Significance of Shravana Masa: ಶ್ರಾವಣ ಮಾಸದ ಮಹತ್ವ: ಶ್ರಾವಣದಲ್ಲಿ ಪ್ರತಿನಿತ್ಯದ ಪೂಜೆ ಹೀಗಿರಲಿ, ವಿಷಕಂಠನಾದ ಶಿವನ ಮಹಾಮಹಿಮೆ ತಿಳಿಯೋಣ

ಶ್ರಾವಣ ಸೋಮವಾರದ ಉಪವಾಸದ ಉಪಯೋಗ: ಭಕ್ತರಿಗೆ ಆಧ್ಯಾತ್ಮಿಕ ಆಶೀರ್ವಾದವು ಲಭ್ಯವಾಗುತ್ತದೆ. ವ್ಯಕ್ತಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇಚ್ಛಾಶಕ್ತಿಯನ್ನು ಮತ್ತು ಸ್ಮರಣಾಶಕ್ತಿಯನ್ನು ಹೆಚ್ಚಿಸುತ್ತದೆ. ಶ್ರಾವಣ ಸೋಮವಾರದಂದು ಮದುವೆಯಾಗದ ಕನ್ಯೆಯರು ಉಪವಾಸ ವ್ರತವನ್ನು ಕೈಗೊಂಡರೆ ಉತ್ತಮ ಪತಿಯನ್ನು ಪಡೆಯುತ್ತಾರೆ. ಶ್ರಾವಣ ಸೋಮವಾರದ ಉಪವಾಸ ವ್ರತವು ನಕಾರಾತ್ಮಕ ಶಕ್ತಿಗಳನ್ನು ದೂರಾಗಿಸುತ್ತದೆ.

Significance of Shravana Masa: ಶ್ರಾವಣ ಮಾಸದ ಮಹತ್ವ: ಶ್ರಾವಣದಲ್ಲಿ ಪ್ರತಿನಿತ್ಯದ ಪೂಜೆ ಹೀಗಿರಲಿ, ವಿಷಕಂಠನಾದ ಶಿವನ ಮಹಾಮಹಿಮೆ ತಿಳಿಯೋಣ
ಶ್ರಾವಣ ಮಾಸದ ಮಹತ್ವ: ಶ್ರಾವಣದಲ್ಲಿ ಪ್ರತಿನಿತ್ಯದ ಪೂಜೆ ಹೀಗಿರಲಿ
Follow us
ಸಾಧು ಶ್ರೀನಾಥ್​
|

Updated on: Aug 12, 2024 | 6:17 AM

Significance of Shravana Masa: ಮಾಸಗಳಲ್ಲೇ ಶ್ರಾವಣ ಮಾಸವು ಅತ್ಯಂತ ಪ್ರಮುಖ ಮಾಸವಾಗಿದೆ. ಈ ತಿಂಗಳಲ್ಲಿ ಶ್ರಾವಣ ಶಿವರಾತ್ರಿ ಪ್ರಮುಖವಾದುದಾಗಿದೆ. ಶ್ರಾವಣದಲ್ಲಿ ಶಿವನನ್ನು ಆರಾಧಿಸಿದರೆ ಶುಭ ಫಲವು ನಮ್ಮದಾಗುತ್ತದೆ. ಶಿವನ ಆರಾಧನೆಯು ವ್ಯಕ್ತಿಯ ಮನಸ್ಸನ್ನು, ಇಂದ್ರೀಯವನ್ನು, ದೇಹವನ್ನು ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ. ಅನೇಕ ಧರ್ಮಗ್ರಂಥಗಳಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಹೇಳಲಾಗಿದೆ. ಶ್ರಾವಣ ತಿಂಗಳಲ್ಲಿ ಶಿವ ಭಕ್ತರು ಕಠಿಣ ಉಪವಾಸವನ್ನು ಮತ್ತು ಪ್ರಾರ್ಥನೆಯನ್ನು ಮಾಡುತ್ತಾರೆ.

ಶ್ರಾವಣ ಮಾಸ ಅತ್ಯಂತ ಪ್ರಮುಖವಾದುದ್ದು ಯಾಕೆಂದರೆ, ದೇವರುಗಳ ಮತ್ತು ಅಸುರರ ನಡುವೆ ನಡೆದ ಸಮುದ್ರ ಮಂಥನ ಸಂದರ್ಭದಲ್ಲಿ ಹೊರಹೊಮ್ಮಿದ ಹಾಲಾಹಲವನ್ನು ಶಿವನು ಸೇವಿಸಿದ ಸಮಯವಿದು. ಮಂಥನದ ಸಮಯದಲ್ಲಿ ಸುಮಾರು 14 ವಿವಿಧ ರತ್ನಗಳು ಹೊರಹೊಮ್ಮುತ್ತದೆ. ಅದರಲ್ಲಿ ಹಾಲಾಹಲ ಎನ್ನುವ ಕಾರ್ಕೋಟಕ ವಿಷವೂ ಕೂಡ ಒಂದು. ಹಾಲಾಹಲ ವಿಷವು ಹೊರಹೊಮ್ಮುತ್ತಿದ್ದಂತೆ ಬ್ರಹ್ಮಾಂಡದಲ್ಲಿ ಅಲ್ಲೋಲ ಕಲ್ಲೋಲವಾಗಲಾರಂಭಿಸಿತು. ಆಗ ಶಿವನು ಬ್ರಹ್ಮಾಂಡವನ್ನು ರಕ್ಷಿಸಲು ವಿಷವನ್ನು ಸೇವಿಸುತ್ತಾನೆ.

