AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಳು ಸಂಖ್ಯೆಯ ಕೋಟೆ! ಸಪ್ತ ಸಂಖ್ಯೆಗಳ ವಿಶೇಷತೆಯ ಸುತ್ತ ಒಂದು ಸುತ್ತು!

number seven: ಪುರಾತನವಾದ ರಾಷ್ಟ್ರ ಭಾರತವೇ ಅಂತಲ್ಲ, ಜಗತ್ತಿನ ಯಾವುದೇ ಮೂಲೆಗೆ ಹೋದರೂ ಸಂಖ್ಯಾಶಾಸ್ತ್ರಕ್ಕೆ ಮಣೆ ಹಾಕಿರುವುದು ದಿಟ. ಅದು ಖಗೋಳಶಾಸ್ತ್ರದಲ್ಲಿ ಬರುವ ಸಂಖ್ಯಾಶಾಸ್ತ್ರವಷ್ಟೇ ಅಲ್ಲ, ಅದರಾಚೆಗೆ ನಂಬಿಕೆಗಳ ಆಧಾರದಲ್ಲಿಯೂ ಸಂಖ್ಯೆಗಳು ಜನಜೀವನದಲ್ಲಿ ಹಾಸುಹೊಕ್ಕಿವೆ. ಅದರಲ್ಲಿಯೂ ಮುಖ್ಯವಾಗಿ ಏಳು ಸಂಖ್ಯೆಯ ಕೋಟೆ ದೈನಂದಿನ ಜನಜೀವನದಲ್ಲಿ ಕಣ್ಣಿಗೆ ಕಟ್ಟಿದಂತೆ ತನ್ನ ಪಾತ್ರ ನಿಭಾಯಸುತ್ತದೆ.

ಏಳು ಸಂಖ್ಯೆಯ ಕೋಟೆ! ಸಪ್ತ ಸಂಖ್ಯೆಗಳ ವಿಶೇಷತೆಯ ಸುತ್ತ ಒಂದು ಸುತ್ತು!
ಏಳು ಸಂಖ್ಯೆಯ ಕೋಟೆ! ಸಪ್ತ ಸಂಖ್ಯೆಗಳ ವೈಶಿಷ್ಟ್ಯದ ಸುತ್ತ ಒಂದು ಸುತ್ತು!
TV9 Web
| Edited By: |

Updated on:Feb 03, 2022 | 1:19 PM

Share

ಪುರಾತನವಾದ ರಾಷ್ಟ್ರ ಭಾರತವೇ ಅಂತಲ್ಲ, ಜಗತ್ತಿನ ಯಾವುದೇ ಮೂಲೆಗೆ ಹೋದರೂ ಸಂಖ್ಯಾಶಾಸ್ತ್ರಕ್ಕೆ ಮಣೆ ಹಾಕಿರುವುದು ದಿಟ. ಅದು ಖಗೋಳಶಾಸ್ತ್ರದಲ್ಲಿ ಬರುವ ಸಂಖ್ಯಾಶಾಸ್ತ್ರವಷ್ಟೇ ಅಲ್ಲ, ಅದರಾಚೆಗೆ ನಂಬಿಕೆಗಳ ಆಧಾರದಲ್ಲಿಯೂ ಸಂಖ್ಯೆಗಳು ಜನಜೀವನದಲ್ಲಿ ಹಾಸುಹೊಕ್ಕಿವೆ. ಅದರಲ್ಲಿಯೂ ಮುಖ್ಯವಾಗಿ ಏಳು ಸಂಖ್ಯೆಯ ಕೋಟೆ ( number seven) ದೈನಂದಿನ ಜನಜೀವನದಲ್ಲಿ ಕಣ್ಣಿಗೆ ಕಟ್ಟಿದಂತೆ ತನ್ನ ಪಾತ್ರ ನಿಭಾಯಸುತ್ತದೆ. ಬನ್ನೀ ಸಪ್ತ ಸಂಖ್ಯೆಗಳ (numerology) ವೈಶಿಷ್ಟ್ಯದ ಸುತ್ತ ಒಂದು ಸುತ್ತು ಹಾಕೋಣ!

ಸಪ್ತ ವಾರಗಳು – ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ

ಸಪ್ತ ನದಿಗಳು – ಗಂಗಾ, ಯಮುನಾ, ಗೋದಾವರಿ, ನರ್ಮದಾ, ಸಿಂಧು, ಸರಸ್ವತಿ ಮತ್ತು ಕಾವೇರಿ

ಸಪ್ತ ಲೋಕಗಳು – ಭೂಲೋಕ, ಭುವಹ ಲೋಕ, ಸುವಹ ಲೋಕ, ಮಹಹ ಲೋಕ, ಜನಹ ಲೋಕ, ತಪಹ ಲೋಕ ಮತ್ತು ಸತ್ಯ ಲೋಕ

