ಕೈಲಾಸ ಯೋಗಿ, ದೇವರ ದೇವ ಮಹಾದೇವ ಶಿವ ಆಡಂಬರವನ್ನು ಬಯಸುವುದಿಲ್ಲ. ತನ್ನ ಭಕ್ತರು ಶ್ರದ್ಧೆಯಿಂದ ಒಂದು ಲೋಟ ನೀರಲ್ಲಿ ಅಭಿಷೇಕ ಮಾಡಿದರೂ ತೃಪ್ತನಾಗುತ್ತಾನೆ. ಭಕ್ತರ ಆಸೆಗಳನ್ನು ಈಡೇರಿಸುತ್ತಾನೆ. ಹೀಗಾಗಿ ಶಿವನನ್ನು ಭೋಲೆನಾಥ ಎಂದೂ ಕರೆಯುತ್ತಾರೆ. ಸದ್ಯ ಶ್ರಾವಣ ಮಾಸ ಆರಂಭವಾಗಿದೆ ಶಿವ ಭಕ್ತರಿಗೆ ಹಬ್ಬದ ಸಂಭ್ರಮ. ತನ್ನ ಪ್ರಿಯ ಈಶ್ವರನ ಸ್ಮರಣೆಯಲ್ಲಿ ವ್ರತ, ಪೂಜೆ, ಉಪವಾದದಲ್ಲಿ ಶ್ರಾವಣ ಮಾಸ ಕಳೆಯಲು ಬಯಸುತ್ತಾರೆ. ಶಿವನಿಗೆ ಮತ್ತಷ್ಟು ಹತ್ತಿರವಾಗಲು ಇಚ್ಚಿಸುತ್ತಾರೆ.
ಆದರೆ ಮಹಾದೇವನ ಭಕ್ತರು ಒಂದು ವಿಷಯವನ್ನು ತಿಳಿದಿರಬೇಕು, ಮಹಾದೇವನನ್ನು ಸಂತೋಷ ಪಡಿಸುವುದು ಎಷ್ಟು ಸುಲಭವೂ ಅದೇ ರೀತಿ ಆತನಿಗೆ ಕೋಪ ಬರವುದೂ ಅಷ್ಟೇ ಸುಲಭ. ಹೀಗಾಗಿ ನೀವು ಮಹಾದೇವನನ್ನು ಪ್ರತಿದಿನ ಪೂಜಿಸುತ್ತಿದ್ದರೆ, ಈ ಪವಿತ್ರ ಶ್ರಾವಣ ಮಾಸದಲ್ಲಿ ಶಿವನಿಗೆ ಇಷ್ಟವಾಗದಂತಹ ಯಾವುದೇ ಕೆಲಸವನ್ನು ಮಾಡಬೇಡಿ. ಇಲ್ಲದಿದ್ದರೆ ನೀವು ಶಿವನ ಕೋಪಗೊಳಗಾಗಬಹುದು.
ಈ 7 ತಪ್ಪುಗಳನ್ನು ಮಾಡಬೇಡಿ
1. ಶ್ರಾವಣ ತಿಂಗಳಲ್ಲಿ, ನೀವು ಮಾಂಸ ಮತ್ತು ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಧಾರ್ಮಿಕ ಗ್ರಂಥಗಳಲ್ಲಿ ಈ ಬಗ್ಗೆ ಸೂಚಿಸಲಾಗಿದೆ.
2. ಶ್ರಾವಣ ತಿಂಗಳಲ್ಲಿ ಸಾತ್ವಿಕ ಆಹಾರವನ್ನು ತೆಗೆದುಕೊಳ್ಳಬೇಕು. ಜಿಡ್ಡಿನ ಆಹಾರವನ್ನು ತಪ್ಪಿಸಬೇಕು. ಈ ತಿಂಗಳಲ್ಲಿ ಹಾಲು, ಮೊಸರು, ಮೂಲಂಗಿ, ಬದನೆಕಾಯಿ, ಬೆಳ್ಳುಳ್ಳಿ, ಕರಿಬೇವು, ಈರುಳ್ಳಿ ಮತ್ತು ಸೊಪ್ಪನ್ನು ಕಡಿಮೆ ಮಾಡಬೇಕು.
