ಭಾರತೀಯ ಪರಂಪರೆಯಲಿ ಹೋಮ, ಹವನ(Homa Havana) ಅಥವಾ ಯಾಗಗಳಿಗೆ(Yagya )ವಿಶೇಷ ಮಹತ್ವವಿದೆ. ಮತ್ತೊಂದು ಕಡೆ ಧಾರ್ಮಿಕ ಪ್ರಾಮುಖ್ಯತೆಯ ಹೊರತಾಗಿ, ಇದರ ಹಿಂದೆ ಅನೇಕ ವೈಜ್ಞಾನಿಕ ಅನುಕೂಲಗಳು ಸಹ ಇವೆ. ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ ಹಾಗೂ ಆಹಾರದ ಅಭ್ಯಾಸಗಳಿಂದ ದೈಹಿಕ, ಮಾನಸಿಕ ಮತ್ತು ಆರ್ಥಿಕ ಇಕ್ಕಟ್ಟಿನಲ್ಲಿ ಜನ ಸಿಲುಕಿಕೊಳ್ಳುತ್ತಿದ್ದಾರೆ. ಮನಃಶಾಂತಿ ಪಡೆಯಲು ಅಲೆದಾಡುತ್ತಿದ್ದಾರೆ. ಆರೋಗ್ಯಕರ ಆಹಾರ ಪದ್ಧತಿ, ಯೋಗ, ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಜೀವನಶೈಲಿಯಂತಹ ಅನೇಕ ವಿಷಯಗಳು ಆರೋಗ್ಯಕರ ಜೀವನಕ್ಕೆ ತುಂಬಾ ಸಹಾಯಕವಾಗಬಹುದು. ಅದರಂತೆಯೇ ಯಾಗವನ್ನು ಮಾಡುವುದರಿಂದಲೂ ಆರೋಗ್ಯದಲ್ಲಿ ಅನೇಕ ಪ್ರಯೋಜನಗಳಿವೆ. ಯಾಗದ ಸಮಯದಲ್ಲಿ ಮಂತ್ರಗಳ ಪಠಣವು ಕಂಪನವನ್ನು ಉಂಟುಮಾಡುತ್ತದೆ. ಇದು ನಮ್ಮ ದೇಹದಲ್ಲಿರುವ ಚಕ್ರಗಳನ್ನು ಶುದ್ಧೀಕರಿಸುವ ಧನಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.
ಮಾನಸಿಕ ಆರೋಗ್ಯ
ಜನರ ಅನಾರೋಗ್ಯಕರ ಜೀವನಶೈಲಿಯಿಂದ ಮಾನಸಿಕ ಸಮಸ್ಯೆಗಳು ಎದುರಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡ ಸಾಮಾನ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಯಾಗವು ನಿಮಗೆ ಮಾನಸಿಕ ಶಾಂತಿಯನ್ನು ಒದಗಿಸಲು ಸಹಾಯಕವಾಗಿದೆ. ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತಗೊಳಿಸುತ್ತದೆ. ಯಾಗದಿಂದ ಹೊರಹೊಮ್ಮುವ ಹೊಗೆಯಿಂದ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ. ಇದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ.
ಗಾಳಿಯನ್ನು ಶುದ್ಧೀಕರಿಸುತ್ತದೆ
ನೀವು ಉಸಿರಾಡುವ ಗಾಳಿಯು ಶುದ್ಧವಾಗಿರುವುದು ಬಹಳ ಮುಖ್ಯ. ಹೆಚ್ಚುತ್ತಿರುವ ಮಾಲಿನ್ಯದಿಂದ ಹೆಚ್ಚಿನ ಜನರು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ವೈದ್ಯರ ಸಲಹೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ, ಯಾಗ ಮತ್ತು ಹವನವನ್ನು ಮಾಡುವ ಮೂಲಕ ಮನೆಯ ಗಾಳಿಯನ್ನು ಶುದ್ಧೀಕರಿಸಿ. ಕಲುಷಿತ ಗಾಳಿಯನ್ನು ಶುದ್ಧೀಕರಿಸಲು ಸಹಾಯ ಯಾಗ ಮಾಡಬಹುದು. ಇದು ಪರಿಸರದಲ್ಲಿರುವ ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಹೋಗಲಾಡಿಸುತ್ತದೆ.
