್ಲದೆ ರಾವಣನು ಕೆಲವು ಉತ್ತಮ ಗುಣಗಳನ್ನು ಹೊಂದಿದ್ದನು ಎನ್ನಲಾಗುತ್ತದೆ. ರಾವಣನನ್ನು ಸಾಮಾನ್ಯವಾಗಿ ತಿರಸ್ಕರಿಸಲಾಗಿದ್ದರೂ ಕೂಡ ಭಾರತದಲ್ಲಿ ರಾವಣನನ್ನು ಪೂಜಿಸುವ ಕೆಲವು ಸ್ಥಳಗಳಿವೆ. ಅವು ಯಾವುದು? ಎಲ್ಲಿವೆ ಗೊತ್ತಾ?

Ravana worshipped in India: ಭಾರತದಲ್ಲಿಯೂ ರಾವಣನನ್ನು ಪೂಜಿಸುವ ಸ್ಥಳಗಳಿವೆ
Follow us on

ರಾಮಾಯಣದಲ್ಲಿ ಲಂಕಾಸುರನು ಸೀತೆಯನ್ನು ಅಪಹರಿಸಿದ ಕಾರಣ ರಾವಣೇಶ್ವರನಿಗೆ ಯಾವುದೇ ರೀತಿಯ ಪೂಜೆ ಪುನಸ್ಕಾರಗಳನ್ನು ಮಾಡುವುದಿಲ್ಲ. ಆದರೆ ಇದರ ಹೊರತಾಗಿ ರಾವಣ ಮಹಾನ್ ಶಿವ ಭಕ್ತನಾಗಿದ್ದ ಎಂಬುದು ಕೂಡ ಸತ್ಯ. ಅಲ್ಲದೆ ರಾವಣನು ಕೆಲವು ಉತ್ತಮ ಗುಣಗಳನ್ನು ಹೊಂದಿದ್ದನು ಎನ್ನಲಾಗುತ್ತದೆ. ಆತ ವಿದ್ವಾಂಸನಾಗಿದ್ದು, ಶಿವ ತಾಂಡವ ಸ್ತೋತ್ರ ಸೇರಿದಂತೆ ಆರು ಶಾಸ್ತ್ರಗಳು ಮತ್ತು ನಾಲ್ಕು ವೇದಗಳಲ್ಲಿ ಪರಿಣತಿ ಹೊಂದಿದ್ದನು. ರಾವಣನನ್ನು ಸಾಮಾನ್ಯವಾಗಿ ತಿರಸ್ಕರಿಸಲಾಗಿದ್ದರೂ ಕೂಡ ಭಾರತದಲ್ಲಿ ರಾವಣನನ್ನು ಪೂಜಿಸುವ ಕೆಲವು ಸ್ಥಳಗಳಿವೆ. ಅವು ಯಾವುದು? ಎಲ್ಲಿವೆ ಗೊತ್ತಾ? ಇಲ್ಲಿದೆ ಮಾಹಿತಿ.

ರಾವಣನನ್ನು ಪೂಜಿಸುವ ಸ್ಥಳಗಳು ಎಲ್ಲಿವೆ ಗೊತ್ತಾ?

ಕರ್ನಾಟಕದ ಮಂಡ್ಯ ಮತ್ತು ಕೋಲಾರ:

ಕರ್ನಾಟಕದ ಮಂಡ್ಯದಲ್ಲಿ ಕೈಲಾಸಪುರ ಮಹಾಲಿಂಗೇಶ್ವರ ದೇವಾಲಯವಿದೆ. ಇದು ರಾವಣನಿಂದ ಸ್ಥಾಪಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಇಲ್ಲಿ ಲಂಕಾ ರಾಜನಾದ ರಾವಣನನ್ನು ಕೂಡ ಶಿವನ ಪಕ್ಕದಲ್ಲಿಯೇ ಪೂಜಿಸಲಾಗುತ್ತದೆ. ಕೋಲಾರದಲ್ಲಿ ರಾಮಲಿಂಗೇಶ್ವರ ದೇವಾಲಯವಿದೆ, ಅಲ್ಲಿ ರಾವಣನನ್ನು ರಾಮಪ್ಪ ಅಥವಾ ರಾಮಲಿಂಗ ಎಂದು ಪೂಜಿಸಲಾಗುತ್ತದೆ. ರಾವಣನು ಸ್ವತಃ ಈ ದೇವಾಲಯದಲ್ಲಿರುವ ಶಿವಲಿಂಗಗಳನ್ನು ತಂದನು ಎಂದು ನಂಬಲಾಗಿದೆ.

