ಪುರಾತನವಾದ ರಾಷ್ಟ್ರ ಭಾರತವೇ ಅಂತಲ್ಲ, ಜಗತ್ತಿನ ಯಾವುದೇ ಮೂಲೆಗೆ ಹೋದರೂ ಸಂಖ್ಯಾಶಾಸ್ತ್ರಕ್ಕೆ ಮಣೆ ಹಾಕಿರುವುದು ದಿಟ. ಅದು ಖಗೋಳಶಾಸ್ತ್ರದಲ್ಲಿ ಬರುವ ಸಂಖ್ಯಾಶಾಸ್ತ್ರವಷ್ಟೇ ಅಲ್ಲ, ಅದರಾಚೆಗೆ ನಂಬಿಕೆಗಳ ಆಧಾರದಲ್ಲಿಯೂ ಸಂಖ್ಯೆಗಳು ಜನಜೀವನದಲ್ಲಿ ಹಾಸುಹೊಕ್ಕಿವೆ. ಅದರಲ್ಲಿಯೂ ಮುಖ್ಯವಾಗಿ ಏಳು ಸಂಖ್ಯೆಯ ಕೋಟೆ ( number seven) ದೈನಂದಿನ ಜನಜೀವನದಲ್ಲಿ ಕಣ್ಣಿಗೆ ಕಟ್ಟಿದಂತೆ ತನ್ನ ಪಾತ್ರ ನಿಭಾಯಸುತ್ತದೆ. ಬನ್ನೀ ಸಪ್ತ ಸಂಖ್ಯೆಗಳ (numerology) ವೈಶಿಷ್ಟ್ಯದ ಸುತ್ತ ಒಂದು ಸುತ್ತು ಹಾಕೋಣ!
ಸಪ್ತ ವಾರಗಳು – ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ
ಸಪ್ತ ನದಿಗಳು – ಗಂಗಾ, ಯಮುನಾ, ಗೋದಾವರಿ, ನರ್ಮದಾ, ಸಿಂಧು, ಸರಸ್ವತಿ ಮತ್ತು ಕಾವೇರಿ
ಸಪ್ತ ಲೋಕಗಳು – ಭೂಲೋಕ, ಭುವಹ ಲೋಕ, ಸುವಹ ಲೋಕ, ಮಹಹ ಲೋಕ, ಜನಹ ಲೋಕ, ತಪಹ ಲೋಕ ಮತ್ತು ಸತ್ಯ ಲೋಕ
ಸಪ್ತ ಸಾಗರಗಳು – ಲವಣ, ಇಕ್ಷು, ಸುರಾ (ಮದ್ಯ), ಸರ್ಪಿಸ್ (ತುಪ್ಪ), ದಧಿ, ಜಲ ಮತ್ತು ಕಡಲು
ಸಪ್ತ ಋಷಿಗಳು – ಮರೀಚಿ, ಭೃಗು, ಅಂಗೀರಸ, ಕ್ರತು, ಪುಲಷ್ಯ, ಪುಲಾಹ ಮತ್ತು ವಶಿಷ್ಟ
ಸಪ್ತ ಪರ್ವತಗಳು – ಸಾಲ್ಯವಂತ, ಗಂಧಮಾದನ, ಕೈಲಾಸ, ನಿಷಾದ, ಮಂಧಾರಗಿರಿ, ನೀಲಗಿರಿ ಮತ್ತು ಹೇಮಂತ
ಸಪ್ತ ಧಾತುಗಳು – ಮೂಳೆ, ಮಚ್ಚೆ, ಮಾಂಸ, ನರ, ಚರ್ಮ, ರೋಮ ಮತ್ತು ಉಗುರು
ಸಪ್ತ ದ್ವೀಪಗಳು – ಜಂಬು, ಪ್ಲಕ್ಷ, ಕುಷ, ಕೌಂಚ, ಸಾಖ್ಯ, ಪುಷ್ಕರ ಮತ್ತು ಶಾಲ್ಮಲಿ