ಸಪ್ತ ಸಾಗರಗಳು – ಲವಣ, ಇಕ್ಷು, ಸುರಾ (ಮದ್ಯ), ಸರ್ಪಿಸ್ (ತುಪ್ಪ), ದಧಿ, ಜಲ ಮತ್ತು ಕಡಲು

ಸಪ್ತ ಋಷಿಗಳು – ಮರೀಚಿ, ಭೃಗು, ಅಂಗೀರಸ, ಕ್ರತು, ಪುಲಷ್ಯ, ಪುಲಾಹ ಮತ್ತು ವಶಿಷ್ಟ

ಸಪ್ತ ಪರ್ವತಗಳು – ಸಾಲ್ಯವಂತ, ಗಂಧಮಾದನ, ಕೈಲಾಸ, ನಿಷಾದ, ಮಂಧಾರಗಿರಿ, ನೀಲಗಿರಿ ಮತ್ತು ಹೇಮಂತ

ಸಪ್ತ ಧಾತುಗಳು – ಮೂಳೆ, ಮಚ್ಚೆ, ಮಾಂಸ, ನರ, ಚರ್ಮ, ರೋಮ ಮತ್ತು ಉಗುರು

ಸಪ್ತ ದ್ವೀಪಗಳು – ಜಂಬು, ಪ್ಲಕ್ಷ, ಕುಷ, ಕೌಂಚ, ಸಾಖ್ಯ, ಪುಷ್ಕರ ಮತ್ತು ಶಾಲ್ಮಲಿ

ಸಪ್ತ ಸ್ವರಗಳು – ಸ ಸಡ್ಜ: ಆಡಿನ ದನಿ, ರೀ: ರಿಷಬ ಸ್ವರ, ಗ: ಗಾಂಧಾರ-ಕಪ್ಪೆ ಸ್ವರ, ಮ: ಮಧ್ಯಮ-ಕುಪ್ಪಲನ ಸ್ವರ, ಪ: ಪಂಚಮ-ಕೋಗಿಲೆ ಸ್ವರ, ಧ: ಕುದುರೆ ಸ್ವರ, ನೀ-ನಿಷಾದ, ಆನೆ ದನಿ

ಸಪ್ತ ನರಕಗಳು – ರೌರವ, ಮಹಾ ರೌರವ, ವಹ್ನಿ, ವೈತರನಿ, ಕುಂಬಿಪಾಕ, ತಮಿಶ್ರ ಮತ್ತು ಅಂಧತ ಮಿಶ್ರ

ಸಪ್ತ ಲೋಹಗಳು – ಚಿನ್ನ, ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆ, ಅಲ್ಯೂಮಿನಿಯಂ ಮತ್ತು ಕಬ್ಬಿಣ

ಸಪ್ತಾಂಗ – ಸಭಾ ಭಟ, ಭಟ್ಟ, ಗಾಯಕ, ನರ್ತಕ, ಪರಿಹಾಸಕ, ವಿದ್ವಾಂಸಕ ಮತ್ತು ಇತಿಹಾಸಕ

ಸಪ್ತ ಜ್ಞಾನಿಗಳು – ಅತ್ರಿ, ವಿಶ್ವಾಮಿತ್ರ, ಅಂಗೀರಸ, ಭೃಗು, ದುರ್ವಾಸ ಮತ್ತು ವಶಿಷ್ಟ ಋಷಿಗಳು

ಚಿರಂಜೀವಿಗಳು – ಅಶ್ವತ್ಥಾಮ, ಬಲಿ ಚಕ್ರವರ್ತಿ, ವ್ಯಾಸ ಮಹರ್ಷಿ, ಹನುಮಂತ, ವಿಭೀಷಣ, ಕೃಪಾಚಾರ್ಯ ಮತ್ತು ಪರುಶರಾಮ

ಸಪ್ತ ಸಾಗರಗಳು – ಅಟ್ಲಾಂಟಿಕ್, ಪೆಸಿಫಿಕ್, ಪಶ್ಚಿಮ ಸಮುದ್ರ, ಹಿಂದು ಮಹಾಸಾಗರ, ದಕ್ಷಿಣ ಸಮುದ್ರ, ಆರ್ಟಿಕ್ ಮಹಾಸಾಗರ

ಸಪ್ತ ಪದಿ…

ಮೊದಲ ಹೆಜ್ಜೆ: ಬಲ ಮತ್ತು ವೀರ್ಯ ವೃದ್ದಿಗಾಗಿ ಎರಡನೆ ಹೆಜ್ಜೆ: ಧನ ಧಾನ್ಯ ವೃದ್ಧಿಗಾಗಿ ಮೂರನೆ ಹೆಜ್ಜೆ: ಭವ್ಯ ಸುಖ ಪ್ರಾಪ್ತಿಗಾಗಿ ನಾಲ್ಕನೆ ಹೆಜ್ಜೆ: ಸಂತತಿಯ ಸೊಗಸಿಗಾಗಿ ಐದನೆ ಹೆಜ್ಜೆ: ಅನುಕೂಲ ನುಡಿಗಾಗಿ ಆರನೆ ಹೆಜ್ಜೆ: ಅನುಕೂಲ ಸಖ್ಯಕ್ಕೆ ಏಳನೆ ಹೆಜ್ಜೆ: ಅನ್ನ ಮಯ ದೇವ ಪೂಜೆಗೆ

