ಪ್ರತಿ ತಿಂಗಳು ಸೂರ್ಯ ತನ್ನ ರಾಶಿಪಥ ಬದಲಾಯಿಸುತ್ತಲೇ ಇರುತ್ತಾನೆ. ಆಗಸ್ಟ್ 16 ರಂದು ಸೂರ್ಯ ದೇವನು ಕಟಕ ರಾಶಿಯನ್ನು ತೊರೆದು ತನ್ನ ರಾಶಿಯಾದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನವನ್ನು ಸಿಂಹ ಸಂಕ್ರಾಂತಿಯೆಂದು ಆಚರಿಸಲಾಗುತ್ತದೆ. ಸೂರ್ಯನು ಸಿಂಹ ರಾಶಿಯನ್ನು ಪ್ರವೇಶಿಸುತ್ತಿದ್ದಂತೆ ಬುಧಾದಿತ್ಯ ಯೋಗ ಮತ್ತು ತ್ರಿಗ್ರಾಹಿ ಯೋಗವು ಈ ರಾಶಿಯಲ್ಲಿ ರೂಪುಗೊಳ್ಳುತ್ತದೆ. ಈ ವಿಶೇಷ ಸಿಂಹ ಸಂಕ್ರಾಂತಿಯಂದು ಈ ಕೆಲವು ರೀತಿಯ ಆಚರಣೆಯ ಮೂಲಕ ಶುಭ ಫಲಗಳನ್ನು ಪಡೆಯಬಹುದು.
ಸೂರ್ಯನು ಸಿಂಹ ರಾಶಿಯನ್ನು ಪ್ರವೇಶಿಸುವ ಸಮಯ ಸಂಜೆ 7:53
ಪುಣ್ಯ ಕಾಲ – ಮಧ್ಯಾಹ್ನ 12:13 ರಿಂದ 6:29 ರವರೆಗೆ
ಮಹಾ ಪುಣ್ಯ ಕಾಲ – ಸಂಜೆ 4:24 ರಿಂದ 6:29 ರವರೆಗೆ
ಸಿಂಹ ಸಂಕ್ರಾಂತಿಯಂದು ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಅದಲ್ಲದೇ ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಮತ್ತು ಅದರಲ್ಲಿ ಕೆಂಪು ಹೂವುಗಳು, ಕೆಂಪು ಶ್ರೀಗಂಧ ಮತ್ತು ಕೆಲವು ಗೋಧಿ ಕಾಳುಗಳನ್ನು ಹಾಕಿ ಸೂರ್ಯನಿಗೆ ಅರ್ಪಿಸಬೇಕು. ಇದರ ನಂತರ, ‘ಓಂ ಆದಿತ್ಯಾಯ ನಮಃ’ ಎಂಬ ಮಂತ್ರವನ್ನು ಪಠಿಸುತ್ತಾ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ ಮೂರು ಬಾರಿ ಒಂದೇ ಸ್ಥಳದಲ್ಲಿ ಪ್ರದಕ್ಷಿಣೆ ಮಾಡಬೇಕು. ಆ ಬಳಿಕ ವ್ಯಕ್ತಿಯೂ ಬಡವರಿಗೆ ಹಾಗೂ ನಿರ್ಗತಿಕರಿಗೆ ತಾಮ್ರ, ಗೋಧಿ, ಬೆಲ್ಲ, ಎಳ್ಳು ಇತ್ಯಾದಿಗಳನ್ನು ವಸ್ತುಗಳನ್ನು ದಾನ ಮಾಡಿದರೆ ಸೂರ್ಯ ದೇವನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.
ಇದನ್ನೂ ಓದಿ: ಶ್ರಾವಣ ಮಾಸದ ಮಹತ್ವ: ಶ್ರಾವಣದಲ್ಲಿ ಪ್ರತಿನಿತ್ಯದ ಪೂಜೆ ಹೀಗಿರಲಿ, ವಿಷಕಂಠನಾದ ಶಿವನ ಮಹಾಮಹಿಮೆ ತಿಳಿಯೋಣ
ಸಂಕ್ರಾಂತಿ ಹಬ್ಬವು ಸೂರ್ಯ ದೇವರಿಗೆ ಸಂಬಂಧಿಸಿದ್ದಾಗಿದ್ದು, ಅನೇಕರು ದೇವಾಲಯಕ್ಕೆ ಹೋಗಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಸಿಂಹ ಸಂಕ್ರಾಂತಿಯಿಂದ ನಿಜ ಶ್ರಾವಣ ಮಾಸವು ಆರಂಭವಾಗುತ್ತದೆ. ಈ ದಿನದಂದು ಭಗವಾನ್ ವಿಷ್ಣು ಮತ್ತು ನರಸಿಂಹ ದೇವರನ್ನು ಶುದ್ಧವಾದ ಮನಸ್ಸಿನಿಂದ ಪೂಜಿಸಿದರೆ ಪಾಪ ಕರ್ಮಗಳಿಂದ ಮುಕ್ತಿ ಸಿಗುತ್ತದೆ. ಅದಲ್ಲದೇ, ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಗಂಭೀರ ರೋಗಗಳು ದೂರವಾಗಿ, ವ್ಯಕ್ತಿಯು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ. ಈ ದಿನದಂದು ಹಸುವಿನ ತುಪ್ಪವನ್ನು ಸೇವನೆ ಮಾಡುವುದರಿಂದ ರಾಹು-ಕೇತುಗಳಿಂದಾಗುವ ದುಷ್ಪರಿಣಾಮಗಳು ದೂರವಾಗಿ ಬುದ್ಧಿವಂತಿಕೆ ಹಾಗೂ ಶಕ್ತಿಯೂ ಹೆಚ್ಚಾಗುತ್ತದೆ ಎನ್ನಲಾಗಿದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Mon, 12 August 24