ಇದನ್ನು ಗಮನಿಸಿದ ಪಾರ್ವತಿಯು ಓಡಿ ಬಂದು ತನ್ನ ಪತಿಯ ಗಂಟಲನ್ನು ಬಿಗಿ ಹಿಡಿಯುತ್ತಾಳೆ. ಆಗ ವಿಷವು ಶಿವನ ಕಂಠದಲ್ಲೇ ಉಳಿದುಕೊಳ್ಳುತ್ತದೆ. ಅಂದಿನಿಂದ ಶಿವನನ್ನು ನೀಲಕಂಠ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಮನೆಯಲ್ಲಾಗಿರಬಹುದು, ದೇವಾಲಯಗಳಲ್ಲಾಗಿರಬಹುದು ಪೂಜೆ, ವೃತ, ಭಜನೆಗಳಂತಹ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಈ ತಿಂಗಳಲ್ಲಿ ಪ್ರತಿನಿತ್ಯವಾಗದಿದ್ದರೂ ಒಮ್ಮೆಯಾದರೂ ಶಿವನ ದೇವಾಲಯಕ್ಕೆ ಭೇಟಿ ನೀಡಬೇಕು. ಈ ತಿಂಗಳ ಪ್ರತಿದಿನವೂ ಧಾರ್ಮಿಕ ಮಹತ್ವವನ್ನು ಹೊಂದಿದೆ.

Also Read: Tulsidas Jayanti 2024 – ಇಂದು ತುಳಸಿದಾಸ ಜಯಂತಿ -ಸಂಸ್ಕೃತದಲ್ಲಿದ್ದ ರಾಮಾಯಣವನ್ನು ಜಗತ್ತಿಗೆ ತಲುಪಿಸಬೇಕೆಂಬ ಕಾರಣಕ್ಕಾಗಿ ಜನಿಸಿದವರೇ ತುಳಸಿದಾಸರು!

ಶ್ರಾವಣದಲ್ಲಿ ಪ್ರತಿನಿತ್ಯದ ಪೂಜೆ ಹೀಗಿರಲಿ:

ಸೋಮವಾರ: ಸೋಮವಾರದಂದು ಪರಶಿವನನ್ನು ತಪ್ಪದೇ ಆರಾಧಿಸಬೇಕು. ಮಂಗಳವಾರ: ಮನೆಯಲ್ಲಿನ ಮಹಿಳೆಯರು ಕುಟುಂಬದ ಸದಸ್ಯರ ಉತ್ತಮ ಆರೋಗ್ಯಕ್ಕಾಗಿ ಗೌರಿ ಪೂಜೆಯನ್ನು ಮಾಡಬೇಕು. ಬುಧವಾರ: ಭಗವಾನ್‌ ವಿಷ್ಣು ಅಥವಾ ಕೃಷ್ಣನ ಇನ್ನೊಂದು ಅವತಾರವಾದ ವಿಠಲನನ್ನು ಈ ದಿನ ಆರಾಧಿಸಬೇಕು. ಗುರುವಾರ: ಶ್ರಾವಣ ಮಾಸದ ಗುರುವಾರದಂದು ಬುಧ ಮತ್ತು ಗುರುವನ್ನು ಪೂಜಿಸಬೇಕು. ಶುಕ್ರವಾರ: ಈ ದಿನ ಲಕ್ಷ್ಮಿ ಮತ್ತು ತುಳಸಿಯನ್ನು ಭಕ್ತಿಯಿಂದ ಪೂಜಿಸಿ. ಶನಿವಾರ: ಶ್ರಾವಣ ಮಾಸದ ಈ ದಿನವನ್ನು ಶ್ರಾವಣ ಶನಿವಾರ ಅಥವಾ ಸಂಪತ್‌ ಶನಿವಾರವೆಂದು ಕರೆಯಲಾಗುತ್ತದೆ. ಈ ದಿನ ಸಂಪತ್ತನ್ನು ಪಡೆದುಕೊಳ್ಳಲು ಶನೇಶ್ವರನನ್ನು ಆರಾಧಿಸಬೇಕು.