ಸಪ್ತ ಸ್ವರಗಳು – ಸ ಸಡ್ಜ: ಆಡಿನ ದನಿ, ರೀ: ರಿಷಬ ಸ್ವರ, ಗ: ಗಾಂಧಾರ-ಕಪ್ಪೆ ಸ್ವರ, ಮ: ಮಧ್ಯಮ-ಕುಪ್ಪಲನ ಸ್ವರ, ಪ: ಪಂಚಮ-ಕೋಗಿಲೆ ಸ್ವರ, ಧ: ಕುದುರೆ ಸ್ವರ, ನೀ-ನಿಷಾದ, ಆನೆ ದನಿ
ಸಪ್ತ ನರಕಗಳು – ರೌರವ, ಮಹಾ ರೌರವ, ವಹ್ನಿ, ವೈತರನಿ, ಕುಂಬಿಪಾಕ, ತಮಿಶ್ರ ಮತ್ತು ಅಂಧತ ಮಿಶ್ರ
ಸಪ್ತ ಲೋಹಗಳು – ಚಿನ್ನ, ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆ, ಅಲ್ಯೂಮಿನಿಯಂ ಮತ್ತು ಕಬ್ಬಿಣ
ಸಪ್ತಾಂಗ – ಸಭಾ ಭಟ, ಭಟ್ಟ, ಗಾಯಕ, ನರ್ತಕ, ಪರಿಹಾಸಕ, ವಿದ್ವಾಂಸಕ ಮತ್ತು ಇತಿಹಾಸಕ
ಸಪ್ತ ಜ್ಞಾನಿಗಳು – ಅತ್ರಿ, ವಿಶ್ವಾಮಿತ್ರ, ಅಂಗೀರಸ, ಭೃಗು, ದುರ್ವಾಸ ಮತ್ತು ವಶಿಷ್ಟ ಋಷಿಗಳು
ಚಿರಂಜೀವಿಗಳು – ಅಶ್ವತ್ಥಾಮ, ಬಲಿ ಚಕ್ರವರ್ತಿ, ವ್ಯಾಸ ಮಹರ್ಷಿ, ಹನುಮಂತ, ವಿಭೀಷಣ, ಕೃಪಾಚಾರ್ಯ ಮತ್ತು ಪರುಶರಾಮ
ಸಪ್ತ ಸಾಗರಗಳು – ಅಟ್ಲಾಂಟಿಕ್, ಪೆಸಿಫಿಕ್, ಪಶ್ಚಿಮ ಸಮುದ್ರ, ಹಿಂದು ಮಹಾಸಾಗರ, ದಕ್ಷಿಣ ಸಮುದ್ರ, ಆರ್ಟಿಕ್ ಮಹಾಸಾಗರ
ಸಪ್ತ ಪದಿ…
ಮೊದಲ ಹೆಜ್ಜೆ: ಬಲ ಮತ್ತು ವೀರ್ಯ ವೃದ್ದಿಗಾಗಿ
ಎರಡನೆ ಹೆಜ್ಜೆ: ಧನ ಧಾನ್ಯ ವೃದ್ಧಿಗಾಗಿ
ಮೂರನೆ ಹೆಜ್ಜೆ: ಭವ್ಯ ಸುಖ ಪ್ರಾಪ್ತಿಗಾಗಿ
ನಾಲ್ಕನೆ ಹೆಜ್ಜೆ: ಸಂತತಿಯ ಸೊಗಸಿಗಾಗಿ
ಐದನೆ ಹೆಜ್ಜೆ: ಅನುಕೂಲ ನುಡಿಗಾಗಿ
ಆರನೆ ಹೆಜ್ಜೆ: ಅನುಕೂಲ ಸಖ್ಯಕ್ಕೆ
ಏಳನೆ ಹೆಜ್ಜೆ: ಅನ್ನ ಮಯ ದೇವ ಪೂಜೆಗೆ
ಇದನ್ನೂ ಓದಿ:
Rahul Gandhi: ರಾಹುಲ್ ಗಾಂಧಿ ಗೊಂದಲದಲ್ಲಿರುವ, ತಲೆಯಿಲ್ಲದ ನಾಯಕ ಎಂದು ಜರಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Published On - 1:15 pm, Thu, 3 February 22