ಮಧ್ಯಪ್ರದೇಶದ ಮಂದಸೌರ್ ಮತ್ತು ರಾವಣಗ್ರಾಮ:

ಈ ನಗರವು ರಾವಣನ ರಾಣಿ ಮಂಡೋದರಿಯ ಜನ್ಮ ಸ್ಥಳ ಎಂದು ಹೇಳಲಾಗುತ್ತದೆ. ರಾವಣನು ಅವಳನ್ನು ಮದುವೆಯಾಗಲು ಮಂದಸೌರ್ ಗೆ ಬಂದು ಈ ಪ್ರದೇಶದ ಅಳಿಯನಾದನು ಎಂದು ನಂಬಲಾಗಿದೆ. ಹಾಗಾಗಿ ಈ ನಗರದಲ್ಲಿ ರಾವಣನಿಗೆ ಸಮರ್ಪಿತವಾದ, ರಾವಣೇಶ್ವರ ಮಹಾದೇವ್ ಅಥವಾ ರಾವಣ ರುಂಡಿ ಎಂಬ ದೇವಾಲಯವಿದೆ. ಇಲ್ಲಿ ಇಂದಿಗೂ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಜೊತೆಗೆ ಮಧ್ಯಪ್ರದೇಶದಲ್ಲಿರುವ ಒಂದು ಹಳ್ಳಿಗೆ, ರಾವಣಗ್ರಾಮ ಎಂದು ಲಂಕಾ ರಾಜನ ಹೆಸರನ್ನೇ ಇಡಲಾಗಿದೆ. ಇಲ್ಲಿ ಅವನಿಗಾಗಿ ದೇವಾಲಯವನ್ನು ಕಟ್ಟಿಸಿದ್ದು ಹತ್ತು ಅಡಿ ಉದ್ದದ ವಿಗ್ರಹವನ್ನು ಇಡಲಾಗಿದೆ. ಆ ಮೂಲಕ ಇಲ್ಲಿ ರಾವಣನ್ನು ಭಕ್ತಿಯಿಂದ ಪೂಜೆ ಮಾಡುತ್ತಾರೆ.

ಉತ್ತರ ಪ್ರದೇಶದ ಕಾನ್ಪುರ್ ಮತ್ತು ಬಿಸರಖ್‌:

ಕಾನ್ಪುರದಲ್ಲಿ ರಾವಣನಿಗೆ ಸಮರ್ಪಿತವಾದ ದೇವಾಲಯವಿದೆ, ಇದು 100 ವರ್ಷಗಳಿಗಿಂತಲೂ ಹಳೆಯದು ಎನ್ನಲಾಗುತ್ತದೆ. ದಸರಾ ಸಂದರ್ಭದಲ್ಲಿ ಭಕ್ತರು ಲಂಕಾ ರಾಜನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ವರ್ಷದಲ್ಲಿ ಒಮ್ಮೆ ಮಾತ್ರ ಈ ಮಂದಿರವನ್ನು ತೆರೆಯಲಾಗುತ್ತದೆ. ಇದನ್ನು 1890 ರಲ್ಲಿ ರಾಜ ಗುರು ಪ್ರಸಾದ್ ಶುಕ್ಲ್ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಜೊತೆಗೆ ಉತ್ತರ ಪ್ರದೇಶದ ಬಿಸರಖ್‌ ಎಂಬ ನಗರವನ್ನು ಋಷಿ ವಿಶ್ರವನ ಮಗನಾದ ರಾವಣೇಶ್ವರನ ಜನ್ಮ ಸ್ಥಳವೆಂದು ಹೇಳಲಾಗುತ್ತದೆ. ಬಿಸರಖ್‌ ಎಂಬುದು ರಾವಣೇಶ್ವರನ ತಂದೆ ವಿಶ್ರವಾನ ಇನ್ನೊಂದು ಹೆಸರಾಗಿದೆ. ರಾವಣನ ತಂದೆಯ ಹೆಸರನ್ನು ಈ ಊರಿಗೆ ಇಡಲಾಗಿದೆ. ಹಾಗಾಗಿ ಇಲ್ಲಿ ರಾವಣನನ್ನು ಬಹಳ ಭಕ್ತಿಯಿಂದ ಪೂಜಿಸಲಾಗುತ್ತದೆ. ಅವನಿಗೆ ದೇವಾಲಯವನ್ನು ಕಟ್ಟಿಸಿದ್ದಾರೆ. ಇದು ದಸರಾ ಸಂದರ್ಭದಲ್ಲಿ ತೆರೆಯುತ್ತದೆ. ಜೊತೆಗೆ ಇಲ್ಲಿನ ಜನ ನವರಾತ್ರಿಯನ್ನು ಶೋಕಾಚರಣೆಯ ಅವಧಿಯಾಗಿ ಆಚರಿಸುತ್ತಾರೆ.

