ಬಿಳಿ ಎಕ್ಕದ ಗಿಡ ನಿಮ್ಮ ಮನೆ ಹತ್ರ ಇದ್ರೆ ಅದೃಷ್ಟ!
ಬಿಳಿ ಎಕ್ಕವು ಸಾಮಾನ್ಯ ಎಕ್ಕಕ್ಕಿಂತ ಸ್ವಲ್ಪ ವಿಭಿನ್ನ. ಇದರ ಎಲೆ ಆಲದ ಮರದ ಎಲೆಗಳಂತೆ ದಪ್ಪವಾಗಿರುತ್ತದೆ. ಆ ಎಲೆಗಳು ಹಣ್ಣಾಗಿ ಉದುರುವ ಸಮಯದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಈ ಗಿಡದ ರೆಂಬೆಗಳು, ಎಲೆಗಳು ಹಾಗೂ ಹೂವುಗಳನ್ನು ಮುರಿದಾಗ ಬಿಳಿ ಬಣ್ಣದ ಹಾಲು ಬರುತ್ತದೆ. ಆ ಹಾಲು ಮನುಷ್ಯರಿಗೆ ಅತ್ಯಂತ ವಿಷಕಾರಿ. ಅದು ಕಣ್ಣು, ಮೂಗು ಸೇರಿದಂತೆ ಯಾವುದೇ ಸೂಕ್ಷ್ಮ ಅಂಗಗಳಿಗೆ ತಾಗಿದರೆ ಅಲ್ಲಿಯೇ ಸುಡುತ್ತದೆ.
ಹಿಂದೂ ಧರ್ಮದಲ್ಲಿ ಕೆಲವು ಗಿಡ, ಮರಗಳಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಗಿಡ, ಮರಗಳನ್ನು ದೇವರ ಪ್ರತಿ ರೂಪ ಎಂದು ಸಹ ಭಾವಿಸಲಾಗಿದೆ. ವಿಶೇಷವಾದ ಸಸ್ಯಗಳು ಧಾರ್ಮಿಕ ಹಿನ್ನೆಲೆಯ ಜೊತೆಗೆ ವೈದ್ಯಕೀಯ ಶಾಸ್ತ್ರದಲ್ಲೂ ಉತ್ತಮ ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಅಂತಹ ಒಂದು ಶ್ರೇಷ್ಠ ಶಕ್ತಿಯನ್ನು ಹೊಂದಿರುವ ಸಸ್ಯಗಳಲ್ಲಿ ಎಕ್ಕದ ಗಿಡವೂ ಒಂದು. ಇದರಲ್ಲಿ ಎರಡು ಬಗೆಯ ಎಕ್ಕವನ್ನು ಕಾಣಬಹುದು. ಅದರಲ್ಲಿ ಬಿಳಿ ಎಕ್ಕವು ಧಾರ್ಮಿಕವಾಗಿ ಅತ್ಯಂತ ಪಾವಿತ್ರ್ಯತೆಯನ್ನು ಪಡೆದುಕೊಂಡಿದೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ಬಿಳಿ ಎಕ್ಕದ ಗಿಡದ ಮಹತ್ವ ಹಾಗೂ ಬಿಳಿ ಎಕ್ಕದ ಗಿಡ ಮನೆ ಹತ್ರ ಇದ್ರೆ ಏನು ಲಾಭ ಎಂಬ ಬಗ್ಗೆ ವಿವರಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Published on: Aug 12, 2024 07:02 AM
Latest Videos