Also Read: ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ 200 ವರ್ಷವಾಯ್ತು, ಹೇಗಿತ್ತು ಅಂದಿನ ಕಿತ್ತೂರು ಸಂಸ್ಥಾನದ ಪರಿಸ್ಥಿತಿ?

ಶ್ರಾವಣ ಮಾಸದಲ್ಲಿ ಪಠಿಸಬೇಕಾದ ಮಂತ್ರ:

ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮಾಲೆಯನ್ನು ಹಿಡಿದು ಶಿವ ಮಂತ್ರಗಳನ್ನು ಜಪಿಸಬೇಕು. 108 ಬಾರಿ ಈ ಮಂತ್ರಗಳನ್ನು ಅಥವಾ ಇದಕ್ಕೂ ಹೆಚ್ಚು ಬಾರಿ ಈ ಕೆಳಗಿನ ಮಂತ್ರಗಳನ್ನು ಪಠಿಸಬೇಕು. ಶ್ರಾವಣ ಮಾಸದಲ್ಲಿ ಬೆಳಗ್ಗೆ ಅಥವಾ ಸಂಜೆ ಈ ಕೆಳಗಿನ ಮಂತ್ರಗಳನ್ನು ಪಠಿಸಿ. ಅಥವಾ ದಿನನಿತ್ಯ ಕೂಡ ಮಂತ್ರವನ್ನು ಪಠಿಸಬಹುದು.

ಓಂ ನಮಃ ಶಿವಾಯ || ಮಹಾಮೃತ್ಯುಂಜಯ ಮಂತ್ರ: ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ || ರುದ್ರ ಗಾಯತ್ರಿ ಮಂತ್ರ: ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹೀ ತನ್ನೋ ರುದ್ರ ಪ್ರಚೋದಯಾತ್‌ ||

ಶ್ರಾವಣ ಸೋಮವಾರದ ಉಪವಾಸ:

Also Read: ಸ್ಥಳ ಮಹಾತ್ಮೆ: ನವ ವಿವಾಹಿತರು ಶಿವ-ಪಾರ್ವತಿ ಸಪ್ತಪದಿ ತುಳಿದ ಸ್ಥಳಕ್ಕೆ ಇಂದಿಗೂ ಭೇಟಿ ನೀಡುತ್ತಾರೆ! ಯಾಕೆ ಗೊತ್ತಾ?

ಶಿವ ಪುರಾಣದಲ್ಲೂ ಕೂಡ ಶ್ರಾವಣ ಮಾಸದ ಉಪವಾಸವನ್ನು ಉಲ್ಲೇಖಿಸಲಾಗಿದೆ. ಶಿವ ಪುರಾಣದ ಪ್ರಕಾರ, ಶ್ರಾವಣ ಮಾಸದಲ್ಲಿ ಉಪವಾಸವನ್ನು ಆಚರಿಸುವುದರಿಂದ ನಿಮ್ಮೆಲ್ಲಾ ಆಸೆಗಳು ಈಡೇರುತ್ತದೆ. ಮತ್ತು ಶಿವನ ಆಶೀರ್ವಾದವು ನಿಮ್ಮದಾಗುತ್ತದೆ. ಶಿವ ಭಕ್ತರಿಗೆ ಶ್ರಾವಣ ಸೋಮವಾರ ಪ್ರಮುಖವಾದ ದಿನವಾಗಿದೆ. ಶ್ರಾವಣ ಸೋಮವಾರದ ಉಪವಾಸದಂದು ಶಿವ ಭಕ್ತರು ನೀರನ್ನು ಹೊರತುಪಡಿಸಿ ಬೇರಾವ ಆಹಾರ ಪದಾರ್ಥಗಳನ್ನು ಸೇವಿಸುವುದಿಲ್ಲ. ಸೂರ್ಯಾಸ್ತದ ನಂತರ ಆ ವ್ಯಕ್ತಿಯು ಬೆಳ್ಳುಳ್ಳಿ ಮತ್ತು ಈರುಳ್ಳಿ ರಹಿತ ಆಹಾರವನ್ನು ಸೇವಿಸುವುದರ ಮೂಲಕ ಉಪವಾಸವನ್ನು ತೆಗೆದು ಹಾಕಲಾಗುತ್ತದೆ. ಇನ್ನು ಕೆಲವರು ಶ್ರಾವಣ ಸೋಮವಾರದ ಉಪವಾಸದಲ್ಲಿ ಹಣ್ಣುಗಳನ್ನು ಸೇವಿಸುತ್ತಾರೆ ಹಾಗೂ ರಾತ್ರಿ ಊಟವನ್ನು ಮಾಡುತ್ತಾರೆ. ಇನ್ನು ಕೆಲವರು ಉಪವಾಸದೊಂದಿಗೆ ಮೌನ ವ್ರತವನ್ನು ಕೂಡ ಮಾಡುತ್ತಾರೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