ಶ್ವಾಸಕೋಶಕ್ಕೆ ಪ್ರಯೋಜನಕಾರಿ
ಹವನದ ಹೊಗೆ ನಮ್ಮ ದೇಹ ಸೇರುವುದರಿಂದ ವ್ಯಕ್ತಿಯ ಮೆದುಳು, ಶ್ವಾಸಕೋಶ ಮತ್ತು ಉಸಿರಾಟದ ತೊಂದರೆಗಳು ದೂರವಾಗುತ್ತವೆ. ಇದರಿಂದ ಉಸಿರಾಟದ ಸಮಸ್ಯೆ ದೂರುವಾಗಿ ಶ್ವಾಸಕೋಶ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಧಾರ್ಮಿಕ ನಂಬಿಕೆಯ ಪ್ರಕಾರ, ಯಾಗವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಇದು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ. ಇದರಿಂದ ಮನೆಯ ಪರಿಸರವೂ ಶುದ್ಧವಾಗುತ್ತದೆ. ವ್ಯಕ್ತಿಯ ರಾಶಿಚಕ್ರದಲ್ಲಿ ಗ್ರಹಗಳ ಸಂಚಾರವು ಕೆಟ್ಟದಾಗಿದ್ದರೆ, ಯಾಗವನ್ನು ಮಾಡುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ಇದರೊಂದಿಗೆ ಜಾತಕದ ದೋಷವನ್ನು ಸರಿಪಡಿಸಿಕೊಳ್ಳಬಹುದು.
ಹೋಮಗಳು ದೋಷ ಪರಿಹಾರಗಳು
-ಮಹಾ ಸುದರ್ಶನ ಹೋಮ -ಅಬಿಚಾರ ದೋಷ, ಪ್ರೇತಬಾಧೆ, ಸಂಮೋಹನಕ್ರಿಯೆಗೆ.
-ಮಹಾ ಮೃತ್ಯುಂಜಯ ಹೋಮ -ಮರಣಾವಸ್ಥೆಯಲ್ಲಿರುವವರಿಗೆ (ತೀವ್ರತರದ ವ್ಯಾಧಿಗಳಿಗೆ).
-ಅಭಯಂಕರ ಹೋಮ – ದೀರ್ಘವ್ಯಾಧಿ, ಕುಷ್ಟ, ಚರ್ಮವ್ಯಾಧಿಗಳಿಗೆ.
-ತ್ರಯಂಭಕ ಹೋಮ -ಆಕಸ್ಮಿಕ ಮರಣಗಳಿಗೆ.
-ದುರ್ಗಾ ಹೋಮ -ಕೃತ್ರಿಮ(ಮಾಟ)ಮಹಾ ಅನಿಷ್ಟಗಳಿಗೆ.
-ಅಶ್ಲೇಷಬಲಿ -ಸರ್ಪದೋಷ ಶ್ರೀಘ್ರವಿವಾಹ.
-ಸುಬ್ರಹ್ಮಣ್ಯಹೋಮ -ಶಸ್ತ್ರ ಚಿಕಿತ್ಸೆ, ವಾಹನ ಅಪಘಾತದಿಂದ ನಿವಾರಣೆಗಾಗಿ.
-ವರುಣ ಹೋಮ -ಸಾಲ ಬಾಧೆನಿವಾರಣೆಗಾಗಿ.
-ವಹ್ನಿಹೋಮ -ಶಸ್ತ್ರಾಪಘಾತ, ವಾಹನಾಪಗಾತಗಳಿಂದ ಪಾರಾಗುವುದ್ದಕ್ಕೆ.
-ನಿರುತಿ ಹೋಮ -ಗೃಹದಲ್ಲಿ ದುಷ್ಟಶಕ್ತಿ ನಿಗ್ರಹಕ್ಕೆ.
-ಗಣಪತಿ ಹೋಮ -ಸಕಲ ಕಾರ್ಯಗಳ ಸಾದನೆ, ಸಸ್ಪೆನ್ಷನ್ ಗಳಿಂದ ಮುಕ್ತಿ, ಇಚ್ಚಾಪೂರ್ತಿಗಾಗಿ.
-ಪುರುಷ ಸೂಕ್ತ ಹೋಮ -ನೆನಪಿನ ಶಕ್ತಿ, ತೊದಲುಮಾತು ನಿವಾರಣೆಗಾಗಿ.
-ಶ್ರೀ ದುರ್ಗಾ ಹೋಮ -ಅಪಘಾತ, ರಾಹುಗ್ರಹಪೀಡೆ ಪರಿಹಾರಗಳಿಗೆ, ಗರ್ಭದೋಷಗಳಿಗೆ.
-ಶ್ರೀ ರುದ್ರ ಹೋಮ -ಕಠಿಣಜ್ವರಬಾದೆ, ಶರೀರಸೌಖ್ಯಕ್ಕೆ.
-ನವಗ್ರಹ ಹೋಮ -ಸಕಲ ಆರೋಗ್ಯ, ಸಂಕಷ್ಟಗಳಿಗೆ, ನವಗ್ರಹದೋಷಗಳಿಗೆ.
-ನಾರಾಯಣ ಬಲಿ ಹೋಮ -ಪ್ರೇತಬಾದೆಗೆ, ಪ್ರಕೃತಿ ವಿರೋಧ, ಮರಣಗಳಿಗೆ ಶಾಂತಿಗಾಗಿ.
-ಅಘೊರ ಹೋಮ -ಪ್ರಾಣಿ, ಪಕ್ಷಿಗಳು ಗೃಹ ಪ್ರವೇಶದಿಂದ ಉಂಟಾಗುವ ದೋಷಗಳ ನಿವಾರಣೆಗಾಗಿ.