ರಾಜಸ್ಥಾನದ ಜೋಧಪುರ:

ಜೋಧಪುರದಲ್ಲಿ ರಾವಣನನ್ನು ಪ್ರತಿದಿನ ಪೂಜಿಸುವ ಕೆಲವು ಸ್ಥಳಗಳಿವೆ. ಸ್ಥಳೀಯ ದಂತ ಕಥೆಗಳ ಪ್ರಕಾರ, ಮಂಡೋದರಿ ರಾಜ ಮಂದಾವರನ ಮಗಳು, ಅವನ ರಾಜ್ಯವನ್ನು ಮಂಡೋರ್ ಎಂದು ಕರೆಯಲಾಗುತ್ತಿತ್ತು. ಆದ್ದರಿಂದ, ಜೋಧಪುರದ ಕೆಲವು ಪ್ರದೇಶಗಳಲ್ಲಿನ ಜನರು ರಾವಣನನ್ನು ಅಳಿಯ ಎಂದು ಗೌರವಿಸುತ್ತಾರೆ. ಪ್ರತಿ ವರ್ಷ ದಸರಾದಂದು, ಅವನ ಸಾವಿಗೆ ಶೋಕ ವ್ಯಕ್ತಪಡಿಸಲಾಗುತ್ತದೆ. ಜೊತೆಗೆ ಇಲ್ಲಿನ ಜನರು ಪ್ರಾರ್ಥನೆ ಸಲ್ಲಿಸಿ ಸಿಹಿ ತಿಂಡಿಗಳನ್ನು ಅರ್ಪಿಸುತ್ತಾರೆ.

ಇದನ್ನೂ ಓದಿ: ಪ್ರದಕ್ಷಿಣೆ ಹಾಕುವಾಗ ಈ ವಿಷಯ ನೆನಪಿನಲ್ಲಿದ್ದರೆ ಜೀವನದಲ್ಲಿ ಯಾವುದೇ ಅಪಾಯ ಬರುವುದಿಲ್ಲ

ಹಿಮಾಚಲ ಪ್ರದೇಶದ ಕಾಂಗ್ರಾ:

ಈ ನಗರದಲ್ಲಿ ರಾವಣನು ಶಿವನಿಗಾಗಿ ತೀವ್ರವಾದ ತಪಸ್ಸು ಮಾಡಿ, ವರಗಳನ್ನು ಪಡೆದನು ಎಂಬ ನಂಬಿಕೆ ಇದೆ. ಹಾಗಾಗಿ ಈ ಪ್ರದೇಶದ ಜನರು ರಾವಣನನ್ನು ಶಿವನ ಶ್ರೇಷ್ಠ ಭಕ್ತ ಎಂದು ಪರಿಗಣಿಸಿ ಅವನಿಗೆ ಗೌರವ ನೀಡುತ್ತಾ ಬಂದಿದ್ದು ಇಲ್ಲಿ ಅವನನ್ನು ದೇವರಂತೆ ಪೂಜಿಸುತ್ತಾರೆ.

ಆಂಧ್ರಪ್ರದೇಶದ ಕಾಕಿನಾಡ:

ಈ ನಗರವು ಭಾರತದ ಅತ್ಯಂತ ಪ್ರಸಿದ್ಧ ರಾವಣ ದೇವಾಲಯಗಳಲ್ಲಿ ಒಂದಾಗಿದೆ. ಇದು ಇಡೀ ರಾಜ್ಯದಲ್ಲಿ ರಾವಣನನ್ನು ಪೂಜಿಸುವ ಏಕೈಕ ಸ್ಥಳವಾಗಿದೆ ಮತ್ತು ಲಂಕಾ ರಾಜನು ದೇವಾಲಯದ ನಿರ್ಮಾಣಕ್ಕಾಗಿ ಈ ಸ್ಥಳವನ್ನು ಆಯ್ಕೆ ಮಾಡಿದ್ದನು ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:50 pm, Fri, 22 March 24