God Shiva-Shani Pradosha Vrat: ಧರ್ಮಗ್ರಂಥಗಳಲ್ಲಿ ಪ್ರದೋಷ ವ್ರತವನ್ನು ಅತ್ಯಂತ ಮಂಗಳಕರ ವ್ರತವೆಂದು ಮತ್ತು ಇಷ್ಟಾರ್ಥಗಳನ್ನು ಈಡೇರಿಸುವ ವ್ರತವೆಂದು ವಿವರಿಸಲಾಗಿದೆ. ಪ್ರತೀ ತಿಂಗಳ ತ್ರಯೋದಶಿ ತಿಥಿಯಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಪ್ರದೋಷ ವ್ರತವನ್ನು ಆಚರಿಸುವವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಈ ಬಾರಿ ಶುಭ ಸಂಯೋಗದೊಂದಿಗೆ ಪ್ರದೋಷ ವ್ರತವನ್ನು ಆಗಸ್ಟ್ 17 ರಂದು ಆಚರಿಸಲಾಗುವುದು. ಈ ಪ್ರದೋಷ ವ್ರತವು ಶನಿವಾರ ಬಂದಿರುವುದರಿಂದ ಇದನ್ನು ಶನಿ ಪ್ರದೋಷ ವ್ರತವೆಂದು ಕರೆಯಲಾಗುತ್ತದೆ. ಈ ವ್ರತವನ್ನು ಸಂತಾನ ಭಾಗ್ಯವನ್ನು ಹೊಂದುವ ಬಯಕೆಯಿಂದ ಆಚರಿಸಲಾಗುತ್ತದೆ. ಶನಿ ಪ್ರದೋಷ ವ್ರತದ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಹತ್ವಗಳ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ..
ಶನಿ ಪ್ರದೋಷ ವ್ರತದ ದಿನದಂದು ಮೂರು ಅತ್ಯಂತ ಮಂಗಳಕರ ಯೋಗಗಳು ಸೃಷ್ಟಿಯಾಗುತ್ತವೆ ಎಂದು ವೈದಿಕ ಪಂಚಾಂಗದಲ್ಲಿ ಹೇಳಲಾಗಿದೆ. ಈ ದಿನ ಪ್ರೀತಿ ಯೋಗ, ಆಯುಷ್ಮಾನ್ ಯೋಗ ಇರಲಿದೆ. ಪ್ರೀತಿ ಯೋಗವು ಹಗಲು 10.46 ರವರೆಗೆ ಇರುತ್ತದೆ ಮತ್ತು ನಂತರ ಆಯುಷ್ಮಾನ್ ಯೋಗವು ಪ್ರಾರಂಭವಾಗಲಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಶುಭ ಸಂಯೋಗಗಳಲ್ಲಿ ದೇವರು ಮತ್ತು ದೇವತೆಗಳನ್ನು ಪೂಜಿಸುವುದು ವಿಶೇಷ ಪ್ರಯೋಜನವನ್ನು ನೀಡುತ್ತದೆ.
ಶ್ರಾವಣ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯು ಆಗಸ್ಟ್ 17 ರಂದು ಶನಿವಾರ ಹಗಲು 08:05 ರಿಂದ ಪ್ರಾರಂಭವಾಗುತ್ತದೆ. ಮತ್ತು ಇದು ಆಗಸ್ಟ್ 18 ರಂದು ಮುಂಜಾನೆ 05:50 ಕ್ಕೆ ಕೊನೆಗೊಳ್ಳುತ್ತದೆ. ಪ್ರದೋಷ ಕಾಲದಲ್ಲಿ ದೇವರನ್ನು ಪೂಜಿಸುವುದು ಅತ್ಯಂತ ಮಂಗಳಕರವಾಗಿರುತ್ತದೆ. ಈ ದಿನ ಪ್ರದೋಷ ಕಾಲ ಸಂಜೆ 06:39 ರಿಂದ ರಾತ್ರಿ 08:57 ರವರೆಗೆ ಶಿವನ ಪೂಜೆಗೆ ಶುಭ ಮುಹೂರ್ತವಿರುತ್ತದೆ. ಈ ಸಮಯದಲ್ಲಿ ನೀವು ಶಿವನನ್ನು ತಪ್ಪದೇ ಪೂಜಿಸುವುದು ಉತ್ತಮ.