-ಸಂತಾನ ಗೋಪಾಲ ಹೋಮ -ಸಂತಾನಕ್ಕಾಗಿ (ಪುರುಷಸೂಕ್ತ ಹೋಮ).
-ಗೋಮುಖಪ್ರಸವಶಾಂತಿ ಹೋಮ -ದುಷ್ಟನಕ್ಷತ್ರದಲ್ಲಿ ಜನನ ಶಾಂತಿಗಾಗಿ.
-ಕೂಷ್ಮಾಂಡ ಹೋಮ -ಮಹಾ ಪ್ರಾಯಶ್ಚಿತ್ತಕ್ಕೆ.
-ಷಷ್ಟಿಪೂರ್ತಿ ಶಾಂತಿ ಹೋಮ -60ನೇ ವರ್ಷದಲ್ಲಿ.
-ಉಗ್ರ ರಥ ಶಾಂತಿ ಹೋಮ -70ನೇ ವಯಸ್ಸಿನಲ್ಲಿ.
-ಭೀಮರಥ ಶಾಂತಿ -75ನೇ ವರ್ಷದಲ್ಲಿ.
-ಸಹಸ್ರ ಚಂದ್ರ ದರ್ಶನ ಶಾಂತಿ ಹೋಮ -80ನೇ ವಯಸ್ಸಿನಲ್ಲಿ.
-ರಕ್ಷೋ ಗಣ ಹೋಮ -ಮನೆ ನಿರ್ಮಾಣ ಕಾಲದಲ್ಲಿ ಬಲಿಯಾದ ಜೀವ ಜಂತುಗಳ ಆತ್ಮಶಾಂತಿಗಾಗಿ.
-ಸೂರ್ಯ ನಾರಾಯಣ ಹೋಮ -ಆರೋಗ್ಯವೃದ್ದಿಗಾಗಿ, ದೇಹ ಬಲಕ್ಕೆ, ದೃಷ್ಟಿ ದೋಷನಿವಾರಣೆಗೆ.
-ತ್ರಿಪುರದಲ ಹೋಮ -ಶಸ್ತ್ರಚಿಕಿತ್ಸೆ (ಆಪರೇಷನ್ ಗಳ ಯಶಕ್ಕಾಗಿ).
-ದನ್ವಂತ್ರಿ ಹೋಮ -ಆರೋಗ್ಯ ವೃದ್ದಿಗಾಗಿ.
-ಗರುಡ ಹೋಮ -ಸರ್ಪಪೀಡೆ ತಪ್ಪಿಸಲು, ಕಾರ್ಯ ಯಶಸ್ಸಿಗಾಗಿ.
-ತ್ವರಿತ ಹೋಮ -ಕೆಟ್ಟ ಕನಸು, ಪ್ರೇತಬಾಧೆ, ಗಾಳಿಸೋಕುಗಳನಿವಾರಣೆಗಾಗಿ.
-ವೈವಸ್ವತಹೋಮ -ಪಿತಿಶಾಪ, ಮಾತೃಶಾಪನಿವಾರಣೆಗಾಗಿ.
-ಚಂಡಿಕೇಶ್ವರ ಹೋಮ -ಬಾಲಗ್ರಹ ದೋಷ ನಿವಾರಣೆಗಾಗಿ.
-ಗುಹ್ಯ ಕಾಳಿ ಹೋಮ -ಸ್ತ್ರೀ – ಪುರುಷರ ಗುಪ್ತಾಂಗ ರೋಗ ನಿವಾರಣೆಗಾಗಿ.
-ವಾಯು ಹೋಮ -ವಾಯು ಸಂಬಂದ ವ್ಯಾಧಿಗಳ ನಿವಾರಣೆಗಾಗಿ.
-ಶ್ರೀ ಲಲಿತ ಹೋಮ -ಮನೆಯ ನೆಮ್ಮದಿಗಾಗಿ.
-ಮನೋ ವಾಂಚಿತ ಗಣಹೋಮ -ಇಚ್ಚಾಪೂರ್ಣತೆಗಾಗಿ.
-ಶ್ರೀ ಗಾಯತ್ರಿ ಹೋಮ -ಸಕಲ ಪಾಪಗಳ ನಿವೃತ್ತಿಗಾಗಿ, ದುಷ್ಟರ ನಾಶಕ್ಕಾಗಿ.
ಇದನ್ನೂ ಓದಿ: Assembly Election Results 2022: ಪಂಚರಾಜ್ಯ ಚುನಾವಣೆಯಲ್ಲಿ ಸೋತ ಪ್ರಮುಖ ನಾಯಕರು
ಹೋಮ-ಹವನ ವಿಶೇಷ ಪೂಜೆ ಮೂಲಕ ತಮ್ಮ ನೆಚ್ಚಿನ ಕೋತಿ ಚಿಂಟು 2ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಮಾಡಿದ ಸಾ.ರಾ.ಮಹೇಶ್