- Kannada News Photo gallery Ramesh Aravind Says he is very happy after he get love from Karnataka People
‘ನಿಮ್ಮ ಪ್ರೀತಿಗೆ ಸೋತೆ ಹೋದೇ.. ಸೋತೇ ಹೋದೆ..’ ಎಂದ ರಮೇಶ್ ಅರವಿಂದ್
ರಮೇಶ್ ಅವರವಿಂದ್ ಅವರ ವೃತ್ತಿ ಜೀವನಕ್ಕೆ ಈಗ 40 ವರ್ಷ ತುಂಬುತ್ತಾ ಬಂದಿದೆ. ಈ ಅವಧಿಯಲ್ಲಿ ಅವರು ಸಾಕಷ್ಟು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದರಿಂದ ಅವರಿಗೆ ಅಪಾರ ಮನ್ನಣೆ ಹಾಗೂ ಪ್ರೀತಿ ಸಿಕ್ಕಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
Updated on: Jun 14, 2025 | 11:39 AM

ರಮೇಶ್ ಅರವಿಂದ್ ಅವರು 39 ವರ್ಷಗಳಿಂದ ಬಣ್ಣದ ಲೋಕದಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಫ್ಯಾನ್ಸ್ ಕಡೆಯಿಂದ ವಿಶ್ಗಳು ಬರುತ್ತಿವೆ. ಅವರು ಇಷ್ಟು ವರ್ಷಗಳಲ್ಲಿ ನಟನಾಗಿ, ನಿರೂಪಕನಾಗಿ, ಸ್ಫೂರ್ತಿದಾಯಕ ಮಾತುಗಾರನಾಗಿ ಅವರು ಇಷ್ಟ ಆಗಿದ್ದಾರೆ.

ರಮೇಶ್ ಅರವಿಂದ್ ಅವರು ನಟನೆಯ ಜೊತೆಗೆ ನಿರೂಪಕನಾಗಿ ಹೆಚ್ಚು ಇಷ್ಟ ಆಗುತ್ತಾರೆ. ಅವರು ಜಡ್ಜ್ ಆಗಿಯೂ ಗಮನ ಸೆಳೆದಿದ್ದಾರೆ. ಈ ಮೊದಲು ‘ಮಹಾನಟಿ’ ಶೋಗೆ ಜಡ್ಜ್ ಆಗಿದ್ದರು. ಈಗ ಅವರಿಗೆ ಮತ್ತೆ ಜಡ್ಜ್ ಆಗೋ ಅವಕಾಶ ಸಿಕ್ಕಿದೆ.

ರಮೇಶ್ ಅರವಿಂದ್ ಅವರು ‘ಮಹಾನಟಿ ಸೀಸನ್ 2’ಗೆ ಜಡ್ಜ್ ಆಗಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರೋ ಅವರು, ‘ಮೂರು ದಶಕಗಳಿಂದ ನಿಮ್ಮ ಪ್ರೀತಿಗೆ ಸೋತೆ ಹೋದೆ ಸೋತೆ ಹೋದೆ. ಈಗ ಮತ್ತೊಂದು ವೇದಿಕೆಯಲ್ಲಿ ಸಿಗುವ ಅವಕಾಶ’ ಎಂದು ಅವರು ಬರೆದುಕೊಂಡಿದ್ದಾರೆ.

ರಮೇಶ್ ಅರವಿಂದ್ ಜೊತೆಗೆ ಹಿರಿಯ ನಟಿ ಪ್ರೇಮಾ, ಯುವ ನಟಿ ನಿಶ್ವಿಕಾ ನಾಯ್ಡು ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ಜಡ್ಜ್ ಸ್ಥಾನದಲ್ಲಿ ಇರುತ್ತಾರೆ. ಇಂದಿನಿಂದ (ಜೂನ್ 14) ಪ್ರತಿ ಶನಿವಾರ ಹಾಗೂ ಭಾನುವಾರ ‘ಮಹಾನಟಿ’ ಪ್ರಸಾರ ಕಾಣಲಿದೆ.

ರಮೇಶ್ ಅರವಿಂದ್ ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಅವರು ‘ದೈಜಿ’ ಹೆಸರಿನ ಚಿತ್ರ ಮಾಡುತ್ತಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ.




