ಶಿವರಾತ್ರಿ ಹಬ್ಬವು ಬಂದೆ ಬಿಟ್ಟಿತು, ದೇಶದಾದಂತ್ಯ ಇಂದು ಶಿವರಾತ್ರಿಯ ಸಂಭ್ರಮವು ಜೋರಾಗಿದೆ. ಈ ಮಹಾ ಶಿವರಾತ್ರಿಯ ದಿನದಂದು ಕೆಲವರು ಉಪವಾಸ ಮಾಡಿ ವೃತ ಆಚರಿಸುತ್ತಾರೆ. ಆದರೆ ಉಪವಾಸದ ಸಮಯದಲ್ಲಿ ಕೆಲವರು ಸಿಹಿ ತಿನಿಸುಗಳನ್ನು ದೇವರಿಗೆ ನೈವೇದ್ಯವಾಗಿಟ್ಟು ತಾವು ಕೂಡ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಈ ದಿನದಂದು ಮನೆಯಲ್ಲೇ ಸುಲಭವಾದ ಕೆಲವು ರೆಸಿಪಿಗಳನ್ನು ಮಾಡಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು.
* ಗೋಧಿ ಹಿಟ್ಟು
* ಚಿರೋಟಿ ರವೆ
* ಮೈದಾಹಿಟ್ಟು
* ಅರಿಶಿಣ
* ಬೇಯಿಸಿಟ್ಟ ಗೆಣಸು
* ಬೆಲ್ಲ
* ಅಡುಗೆ ಎಣ್ಣೆ
* ತುಪ್ಪ
* ಉಪ್ಪು
ಇದನ್ನೂ ಓದಿ: ಶಿವನನ್ನು ಸುಲಭವಾಗಿ ಮೆಚ್ಚಿಸಲು ಈ ನೈವೇದ್ಯಗಳನ್ನು ಅರ್ಪಿಸಿ
* ಮೊದಲಿಗೆ ಗೋಧಿ ಹಿಟ್ಟು, ಚಿರೋಟಿ ರವೆ, ಮೈದಾ, ಚಿಟಿಕೆಯಷ್ಟು ಅರಶಿನ, ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
* ಕಲಸಿಟ್ಟ ಹಿಟ್ಟಿನ ಮೇಲೆ ಒಂದೆರಡು ಚಮಚ ಅಡುಗೆ ಎಣ್ಣೆ ಹಾಕಿ ಸ್ವಲ್ಪ ಹೊತ್ತು ಹಾಗೆ ಬಿಟ್ಟಿಡಿ.
* ಇನ್ನೊಂದೆಡೆ ಗ್ಯಾಸ್ ಮೇಲೆ ಸಿಹಿ ಗೆಣಸನ್ನು ತೊಳೆದು ಬೇಯಿಸಿಕೊಳ್ಳಿ. ಬೆಂದ ಸಿಹಿ ಗೆಣಸಿನ ಸಿಪ್ಪೆ ತೆಗೆದು ಪುಡಿ ಮಾಡಿ ಬೆಲ್ಲ ಸೇರಿಸಿ ಹೂರಣವನ್ನು ಸಿದ್ಧಮಾಡಿಟ್ಟುಕೊಳ್ಳಿ.
* ಕಲಸಿಟ್ಟ ಹಿಟ್ಟನ್ನು ಉಂಡೆಯಾಕಾರ ಮಾಡಿಕೊಂಡು, ಅದಕ್ಕೆ ಹೂರಣವನ್ನು ತುಂಬಿ ಅದನ್ನು ಕೈಯಲ್ಲೇ ತಟ್ಟಿಕೊಂಡು, ಆ ಬಳಿಕ ದುಂಡಗೆ ಲಟ್ಟಿಸಿಕೊಳ್ಳಿ.
* ಲಟ್ಟಿಸಿದ ಹೋಳಿಗೆಯನ್ನು ಕಾವಲಿನ ಮೇಲೆ ಹಾಕಿ ಕಂದು ಬಣ್ಣ ಬರುವವರೆಗೆ ಕಾಯಿಸಿಕೊಂಡರೆ ಸಿಹಿ ಸಿಹಿಯಾದ ಗೆಣಸಿನ ಹೋಳಿಗೆಯೂ ಸವಿಯಲು ಸಿದ್ಧವಾಗಿರುತ್ತದೆ.
* ಬಾಳೆಹಣ್ಣು
* ಹಾಲು
* ಸಕ್ಕರೆ
* ತುಪ್ಪ
* ತುರಿದ ತೆಂಗಿನ ಕಾಯಿ
* ಅಕ್ರೋಡ
* ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿಕೊಂಡು, ಹಾಲಿನಲ್ಲಿ ಬೆರೆಸಿ ಗಟ್ಟಿಯಾಗುವವರೆಗೆ ಕುದಿಸಿಕೊಳ್ಳಿ.
* ಇದಕ್ಕೆ ತುಪ್ಪ ಹಾಕಿ ಕಂದು ಬಣ್ಣ ಬರುವವರೆಗೂ ಕೈಯಾಡಿಸುತ್ತಾ ಇರಿ.
* ಆ ಬಳಿಕ ಸಕ್ಕರೆ, ತೆಂಗಿನ ಕಾಯಿಯ ತುರಿ ಹಾಗೂ ಅಕ್ರೋಡ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
* ಒಂದು ಬಟ್ಟಲಿಗೆ ತುಪ್ಪ ಸವರಿ ಈ ಮಿಶ್ರಣವನ್ನು ಹಾಕಿ ತಣ್ಣಗಾಗಲು ಬಿಡಿ. ಬೇಕಾದ ಆಕಾರದಲ್ಲಿ ಕತ್ತರಿಸಿದರೆ ರುಚಿ ರುಚಿಯಾದ ಬಾಳೆಹಣ್ಣಿನ ಬರ್ಫಿ ಸವಿಯಲು ಸಿದ್ಧ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