ಉಕ್ಕಿ ಹರಿಯುತ್ತಿರುವ ಬೆಣ್ಣೆಹಳ್ಳ, ಬಿತ್ತಿದ ಜಮೀನುಗಳು ಹಾಳಾಗಿ ರೈತರು ಕಂಗಾಲು, ನೆರವಿಗೆ ಬಾರದ ಸರ್ಕಾರ
ಧಾರವಾಡ ಜಿಲ್ಲೆಯಲ್ಲಿ ಕಳೆದ 7-8 ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಬೆಣ್ಣೆಹಳ್ಳ ಉಕ್ಕಿ ಹರಿಯತ್ತಿದೆ ಮತ್ತು ರೈತರು ಹೇಳುವ ಹಾಗೆ ಪ್ರತಿ ಮಳೆಗಾಲದಲ್ಲಿ ರೈತರು ಇಂಥ ನಿರಾಶಾದಾಯಕ, ಅಸಹಾಯಕ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸರ್ಕಾರದಿಂದ ಇವರಿಗೆ ಯಾವ ನೆರವೂ ಸಿಗುತ್ತಿಲ್ಲ. ಅಧಿಕಾರಿಗಳು ಪ್ರತಿವರ್ಷ ಬಂದು ಬರೆದುಕೊಂಡು ಹೋಗುತ್ತಾರಂತೆ, ಆದರೆ ನೆರವು ಮಾತ್ರ ಬರುತ್ತಿಲ್ಲ.
ಧಾರವಾಡ, ಜೂನ್ 14: ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇಂಗನಳ್ಳಿ ಮತ್ತು ಸುತ್ತಮುತ್ತಲಿನ ರೈತರು ಪ್ರತಿವರ್ಷ ಬೆಣ್ಣೆಹಳ್ಳದಲ್ಲಿ ಉಂಟಾಗುವ ಪ್ರವಾಹದಿಂದ ಬೇಸತ್ತು ಹೋಗಿದ್ದಾರೆ. ರೈತರ ಜಮೀನುಗಳಿಗೆ (farming lands) ಹಳ್ಳದ ನೀರು ನುಗ್ಗಿ ಬಿತ್ತಿದ ಬೀಜಗಳು ಮೊಳಕೆಯೊಡೆಯುತ್ತಿದ್ದಂತೆಯೇ ಸರ್ವನಾಶ ಆಗುತ್ತಿವೆ. ನಮ್ಮ ಹುಬ್ಬಳ್ಳಿ ವರದಿಗಾರ ರೈತರೊಂದಿಗೆ ಮಾತಾಡಿದಾಗ ಅವರು ಹತಾಶೆ ನೋವು ಮತ್ತು ಅಸಹಾಯಕತೆ ಜೊತೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇಲ್ಲಿಯ ರೈತರು ಹತ್ತಿ ಮತ್ತು ಹೆಸರನ್ನು ಬಿತ್ತಿದ್ದಾರೆ ಅದರೆ ಬೆಣ್ಣೆಹಳ್ಳದ ಪ್ರವಾಹದಿಂದ ಎಲ್ಲ ಕೊಚ್ಚಿಕೊಂಡು ಹೋಗಿವೆ. ಮಂಡ್ಯ ಜಿಲ್ಲೆ ಮತ್ತು ಬೆಂಗಳೂರನ್ನೇ ಕರ್ನಾಟಕ ಅಂದುಕೊಂಡಿರುವ ಕೃಷಿ ಸಚಿವ ಎನ್ ಚಲುವರಾಯಸ್ವಾಮಿಗೆ ಉತ್ತರ ಮತ್ತು ಉಳಿದ ಕರ್ನಾಟಕದ ಬಗ್ಗೆ ಯಾವಾಗ ಜ್ಞಾನೋದಯವಾಗುತ್ತದೋ?
ಇದನ್ನೂ ಓದಿ: Karnataka Budget 2024: ಬಜೆಟ್‌ನಲ್ಲಿ ನಿಮ್ಮ ಜಿಲ್ಲೆಗೆ ಸಿದ್ದರಾಮಯ್ಯ ಏನೇನು ಕೊಟ್ಟಿದ್ದಾರೆ? ಇಲ್ಲಿದೆ ವಿವರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