ಇದನ್ನೂ ಓದಿ: Rahul Gandhi: ರಾಹುಲ್​ ಗಾಂಧಿ ಗೊಂದಲದಲ್ಲಿರುವ, ತಲೆಯಿಲ್ಲದ ನಾಯಕ ಎಂದು ಜರಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

Published On - 1:15 pm, Thu, 3 February 22

ಹೊಸ ರೂಪದ ಮೈಸೂರು ಸ್ಯಾಂಡಲ್ ಸೋಪ್ ಬಿಡುಗಡೆ ಮಾಡಿದ ತಮನ್ನಾ ಭಾಟಿಯಾ
ಹೊಸ ರೂಪದ ಮೈಸೂರು ಸ್ಯಾಂಡಲ್ ಸೋಪ್ ಬಿಡುಗಡೆ ಮಾಡಿದ ತಮನ್ನಾ ಭಾಟಿಯಾ
200 ಸಿನಿಮಾಗಳಿಗೆ ಸಬ್ಸಿಡಿ ಕೊಡಿ: ಸರ್ಕಾರಕ್ಕೆ ನಿರ್ಮಾಪಕ ಕೆ. ಮಂಜು ಮನವಿ
200 ಸಿನಿಮಾಗಳಿಗೆ ಸಬ್ಸಿಡಿ ಕೊಡಿ: ಸರ್ಕಾರಕ್ಕೆ ನಿರ್ಮಾಪಕ ಕೆ. ಮಂಜು ಮನವಿ
ಮೈಸೂರು ಸ್ಯಾಂಡಲ್ ಸೋಪ್​​ಗೆ ತಮನ್ನಾ ರಾಯಭಾರಿ; ಕನ್ನಡದಲ್ಲಿ ಮಾತು
ಮೈಸೂರು ಸ್ಯಾಂಡಲ್ ಸೋಪ್​​ಗೆ ತಮನ್ನಾ ರಾಯಭಾರಿ; ಕನ್ನಡದಲ್ಲಿ ಮಾತು
ಬಗೆದಷ್ಟು ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ರಹಸ್ಯ ಬಯಲು
ಬಗೆದಷ್ಟು ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ರಹಸ್ಯ ಬಯಲು
ಚಿತ್ರರಂಗದ 93ನೇ ವರ್ಷದ ಸಂಭ್ರಮಾಚರಣೆ ಬೇಡ: ಪ್ರಿಯಾ ಹಾಸನ್
ಚಿತ್ರರಂಗದ 93ನೇ ವರ್ಷದ ಸಂಭ್ರಮಾಚರಣೆ ಬೇಡ: ಪ್ರಿಯಾ ಹಾಸನ್
ಪರಿಹಾರ ಕೊಡದಿದ್ದಕ್ಕೆ ಸೇಡಿಗಾಗಿ ವಿಧಾನಸೌಧ ಬಳಿಯ ಗಂಧದ ಮರ ಕಡಿದು ರೈತ
ಪರಿಹಾರ ಕೊಡದಿದ್ದಕ್ಕೆ ಸೇಡಿಗಾಗಿ ವಿಧಾನಸೌಧ ಬಳಿಯ ಗಂಧದ ಮರ ಕಡಿದು ರೈತ
ಕಮಲಾಕರ ಭಟ್​​​ನ ತನ್ನ ತಾಳಕ್ಕೆ ಕುಣಿಸುತ್ತಿರುವ ಸುಚಿತ್ರಾಳ ವಿಡಿಯೋ
ಕಮಲಾಕರ ಭಟ್​​​ನ ತನ್ನ ತಾಳಕ್ಕೆ ಕುಣಿಸುತ್ತಿರುವ ಸುಚಿತ್ರಾಳ ವಿಡಿಯೋ
ಸಿನಿಮಾ ಸಬ್ಸಿಡಿ ಹೆಚ್ಚು ಮಾಡಿ: ನಿರ್ಮಾಪಕ ಕೆ ಮಂಜು
ಸಿನಿಮಾ ಸಬ್ಸಿಡಿ ಹೆಚ್ಚು ಮಾಡಿ: ನಿರ್ಮಾಪಕ ಕೆ ಮಂಜು
ಹಿಂದೂ ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಸೈಯದ್: ಬೆಂಗಳೂರಿನಲ್ಲಿ ಲವ್ ಜಿಹಾದ್
ಹಿಂದೂ ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಸೈಯದ್: ಬೆಂಗಳೂರಿನಲ್ಲಿ ಲವ್ ಜಿಹಾದ್
ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ
ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