ಹೆದ್ದಾರಿ ಬಳಿ ಒಡೆದೋಯ್ತು ಪೈಪ್‌ಲೈನ್; ಆಗಸದೆತ್ತರಕ್ಕೆ ಚಿಮ್ಮಿದ ನೀರು
ಜಗಳೂರು ತಾಲ್ಲೂಕಿನ 57 ಕೆರೆಗಳಿಗೆ ನೀರು ಹರಿಸುವ ಯೋಜನೆ ಇದಾಗಿದ್ದು, ಇಲ್ಲಿನ ಪಂಪ್ ಹೌಸ್ ಬಳಿಯಿಂದ ನೀರು ಸರಬರಾಜಿನ ಪೈಪ್ ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಇದರಿಂದ ಹರಪನಹಳ್ಳಿ ಹರಿಹರ ಹೆದ್ದಾರಿಯಲ್ಲಿ ಹಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ದಾವಣಗೆರೆ, ಆ.11: ಪೈಪ್‌ಲೈನ್ ಒಡೆದು ಆಗಸದೆತ್ತರಕ್ಕೆ ನೀರು ಚಿಮ್ಮಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ದೀಟೂರು ಬಳಿ ನಡೆದಿದೆ. ಜಗಳೂರು ತಾಲ್ಲೂಕಿನ 57 ಕೆರೆಗಳಿಗೆ ನೀರು ಹರಿಸುವ ಯೋಜನೆ ಇದಾಗಿದ್ದು, ಇಲ್ಲಿನ ಪಂಪ್ ಹೌಸ್ ಬಳಿಯಿಂದ ನೀರು ಸರಬರಾಜು ಆಗುವ ಪೈಪ್ ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಇನ್ನು ಇದರಿಂದ ಹರಪನಹಳ್ಳಿ ಹರಿಹರ ಹೆದ್ದಾರಿಯಲ್ಲಿ ಹಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ತುಂಗಭದ್ರ ನದಿಯಿಂದ ಜಗಳೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 11, 2024 08:43 PM
Latest Videos