ಒಳ್ಳೆ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದೀರಾ? ಹಾಗಾದರೆ ಯಾರಿಗೂ ಹೇಳಬೇಡಿ. ನೀವು ಈ ಮಾತನ್ನು ಮನೆಯಲ್ಲಿರುವ ದೊಡ್ಡವರು ಹೇಳಿದ್ದನ್ನು ಕೇಳಿರಬಹುದು. ಮನೆ, ಜಾಗ, ಕಾರು ಮುಂತಾದಗಳ ಖರೀದಿಗೂ ಮೊದಲೇ ಎಲ್ಲರಿಗೂ ಹೇಳಿಕೊಂಡು ಬರುವ ಅಭ್ಯಾಸ ನಿಮಗಿದೆಯಾ? ಹಾಗಾದರೆ ಇಂದೇ ಆ ಅಭ್ಯಾಸವನ್ನು ಬಿಟ್ಟು ಬಿಡಿ. ಏಕಂದರೆ ನಿಮ್ಮ ಕೆಲವು ಖಾಸಗಿ ಸಂಗತಿಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದರಿಂದ ನೀವು ಅಂದುಕೊಂಡ ಕೆಲಸ ಕೆಡಬಹುದು. ಹಾಗಾದರೆ ಯಾವ ಯಾವ ವಿಷಯಗಳನ್ನು ಹಂಚಿಕೊಳ್ಳಬಾರದು? ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.
ಜೀವನದಲ್ಲಿ ನೀವು ಹಲವಾರು ರೀತಿಯಲ್ಲಿ ಕನಸು ಕಟ್ಟಿಕೊಂಡಿರುತ್ತೀರಿ ಅದು ಸಾಕಾರಗೊಳ್ಳುವಷ್ಟು ಶಕ್ತಿಯೂ ಇರುತ್ತದೆ. ಆದರೆ ಆ ಕನಸು ಮತ್ತು ಆಕಾಂಕ್ಷೆಗಳನ್ನು ನೀವು ತುಂಬಾ ನಂಬಿರುವವರು, ಆತ್ಮೀಯರ ಜೊತೆಗೂ ಕೂಡ ಹಂಚಿಕೊಳ್ಳಬೇಡಿ. ಏಕೆಂದರೆ ನಾವು ನಂಬಿ ಹೇಳಿರುವ ವಿಷಯಗಳು ಈಡೇರುವುದಕ್ಕಿಂತ, ವಿಫಲಗೊಳ್ಳುವುದೇ ಹೆಚ್ಚು. ಹಾಗಾಗಿ ನಿಮ್ಮ ಆಸೆಗಳನ್ನು ಯಾರೊಂದಿಗೂ ಹೇಳಬೇಡಿ.
ಸಂಸಾರದ ಗುಟ್ಟು ಮೂರು ಗೋಡೆಯೊಳಗೆ ಇರಬೇಕು ಎಂಬ ಮಾತಿದೆ. ನೀವು ನಿಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಲು ಬೇರೆಯವರ ಜೊತೆಗೆ ನಿಮ್ಮ ಸಂಸಾರದ ವಿಷಯಗಳನ್ನು ಹೇಳಿಕೊಂಡಲ್ಲಿ ಮುಂದೆ ಅದೇ ನಿಮಗೆ ಮುಳುವಾಗಬಹುದು. ಏಕೆಂದರೆ ನಿಮ್ಮ ಸಮಸ್ಯೆಗೆ ಪರಿಹಾರ ನೀಡುವುದಕ್ಕಿಂತ, ಮನದೊಳಗೆ ಖುಷಿ ಪಡುವವರೇ ಹೆಚ್ಚಿರುತ್ತಾರೆ. ಹಾಗಾಗಿ ಸಾಧ್ಯವಾದಷ್ಟು ಆ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಿ.
ಎಷ್ಟೇ ಆಪ್ತರಾಗಿರಲಿ, ನೀವು ಎಷ್ಟು ಸಂಪಾದನೆ ಮಾಡುತ್ತಿದ್ದೀರಿ ಅಥವಾ ನಿಮ್ಮ ಹಣದ ವಹಿವಾಟುಗಳಿಗೆ ಸಂಬಂಧ ಪಟ್ಟ ವಿಷಯಗಳನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಹೇಳಿಕೊಳ್ಳಬೇಡಿ. ನಿಮ್ಮ ಸಂಬಳ ಹೆಚ್ಚಿದ್ದರೆ ಕೇಳಿ ಅಸೂಯೆ ಪಡುತ್ತಾರೆ. ಕಡಿಮೆ ಇದ್ದರೆ ವ್ಯಂಗ್ಯ ಮಾಡಿ ನಗುತ್ತಾರೆ ಹಾಗಾಗಿ ಹಣದ ವಿಷಯಗಳನ್ನು ಯಾರ ಜೊತೆಯಲ್ಲಿಯೂ ಹಂಚಿಕೊಳ್ಳಬೇಡಿ. ಅದೂ ಅಲ್ಲದೆ ಹಣದ ವಿಷಯಗಳು ಸಂಬಂಧವನ್ನು ಒಡೆಯುತ್ತದೆ ಅದರಿಂದಾಗಿ ಈ ಬಗ್ಗೆ ಜಾಗರೂಕರಾಗಿರಿ.
ಇದನ್ನೂ ಓದಿ: ನಿಮ್ಮ ರಾಶಿಗೆ ಅನುಗುಣವಾಗಿ ಈ ಪ್ರಾಣಿಗಳನ್ನು ಸಾಕಿದರೆ ಅದೃಷ್ಟವೇ ಬದಲಾಗುತ್ತೆ!
ನಿಮ್ಮ ಮನೆಯ ಕೌಟುಂಬಿಕ ವಿಷಯಗಳನ್ನು ಎಲ್ಲಿಯೂ ಹಂಚಿಕೊಳ್ಳಬೇಡಿ. ಇದು ಇನ್ನೊಬ್ಬರ ಮಾತಿಗೆ ವಿಷಯವಾಗುತ್ತದೆ. ಅದರ ಹೊರತಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಹಾಗಾಗಿ ಮನೆಯ ವಿಷಯಗಳನ್ನು ಮನೆಯವರೊಂದಿಗೆ ಕುಳಿತು ಬಗೆಹರಿಸಿಕೊಳ್ಳಿ.
ಈ ವರ್ಷ ಕಾರು, ಜಾಗ ಅಥವಾ ನಿವೇಶನ ಖರೀದಿಸಬೇಕು ಎಂದು ಬಯಸಿದ್ದಲ್ಲಿ ಅಥವಾ ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವಾಗ ಯಾವುದೇ ಕಾರಣಕ್ಕೂ ಅದನ್ನು ಮೊತ್ತೊಬ್ಬರ ಬಳಿ ಹಂಚಿಕೊಳ್ಳಬೇಡಿ. ಏಕಂದರೆ ಅಸೂಯೆ ಯಾವ ಕೆಲಸವನ್ನಾದರೂ ಕೆಡಿಸಬಹುದು ಹಾಗಾಗಿ ಅಂದುಕೊಂಡ ಪೂರ್ವ ನಿಯೋಜಿತ ಕೆಲಸಗಳು ಮುಗಿಯುವವರೆಗೆ ಯಾರಿಗೂ ಹೇಳಬೇಡಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