3. ಶ್ರಾವಣ ಮಾಸದಲ್ಲಿ ಗಿಡ, ಮರಗಳೆಲ್ಲ ಹಸಿರಿನಿಂದ ಕಂಗೊಳಿಸುತ್ತಿರುತ್ತವೆ. ಈ ತಿಂಗಳನ್ನು ಅತ್ಯಂತ ಶಕ್ತಿಯುತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇಂತಹ ಸಮಯದಲ್ಲಿ, ಕಪ್ಪು ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು ಏಕೆಂದರೆ ಕಪ್ಪು ಬಟ್ಟೆಗಳು ನಕಾರಾತ್ಮಕತೆಯನ್ನು ತರುತ್ತವೆ. ಪೂಜೆಯ ಸಮಯದಲ್ಲಿಯೂ ಕಪ್ಪು ಬಟ್ಟೆ ಧರಿಸುವುದು ಶುಭವಲ್ಲ ಎಂದು ಪರಿಗಣಿಸಲಾಗಿದೆ. ಶ್ರಾವಣದಲ್ಲಿ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭಕರ ಎನ್ನಲಾಗುತ್ತೆ.
4. ಈ ಇಡೀ ತಿಂಗಳು ದೇವರ ಪೂಜೆ ಮತ್ತು ಭಜನೆ ಕೀರ್ತನೆಯಲ್ಲಿ ಕಳೆಯಬೇಕು. ಈ ಸಮಯದಲ್ಲಿ, ಪ್ರತಿಯೊಬ್ಬರು ದೇವರಿಗೆ ತಲೆಬಾಗಬೇಕು. ದೇವರನ್ನು ಪೂಜಿಸಬೇಕು. ಹಾಗೂ ಒಳ್ಳೆಯ ಕೆಲಸಗಳನ್ನು ಆರಂಭಿಸಲು ಶ್ರಾವಣ ಮಾಸ ಒಳ್ಳೆಯ ತಿಂಗಳು. ಹಗಲಿನಲ್ಲಿ ಮಲಗುವುದರಿಂದ ಸಮಯ ವ್ಯರ್ಥವಾಗಬಾರದು.
5. ನೀವು ದೇವರನ್ನು ಪೂಜಿಸುವಾಗ, ಮಂತ್ರಗಳನ್ನು ಪಠಿಸುವಾಗ ಅಥವಾ ಇತ್ಯಾದಿಗಳನ್ನು ಓದುವಾಗ, ಯಾರೊಂದಿಗೂ ಮಾತನಾಡಬೇಡಿ. ಇಲ್ಲದಿದ್ದರೆ ಪೂಜೆಯಿಂದ ಗಳಿಸಿದ ಎಲ್ಲಾ ಧನಾತ್ಮಕ ಶಕ್ತಿಯನ್ನು ನೀವು ಕಳೆದುಕೊಳ್ಳುತ್ತೀರಿ.
6. ನೀವು ದೇವರನ್ನು ಪೂಜಿಸುತ್ತಿದ್ದರೆ ನಿಮ್ಮ ಆಲೋಚನೆಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಯಾರ ಬಗ್ಗೆಯೂ ಅಪಪ್ರಚಾರ ಅಥವಾ ತಪ್ಪು ಕಲ್ಪನೆ ಇರಬಾರದು. ಆಲೋಚನೆಗಳ ಶುದ್ಧತೆಯು ದೇವರನ್ನು ತಲುಪುವ ಏಕೈಕ ಮಾರ್ಗವಾಗಿದೆ.
7. ನಿಮ್ಮ ದೇಹದ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ ಮತ್ತು ಸ್ವಚ್ಛವಾದ ಬಟ್ಟೆ ಇತ್ಯಾದಿಗಳನ್ನು ಧರಿಸಿದ ನಂತರವೇ ಮಹಾದೇವನನ್ನು ಪೂಜಿಸಿ. ಪಿರಿಯಡ್ಸ್ ಸಮಯದಲ್ಲಿ ಶಿವನನ್ನು ಸ್ಮರಿಸಬಹುದು ಆದ್ರೆ ದೇವರ ಮೂರ್ತಿಯನ್ನು ಮುಟ್ಟಬೇಡಿ.
ಇದನ್ನೂ ಓದಿ: Shravan Somwar 2021: ಶ್ರಾವಣ ಸೋಮವಾರದಂದು ಶಿವನ ಪೂಜೆ ಹೇಗಿರಬೇಕು? ಇಲ್ಲಿದೆ ಶಿವನನ್ನು ಒಳಿಸಿಕೊಳ್ಳುವ ಮಂತ್ರ