ಪ್ರದೋಷ ವ್ರತವನ್ನು ಆಚರಿಸುವುದರಿಂದ ಪರಮಾತ್ಮ ಈಶ್ವರನು ಪ್ರಸನ್ನನಾಗಿ ಆತನ ಆಶೀರ್ವಾದವನ್ನು ನಿಮ್ಮ ಮೇಲೆ ಸುರಿಸುತ್ತಾನೆ. ಹಾಗೆಯೇ ಮಕ್ಕಳಿಲ್ಲದವರೂ ಶನಿ ಪ್ರದೋಷ ವ್ರತವನ್ನು ಆಚರಿಸುವುದರಿಂದ ಸಂತಾನ ಭಾಗ್ಯವನ್ನು ಪಡೆಯುತ್ತಾರೆ. ಈ ವ್ರತವನ್ನು ಆಚರಿಸುವುದರಿಂದ ಶಿವನ ಕೃಪೆಯಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ ನೀವು ಪ್ರದೋಷ ವ್ರತವನ್ನು ತಪ್ಪದೇ ಆಚರಿಸಿ.
Also Read: Toe Rings -ವಿವಾಹಿತ ಮಹಿಳೆಯರು ಏಕೆ ಕಾಲುಂಗುರ ಧರಿಸುತ್ತಾರೆ ಗೊತ್ತಾ? ಅದಕ್ಕಿರುವ ಕಾಳಜಿ-ಕಾರಣವೇನು?
– ಪ್ರದೋಷ ಕಾಲ ಅಂದರೆ ಶನಿ ಪ್ರದೋಷ ವ್ರತದ ದಿನದಂದು ಸಂಜೆಯ ಸಮಯವನ್ನು ಪೂಜೆ ಮಾಡಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
– ಸೂರ್ಯಾಸ್ತದ ಒಂದೂವರೆ ಗಂಟೆ ಮೊದಲು ಭಕ್ತರು ಸ್ನಾನ ಮಾಡಿ ಪೂಜೆಗೆ ಸಿದ್ಧರಾಗಬೇಕು.
– ಸ್ನಾನದ ನಂತರ, ಸಂಜೆಯ ಶುಭ ಮುಹೂರ್ತದಲ್ಲಿ ಪೂಜೆಯನ್ನು ಪ್ರಾರಂಭಿಸಿ.
– ಹಸುವಿನ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಗಂಗಾಜಲ ಇತ್ಯಾದಿಗಳೊಂದಿಗೆ ಶಿವಲಿಂಗಕ್ಕೆ ಅಭಿಷೇಕ ಮಾಡಿ.
Also Read: Oh my Dog ಸ್ವಾಮಿನಿಷ್ಠೆಯ ನಾಯಿಗಳಿಗಾಗಿ ಶತ ಶತಮಾನಗಳ ಹಿಂದೆಯೇ ದೇಗುಲಗಳನ್ನು ಕಟ್ಟಲಾಗಿದೆ! ರೋಚಕ ಕತೆಗಳು ಇಲ್ಲಿವೆ
– ನಂತರ ಶಿವಲಿಂಗಕ್ಕೆ ಬಿಳಿಚಂದನವನ್ನು ಹಚ್ಚಿ ಬಿಲ್ವಪತ್ರೆ, ಹೂವು, ಇತ್ಯಾದಿಗಳನ್ನು ಅರ್ಪಿಸಿ.
– ನಂತರ ಕ್ರಮಬದ್ಧವಾಗಿ ಪೂಜೆ ಮಾಡಿ ಶಿವನಿಗೆ ಆರತಿಯನ್ನು ಮಾಡಿ.
ಜ್ಯೋತಿಷ್ಯದ ಪ್ರಕಾರ, ಪ್ರಸ್ತುತ ಸಾಡೇಸಾತಿ ರಾಶಿಗಳು – ಮಕರ, ಕುಂಭ, ಮೀನ.
ಅರ್ಧಾಷ್ಟಮ – ವೃಶ್ಚಿಕ.
ಕಂಟಕ ಶನಿ – ಕಟಕ.
ಸಪ್ತಮ ಶನಿ – ಸಿಂಹ.
ಶನಿಯ ಪ್ರಭಾವವನ್ನು ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಶನಿ ಪ್ರದೋಷ ವ್ರತದ ದಿನದಂದು ಶನಿ ಮತ್ತು ಶಿವನನ್ನು ಪೂಜಿಸುವುದರಿಂದ ಈ ರಾಶಿಯವರು ವಿಶೇಷ ಲಾಭವನ್ನು ಪಡೆಯಬಹುದು. ಈ ದಿನ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿ ಮತ್ತು ದೀಪವನ್ನು ಬೆಳಗಿಸಿ. ಇದರೊಂದಿಗೆ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಹೀಗೆ ಮಾಡುವುದರಿಂದ ಶನಿಗ್ರಹದ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)