Worshipping hindu gods based on different days of the week
Worshipping hindu gods based on different days of the week
ಮಂಗಳವಾರ: ಈ ದಿನವನ್ನು ಭಗವಾನ್ ಹನುಮಂತನಿಗೆ(Lord Hanuman) ಸಮರ್ಪಿಸಲಾಗಿದೆ. ಹಿಂದೂ ಪುರಾಣಗಳಲ್ಲಿ ಹನುಮಂತನನ್ನು ಶಿವನ ಅವತಾರವೆಂದು ಪರಿಗಣಿಸಲಾಗಿದೆ. ಭಗವಾನ್ ಹನುಮಂತನು ತನ್ನ ಜೀವನದ ಅಡೆತಡೆಗಳನ್ನು ಮತ್ತು ಭಯವನ್ನು ನಿವಾರಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ. ಈ ದಿನದಂದು ಭಕ್ತರು ಹನುಮಂತನನ್ನು ಪೂಜಿಸುತ್ತಾರೆ ಮತ್ತು ಉಪವಾಸಗಳನ್ನು ಇಡುತ್ತಾರೆ. ಸೂರ್ಯನಿಗೆ ಮೊದಲು ಅರ್ಘ್ಯವನ್ನು ಅರ್ಪಿಸಿ ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಈ ವೇಳೆ ಹನುಮಂತನ ಮುಂದೆ ದೀಪವನ್ನು ಹಚ್ಚಿ ಕೆಂಪು ಅಥವಾ ಕೇಸರಿ ಬಣ್ಣದ ಹೂಗಳನ್ನು ಅರ್ಪಿಸಬೇಕು.
ಬುಧವಾರ: ಈ ದಿನ ವಿಘ್ನನಿವಾರಕ, ಸಂಕಷ್ಟ ಹರ ಗಣೇಶನಿಗೆ(Lord Ganesha) ಸಮರ್ಪಿಸಲಾಗಿದೆ. ಗಣೇಶ ತನ್ನ ಭಕ್ತರ ಜೀವನದಿಂದ ನಕಾರಾತ್ಮಕತೆ ಮತ್ತು ಅಡೆತಡೆಗಳನ್ನು ತೊಡೆದುಹಾಕುತ್ತಾನೆ. ಹಿಂದೂಗಳು ಸಾಮಾನ್ಯವಾಗಿ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸುತ್ತಾರೆ. ಗಣೇಶನನ್ನು ಪೂಜಿಸುವ ಜೊತೆಗೆ, ಜನರು ಶ್ರೀಕೃಷ್ಣನ ಅವತಾರವೆಂದು ನಂಬಲಾದ ವಿಠ್ಠಲನನ್ನು ಸಹ ಪೂಜಿಸುತ್ತಾರೆ. ಈ ದಿನ ಗಣೇಶನ ಮಂತ್ರಗಳನ್ನು ಪಠಿಸಿ ಬಾಳೆಹಣ್ಣು, ಮೋದಕ, ಗರಿಕೆ ಅರ್ಪಿಸುವುದರಿಂದ ಗಣೇಶನ ಕೃಪೆಗೆ ಪಾತ್ರರಾಗುವಿರಿ.
ಗುರುವಾರ: ಈ ದಿನವನ್ನು ಭಗವಾನ್ ವಿಷ್ಣು(Lord Vishnu) ಮತ್ತು ಗುರು ಬೃಹಸ್ಪತಿಗೆ ಸಮರ್ಪಿಸಲಾಗಿದೆ. ಜನರು ಸಾಯಿ ಬಾಬಾ, ಗುರು ರಾಘವೇಂದ್ರ ಸ್ವಾಮಿಯನ್ನು ಪೂಜಿಸುತ್ತಾರೆ ಈ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ವೈವಾಹಿಕ ಜೀವನದಲ್ಲಿ ನೆಮ್ಮದಿ, ಸಂತೋಷ ಇರುತ್ತದೆ. ಮತ್ತು ಕುಟುಂಬದಲ್ಲಿನ ಕಲಹಗಳು ದೂರ ಆಗುತ್ತವೆ ಎಂದು ನಂಬಲಾಗಿದೆ.
ಶುಕ್ರವಾರ: ಶುಕ್ರ ಗ್ರಹಕ್ಕೆ ಅರ್ಪಿಸಲಾದ ಈ ದಿನವನ್ನು ಲಕ್ಷ್ಮಿ ದೇವಿ(Godess Lakshmi), ದುರ್ಗಾ ಮತ್ತು ಅನ್ನಪೂರ್ಣೇಶ್ವರಿ ದೇವಿಗೆ ಸಮರ್ಪಿತವಾಗಿದೆ. ಈ ಮೂರು ದೇವತೆಗಳು ಹಿಂದೂ ಪುರಾಣಗಳಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ಈ ದಿನದಂದು ಉಪವಾಸವನ್ನು ಆಚರಿಸುವುದು ಮತ್ತು ಮೂರು ದೇವತೆಗಳನ್ನು ಪೂಜಿಸುವುದರಿಂದ ತಮ್ಮ ಜೀವನದಲ್ಲಿ ಸಮೃದ್ಧಿ, ಸಂಪತ್ತು, ಸಕಾರಾತ್ಮಕತೆ ಮತ್ತು ನೆಮ್ಮದಿಯನ್ನು ತರಬಹುದು ಎಂದು ಭಕ್ತರು ನಂಬುತ್ತಾರೆ.
ಶನಿವಾರ: ಈ ದಿನ ಭಗವಾನ್ ಶನಿ ದೇವ(Lord Shani)ನನ್ನು ಪೂಜಿಸುವ ದಿನ. ಇದನ್ನು ಶನಿ ಸ್ವಾಮಿಗೆ ಸಮರ್ಪಿಸಲಾಗಿದೆ. ಶನಿ ಭಗವಂತ ಕಾರ್ಯಗಳಿಗೆ ಅನುಗುಣವಾಗಿ ಪ್ರತಿಫಲ ಅಥವಾ ಶಿಕ್ಷೆ ನೀಡುತ್ತಾನೆ. ಈ ದಿನವನ್ನು ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ನಂಬಿಕೆ ಇರುವ ಜನರು ಆಚರಿಸುತ್ತಾರೆ. ಈ ದಿನದಂದು ಶನಿ ದೇವರನ್ನು ಪೂಜಿಸುವುದರಿಂದ ಶನಿ ದೇವರಿಂದ ಸಂತೋಷ, ಸಂಪತ್ತು ಮತ್ತು ಶಾಂತಿ ರೂಪದಲ್ಲಿ ಅದೃಷ್ಟ ಮತ್ತು ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
Published On - 7:15 am, Fri, 4 February 22