AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shravan Maas 2023: ಅಧಿಕ ಶ್ರಾವಣ ಮಾಸದಲ್ಲಿ ಸೋಮವಾರದ ವ್ರತಾಚರಣೆಯ ಫಲಗಳೇನು? ಯಾವ ಮಂತ್ರವನ್ನು ಪಠಿಸಬೇಕು?

ಅಧಿಕ ಶ್ರಾವಣ ಮಾಸದ ಸೋಮವಾರ ಶಿವನಿಗೆ ಅರ್ಪಿತವಾಗಿರುವುದರಿಂದ ವಿಶೇಷ ಮಹತ್ವವನ್ನು ಹೊಂದಿದೆ. ಭಕ್ತರು ಈ ದಿನ ಉಪವಾಸ ಮಾಡುತ್ತಾರೆ ಮತ್ತು ತಮ್ಮ ತಮ್ಮ ಆಸೆಗಳನ್ನು ಈಡೇರಿಸುವಂತೆ ಆಶೀರ್ವಾದ ಕೋರಿ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾರೆ.

Shravan Maas 2023: ಅಧಿಕ ಶ್ರಾವಣ ಮಾಸದಲ್ಲಿ ಸೋಮವಾರದ ವ್ರತಾಚರಣೆಯ ಫಲಗಳೇನು? ಯಾವ ಮಂತ್ರವನ್ನು ಪಠಿಸಬೇಕು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 05, 2023 | 4:17 PM

Share

ಈ ಬಾರಿಯ ಶ್ರಾವಣ ತುಂಬಾ ವಿಶೇಷ. ಏಕೆಂದರೆ ಅಧಿಕ ಶ್ರಾವಣ ಬಂದಿದೆ. ಅದರಲ್ಲಿಯೂ ವ್ರತಾಚರಣೆ ಮಾಡುವವರಿಗೆ ಈ ದಿನ ತುಂಬಾ ಉತ್ತಮ. ಪೂಜೆ ಪುನಸ್ಕಾರ ಮಾಡಿ, ಭಕ್ತಿಯಿಂದ ದೇವರನ್ನು ಬೇಡುವವರು ಹಲವಾರು ವ್ರತಗಳನ್ನು ಈ ಮಾಸದಲ್ಲಿ ಮಾಡಬಹುದು. ಇನ್ನು ಅಧಿಕ ಶ್ರಾವಣ ಮಾಸದ ಸೋಮವಾರ ಶಿವನಿಗೆ ಅರ್ಪಿತವಾಗಿರುವುದರಿಂದ ವಿಶೇಷ ಮಹತ್ವವನ್ನು ಹೊಂದಿದೆ. ಭಕ್ತರು ಈ ದಿನ ಉಪವಾಸ ಮಾಡುತ್ತಾರೆ ಮತ್ತು ತಮ್ಮ ತಮ್ಮ ಆಸೆಗಳನ್ನು ಈಡೇರಿಸುವಂತೆ ಆಶೀರ್ವಾದ ಕೋರಿ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾರೆ. ಧಾರ್ಮಿಕ ಗ್ರಂಥಗಳಲ್ಲಿಯೂ ಶ್ರಾವಣ ಮಾಸವನ್ನು ಅತ್ಯುತ್ತಮ ಮಾಸವೆಂದು ಪರಿಗಣಿಸಲಾಗಿದ್ದು ಶಿವನ ನೆಚ್ಚಿನ ಮಾಸವೆಂದೇ ಪ್ರಖ್ಯಾತಗೊಂಡಿದೆ.

ಶ್ರಾವಣ ಮಾಸದಲ್ಲಿ ಸೋಮವಾರ ವ್ರತಾಚರಣೆಯ ಫಲಗಳೇನು?

ಶ್ರಾವಣ ಮಾಸದಲ್ಲಿ ಬರುವ ಸೋಮವಾರಗಳಲ್ಲಿ ವ್ರತ ಮಾಡುವುದರಿಂದ ಶಿವನ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ಸೋಮವಾರವೂ ಚಂದ್ರನ ದಿನವಾಗಿದ್ದು, ಆ ದಿನ ಉಪವಾಸ ವ್ರತ ಮಾಡುವುದರಿಂದ ನಿಮ್ಮ ಜಾತಕದಲ್ಲಿ ದೋಷಗಳಿದ್ದಲ್ಲಿ ಅದನ್ನು ನಿವಾರಣೆ ಮಾಡಿ ಚಂದ್ರನ ಸ್ಥಾನವನ್ನು ಬಲಪಡಿಸುತ್ತದೆ. ಶಿವ ಪುರಾಣದ ಪ್ರಕಾರ ಶ್ರಾವಣ ಸೋಮವಾರದಂದು ಉಪವಾಸ ಮಾಡುವುದರಿಂದ ಜೀವನದಲ್ಲಿ ಬಂದ ಕಷ್ಟ ದೂರವಾಗಿ ಯಾವ ಕೊರತೆಯೂ ಆಗುವುದಿಲ್ಲ. ಜೊತೆಗೆ ನಿಮ್ಮ ಭಕ್ತಿಗೆ ಶಿವನು ಅಸ್ತು ಎಂದು ನಿಮ್ಮ ತೊಂದರೆಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ. ಹಿಂದೆ ಪಾರ್ವತಿ ದೇವಿ ಶಿವನನ್ನು ವರಿಸಲು ಶ್ರಾವಣ ಮಾಸದಲ್ಲಿ ಕಠಿಣ ಉಪವಾಸ ಮಾಡಿದಳು. ಆಗ ಶಿವ, ಪಾರ್ವತಿಯ ತಪಸ್ಸನ್ನು ಮೆಚ್ಚಿ ಆಕೆಯನ್ನು ಮದುವೆಯಾದ ಎಂಬ ಪೌರಾಣಿಕ ಕತೆಯಿದೆ. ಹಾಗಾಗಿ ಮದುವೆಯಾದ ಮಹಿಳೆಯರು ಈ ವ್ರತವನ್ನು ಭಕ್ತಿ ಶ್ರದ್ದೆಯಿಂದ ಆಚರಣೆ ಮಾಡುತ್ತಾರೆ. ಅದರಲ್ಲಿಯೂ ಈ ಬಾರಿ ಹಲವು ವರ್ಷಗಳ ಬಳಿಕ ಅಧಿಕ ಶ್ರಾವಣ ಮಾಸ ಬಂದಿರುವುದು ವಿಶೇಷವಾಗಿದೆ.

ಇದನ್ನೂ ಓದಿ: ಅಧಿಕ ಮಾಸದಲ್ಲಿ ಯಾವ ದಾನ ಮಾಡಿದರೆ ಶ್ರೇಷ್ಠ ಫಲ? ಇಲ್ಲಿದೆ ವ್ರತಾಚರಣೆಯ ನಿಯಮಗಳು

ಶ್ರಾವಣ ಸೋಮವಾರದಂದು ಯಾವ ಮಂತ್ರಗಳನ್ನು ಪಠಿಸಬೇಕು?

1.ಪಂಚಾಕ್ಷರಿ ಮಂತ್ರ – ಓಂ ನಮಃ ಶಿವಾಯಃ

2. ಮಹಾ ಮೃತ್ಯುಂಜಯ ಮಂತ್ರ – ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಂವಾ ಬಂಧನಾ ಮೃತ್ಯೋರ್-ಮುಕ್ಷೀಯ ಮಾಮೃತಾತ್||

3. ರುದ್ರ ಮಂತ್ರ – ಓಂ ನಮೋ ಭಗವತೇ ರುದ್ರಾಯ

4. ಶಿವ ಗಾಯತ್ರಿ ಮಂತ್ರ – ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಯೇ ಧೀಮಹಿ ತನ್ನಃ ಶಿವಃ ಪ್ರಚೋದಯಾತ್

ಈ ವ್ರತವನ್ನು ಯಾವ ರೀತಿಯಲ್ಲಿ ಆಚರಣೆ ಮಾಡಬೇಕು?

ಮಾಂಸಾಹಾರ ಸೇವನೆ ಮಾಡದೆಯೇ ಪ್ರತಿ ಶ್ರಾವಣ ಸೋಮವಾರದಂದು ಉಪವಾಸವಿದ್ದು ಶಿವನಿಗೆ ಅಭಿಷೇಕ ಮಾಡಬೇಕು. ಅಥವಾ ಶಿವನ ದೇವಸ್ಥಾನಗಳಿಗೆ ಹೋಗಿ ದರ್ಶನ ಮಾಡಿ ಬರಬೇಕು. ಭಕ್ತರು ಬಿಲ್ವಪತ್ರೆ ಎಲೆಗಳನ್ನು ಶಿವನಿಗೆ ಅರ್ಪಿಸಿ ಶಿವನ ಮಂತ್ರಗಳ ಪಠಣೆ ಮಾಡುವುದರಿಂದ ಅಧಿಕ ಫಲ ಲಭ್ಯವಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